AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಚ ಪಡೆಯುವವರಿಗೆ ಶ್ರೀರಾಮುಲು ಬೆಂಬಲ ಕೊಟ್ಟರೆ, ಗೊತ್ತಿದ್ದೂ ಮಾಡ್ತಿದ್ದಾನೆಂದು ಅರ್ಥ: ಸಿದ್ದರಾಮಯ್ಯ

ಲಂಚ ತೆಗೆದುಕೊಂಡು ಕೆಲಸ ಮಾಡುತ್ತಾರೆ ಅಂದ್ರೆ ಹೇಗೆ? ಲಂಚ ಪಡೆದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಲಂಚ ಪಡೆಯುವವರಿಗೆ ಶ್ರೀರಾಮುಲು ಬೆಂಬಲ ಕೊಟ್ಟರೆ, ಗೊತ್ತಿದ್ದೂ ಮಾಡ್ತಿದ್ದಾನೆಂದು ಅರ್ಥ: ಸಿದ್ದರಾಮಯ್ಯ
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
TV9 Web
| Edited By: |

Updated on:Jul 02, 2021 | 5:06 PM

Share

ಬೆಂಗಳೂರು: ಸಚಿವ ಶ್ರೀರಾಮುಲು ಆಪ್ತ ಕಾರ್ಯದರ್ಶಿ ವಿರುದ್ಧ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಲಂಚ ಯಾರೇ ಪಡೆದರೂ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಲಂಚ ಪಡೆಯುವವರಿಗೆ ಶ್ರೀರಾಮುಲು ಬೆಂಬಲ ಕೊಟ್ಟರೆ ಶ್ರೀರಾಮುಲುಗೆ ಗೊತ್ತಿದ್ದೂ ಮಾಡ್ತಿದ್ದಾನೆಂದು ಅರ್ಥ ಅಲ್ವಾ? ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಲಂಚ ತೆಗೆದುಕೊಂಡು ಕೆಲಸ ಮಾಡುತ್ತಾರೆ ಅಂದ್ರೆ ಹೇಗೆ? ಲಂಚ ಪಡೆದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ರಾಮುಲು ಪಿಎ ರಾಜಣ್ಣ3 ಕೋಟಿ ಹಣಕ್ಕೆ ಡೀಲ್​ ಕುದುರಿಸಿದ್ದರು. ಈ ಬಗ್ಗೆ, 3 ಸ್ಫೋಟಕ ಆಡಿಯೋ ಆಧರಿಸಿ ಸಿಸಿಬಿಯಿಂದ ತನಿಖೆ ನಡೆಸಲಾಗುತ್ತಿದೆ. ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಶ್ರೀರಾಮುಲು ಪಿಎ ರಾಜಣ್ಣ ಮಾತನಾಡಿರುವ 3 ಆಡಿಯೋ ಬಿಡುಗಡೆಯಾಗಿದೆ. ಈ ಬಗ್ಗೆ ವಿಪಕ್ಷ ನಾಯಕರು ಟೀಕೆ ಮಾಡಿದ್ದಾರೆ.

ಆಪ್ತರ ವ್ಯವಹಾರಕ್ಕೆ ನಾನು ಮಧ್ಯಪ್ರವೇಶ ಮಾಡುವುದಿಲ್ಲ. ಇವರ ವಿಚಾರ ಮಾತಾಡೋದು ನನ್ನ ಲೆವೆಲ್ ಅಲ್ಲ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ರಾಮುಲು, ವಿಜಯೇಂದ್ರ ಬಗ್ಗೆ ಹೇಳಿಕೆ ನನ್ನ ಲೆವೆಲ್ ಅಲ್ಲ. ಅದರ ಬಗ್ಗೆ ನಾನು ಕಮೆಂಟ್ ಕೂಡಾ ಮಾಡುವುದಿಲ್ಲ. ಇದರಿಂದ ಅವ್ರ ಸರ್ಕಾರ ಫೌಂಡೇಷನ್ ಏನೆಂದು ಗೊತ್ತಾಗ್ತಿದೆ ಎಂದು ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಸಚಿವ ಶ್ರೀರಾಮುಲು ಪಿಎ ವಿರುದ್ಧ ವಂಚನೆ ಆರೋಪ ಪ್ರಕರಣ ಆರೋಪಕ್ಕೆ ಸಂಬಂಧಿಸಿ, ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಕುಟುಕಿದ್ದಾರೆ. ಸರ್ಕಾರ ಹೇಗೆ ನಡೆಸ್ತಿದ್ದಾರೆ ಎಂಬುದಕ್ಕೆ ಇದು ಉದಾಹರಣೆ. ರಾಜ್ಯದ ಜನರು ಪ್ರತಿಯೊಂದು ವಿಚಾರವನ್ನೂ ಗಮನಿಸ್ತಿದ್ದಾರೆ. ಸರಿಯಾದ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ತಾರೆ ಎಂದು ಅವರು ಹೇಳಿದ್ದಾರೆ.

2008ರಲ್ಲಿ ಇವರ ಅಧಿಕಾರದ ವೇಳೆ ಇಂಥದ್ದೇ ಸಮಸ್ಯೆ ಇತ್ತು. ಮತ್ತೆ ಸ್ಪಷ್ಟ ಬಹುಮತ ಇಲ್ಲದಿದ್ದರೂ ಅಧಿಕಾರಕ್ಕೆ ಬಂದಿದ್ದಾರೆ. ಅಧಿಕಾರಕ್ಕೆ ಬಂದು ಜನರನ್ನು ವಂಚಿಸುವ ಕೆಲಸ ಮಾಡ್ತಿದ್ದಾರೆ. ಸರ್ಕಾರದ ಬೆಂಬಲವಿಲ್ಲದೆ ಈ ರೀತಿ ಮಾಡಲು ಹೇಗೆ ಸಾಧ್ಯ? ಇದಕ್ಕೆಲ್ಲಾ ರಾಜ್ಯ ಸರ್ಕಾರದ ಬೆಂಬಲ ಬೇಕೇ ಬೇಕಲ್ವಾ? ಏಕಾಏಕಿ ಇಂಥದ್ದನ್ನ ಮಾಡಲು ಹೇಗೆ ಧೈರ್ಯ ಬರುತ್ತದೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಸಿಸಿಬಿ ವಿಚಾರಣೆ ಬಳಿಕ ರಾಮುಲು ಪಿಎ ರಾಜು ಫೇಸ್​ಬುಕ್​ನಲ್ಲಿ ಸ್ಪಷ್ಟೀಕರಣ: ತಪ್ಪು ಗ್ರಹಿಕೆಯಿಂದ ವಿಜಯೇಂದ್ರ ದೂರು ಸಲ್ಲಿಸಿದ್ದಾರೆ

ಬಿ ವೈ ವಿಜಯೇಂದ್ರಗೆ ಹಣ ತಲುಪಿಸಬೇಕು ಎಂದು ಶ್ರೀರಾಮುಲು ಆಪ್ತ ರಾಜಣ್ಣ ಡೀಲ್; 3 ಸ್ಫೋಟಕ ಆಡಿಯೋ ಆಧರಿಸಿ ತನಿಖೆ

Published On - 4:55 pm, Fri, 2 July 21