ಬಿ ವೈ ವಿಜಯೇಂದ್ರಗೆ ಹಣ ತಲುಪಿಸಬೇಕು ಎಂದು ಶ್ರೀರಾಮುಲು ಆಪ್ತ ರಾಜಣ್ಣ ಡೀಲ್; 3 ಸ್ಫೋಟಕ ಆಡಿಯೋ ಆಧರಿಸಿ ತನಿಖೆ

ರಾಮುಲು ಪಿಎ ರಾಜಣ್ಣ3 ಕೋಟಿ ಹಣಕ್ಕೆ ಡೀಲ್​ ಕುದುರಿಸಿದ್ದರು. ಈ ಬಗ್ಗೆ, 3 ಸ್ಫೋಟಕ ಆಡಿಯೋ ಆಧರಿಸಿ ಸಿಸಿಬಿಯಿಂದ ತನಿಖೆ ನಡೆಸಲಾಗುತ್ತಿದೆ. ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಶ್ರೀರಾಮುಲು ಪಿಎ ರಾಜಣ್ಣ ಮಾತನಾಡಿರುವ 3 ಆಡಿಯೋ ಬಿಡುಗಡೆಯಾಗಿದೆ.

ಬಿ ವೈ ವಿಜಯೇಂದ್ರಗೆ ಹಣ ತಲುಪಿಸಬೇಕು ಎಂದು ಶ್ರೀರಾಮುಲು ಆಪ್ತ ರಾಜಣ್ಣ ಡೀಲ್; 3 ಸ್ಫೋಟಕ ಆಡಿಯೋ ಆಧರಿಸಿ ತನಿಖೆ
ವಿಜಯೇಂದ್ರ
Follow us
TV9 Web
| Updated By: ganapathi bhat

Updated on:Jul 02, 2021 | 4:13 PM

ಬೆಂಗಳೂರು: ಸಚಿವ ಶ್ರೀರಾಮುಲು ಆಪ್ತ ಕಾರ್ಯದರ್ಶಿ ವಿರುದ್ಧ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಹೊಸದೊಂದು ಮಾಹಿತಿ ಬಹಿರಂಗವಾಗಿದೆ. ಬಿ.ವೈ. ವಿಜಯೇಂದ್ರಗೆ ಹಣ ತಲುಪಿಸಬೇಕೆಂದು ಹೇಳಿ ಡೀಲ್ ಮಾಡಿಕೊಂಡಿರುವ ಬಗ್ಗೆ ತಿಳಿದುಬಂದಿದೆ. ಗುತ್ತಿಗೆದಾರನ ಜತೆ ಸಚಿವ ಶ್ರೀರಾಮುಲು ಆಪ್ತ ಕಾರ್ಯದರ್ಶಿ ರಾಜಣ್ಣ ಡೀಲ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ರಾಮುಲು ಪಿಎ ರಾಜಣ್ಣ3 ಕೋಟಿ ಹಣಕ್ಕೆ ಡೀಲ್​ ಕುದುರಿಸಿದ್ದರು. ಈ ಬಗ್ಗೆ, 3 ಸ್ಫೋಟಕ ಆಡಿಯೋ ಆಧರಿಸಿ ಸಿಸಿಬಿಯಿಂದ ತನಿಖೆ ನಡೆಸಲಾಗುತ್ತಿದೆ. ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಶ್ರೀರಾಮುಲು ಪಿಎ ರಾಜಣ್ಣ ಮಾತನಾಡಿರುವ 3 ಆಡಿಯೋ ಬಿಡುಗಡೆಯಾಗಿದೆ.

ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ರಾಜಣ್ಣ ಡೀಲ್ ಮಾಡಿಕೊಂಡಿದ್ದಾರೆ. ಸಚಿವ ಬಿ. ಶ್ರೀರಾಮುಲು ಆಪ್ತ ರಾಜಣ್ಣರಿಂದ ಡೀಲ್ ಮಾಡಲಾಗಿದೆ. ಯೋಜನೆಯೊಂದರ ಗುತ್ತಿಗೆದಾರನ ಜತೆ ರಾಜಣ್ಣ ಮಾತುಕತೆ ನಡೆಸಿದ್ದಾರೆ. ಈ ಬಗೆಗಿನ ಮೂರು ಆಡಿಯೋಗಳು ಬಿಡುಗಡೆಯಾಗಿದೆ.

ಮೊದಲನೆಯ ಆಡಿಯೋದಲ್ಲಿ 75 ಲಕ್ಷ ರೂಪಾಯಿಗೆ ಬೇಡಿಕೆ ಇಡಲಾಗಿದೆ. 2ನೇ ಆಡಿಯೋದಲ್ಲಿ 1 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿದೆ. 3ನೇ ಆಡಿಯೋದಲ್ಲಿ 3 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವ ಬಗ್ಗೆ ತಿಳಿದುಬಂದಿದೆ. 3 ಆಡಿಯೋಗೆ ಸಂಬಂಧಿಸಿ ರಾಜಣ್ಣ ವಾಯ್ಸ್ ಸ್ಯಾಂಪಲ್ಸ್ ಪರೀಕ್ಷೆ ನಡೆಸಲಾಗುತ್ತಿದೆ. ರಾಜಣ್ಣ ಮೊಬೈಲ್ ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಯಡಿಯೂರಪ್ಪ, ಶ್ರೀರಾಮುಲು ಪ್ರತಿಕ್ರಿಯೆ ಸಚಿವ ಶ್ರೀರಾಮುಲು ಆಪ್ತನ ವಿರುದ್ಧ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ, ಶ್ರೀರಾಮುಲು ಆಪ್ತನ ಬಂಧನ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿಲ್ಲ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಣೆ ತೋರಿದ್ದಾರೆ. ಸುದ್ದಿಗೋಷ್ಠಿ ಮುಗಿದ ಕೂಡಲೇ ಯಡಿಯೂರಪ್ಪ ತೆರಳಿದ್ದಾರೆ. ಸಚಿವ ಶ್ರೀರಾಮುಲುರನ್ನು ಸನ್ನೆ ಮಾಡಿ ಕರೆದೊಯ್ದಿದ್ದಾರೆ.

ನಾನು ಈ ಬಗ್ಗೆ ಸಿಎಂ ಜತೆ ಮಾತನಾಡಿ, ವಿವರಣೆ ನೀಡಿದ್ದೇನೆ ಎಂದು ವಿಧಾನಸೌಧದಲ್ಲಿ ಸಚಿವ ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಸಚಿವರ ಬಳಿ ಹಲವಾರು ಜನ ಬರುತ್ತಿರುತ್ತಾರೆ, ಹೋಗುತ್ತಾರೆ. ಯಾರದ್ದೋ‌ ಹೆಸರು ಹೇಳಿದರೆ ಯಾರಿಗೂ ಗೊತ್ತಾಗುವುದಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ, ಹೀಗಾಗಿ ಮಾತನಾಡಲ್ಲ ಎಂದು ತಿಳಿಸಿದ್ದಾರೆ. ರಾಜಣ್ಣ ನನ್ನ ಪಿಎ ಅಲ್ಲ, ನನಗೆ ಗೊತ್ತಿರುವ ವ್ಯಕ್ತಿ ಮಾತ್ರ ಎಂದು ವಿಧಾನಸೌಧದಲ್ಲಿ ಸಚಿವ ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಸಭೆ; ವಿಚಾರಣೆಯ ಬಳಿಕ ಶ್ರೀರಾಮುಲು ಆಪ್ತ ರಾಜಣ್ಣ ವಾಪಸ್

ವಿಜಯೇಂದ್ರ ಟ್ವೀಟ್, ಸಿಸಿಬಿ ಪೊಲೀಸರಿಗೆ ಒತ್ತಡ ಹೆಚ್ಚಳ, ರಾಜಣ್ಣ ನನ್ನ ಪಿಎ ಅಲ್ಲ ನನಗೆ ಗೊತ್ತಿರುವ ಹುಡುಗ ಅಷ್ಟೇ ಎಂದ ಸಚಿವ ರಾಮುಲು

Published On - 4:03 pm, Fri, 2 July 21

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್