Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಸಭೆ; ವಿಚಾರಣೆಯ ಬಳಿಕ ಶ್ರೀರಾಮುಲು ಆಪ್ತ ರಾಜಣ್ಣ ವಾಪಸ್

ಬೆಂಗಳೂರಿನ ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್​ನಲ್ಲಿ ಸಿಸಿಬಿ ಪೊಲೀಸರು ರಾಜಣ್ಣ ಅವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ರಾಜಣ್ಣ ವಾಯ್ಸ್ ಸ್ಯಾಂಪಲ್ಸ್ ಸಂಗ್ರಹ ಮಾಡಲಾಗಿದೆ. ರಾಜಣ್ಣ ಮಾತನಾಡಿದ್ದಾರೆಂಬ ಆಡಿಯೋ ಸಿಸಿಬಿಗೆ ಲಭ್ಯವಾಗಿರುವ ಹಿನ್ನೆಲೆ, ರಾಜಣ್ಣ ವಾಯ್ಸ್ ಸ್ಯಾಂಪಲ್ಸ್ ಎಫ್‌ಎಸ್‌ಎಲ್‌ಗೆ ರವಾನೆ ಮಾಲಾಗಿದೆ.

ಬೆಂಗಳೂರಿನಲ್ಲಿ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಸಭೆ; ವಿಚಾರಣೆಯ ಬಳಿಕ ಶ್ರೀರಾಮುಲು ಆಪ್ತ ರಾಜಣ್ಣ ವಾಪಸ್
ಸಂದೀಪ್ ಪಾಟೀಲ್ (ಸಂಗ್ರಹ ಚಿತ್ರ)
Follow us
TV9 Web
| Updated By: preethi shettigar

Updated on:Jul 02, 2021 | 2:52 PM

ಬೆಂಗಳೂರು: ಸಚಿವ ಶ್ರೀರಾಮುಲು ಪಿಎ ವಿರುದ್ಧ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಡಿಸಿಪಿ ರವಿಕುಮಾರ್, ಡಿಸಿಪಿ ಬಸಪ್ಪ ಅಂಗಡಿ, ಎಸಿಪಿ ನಾಗರಾಜ್ ಭಾಗಿಯಾಗಿದ್ದು, ವಂಚನೆ ಪ್ರಕರಣದ ಕುರಿತು ಚರ್ಚೆ ನಡೆಸಿದ್ದಾರೆ. ತನಿಖೆ ವೇಳೆ ಈವರೆಗೆ ಕಂಡುಬಂದ ಅಂಶಗಳ ವಿಚಾರದ ಚರ್ಚೆ ನಡೆಸಿದ್ದಾರೆ.

ವಿಚಾರಣೆಯ ಬಳಿಕ ಶ್ರೀರಾಮುಲು ಆಪ್ತ ರಾಜಣ್ಣ ವಾಪಸ್ ಬೆಂಗಳೂರಿನ ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್​ನಲ್ಲಿ ಸಿಸಿಬಿ ಪೊಲೀಸರು ರಾಜಣ್ಣ ಅವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ರಾಜಣ್ಣ ವಾಯ್ಸ್ ಸ್ಯಾಂಪಲ್ಸ್ ಸಂಗ್ರಹ ಮಾಡಲಾಗಿದೆ. ರಾಜಣ್ಣ ಮಾತನಾಡಿದ್ದಾರೆಂಬ ಆಡಿಯೋ ಸಿಸಿಬಿಗೆ ಲಭ್ಯವಾಗಿರುವ ಹಿನ್ನೆಲೆ, ರಾಜಣ್ಣ ವಾಯ್ಸ್ ಸ್ಯಾಂಪಲ್ಸ್ ಎಫ್‌ಎಸ್‌ಎಲ್‌ಗೆ ರವಾನೆ ಮಾಲಾಗಿದೆ. ಸಿಸಿಬಿ ಪೊಲೀಸರು ತನಿಖೆ ಬಳಿಕ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಶ್ರೀರಾಮುಲು ಆಪ್ತ ರಾಜಣ್ಣಗೆ ನೋಟಿಸ್ ನೀಡಿದ್ದಾರೆ.

ಮೋಸ, ವಂಚನೆ ಆರೋಪದಡಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪಿಎ ರಾಜಣ್ಣ ಬಂಧನ ಸಚಿವರು, ಸಿಎಂ ಕಚೇರಿ ಹೆಸರಲ್ಲಿ ಹಲವರಿಗೆ ಮೋಸ ಎಸಗಿದ ಆರೋಪದಡಿ ಸಿಸಿಬಿ ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಅವರ ಪಿಎ ರಾಜಣ್ಣ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬೆಂಗಳೂರನಲ್ಲಿ ಸಚಿವ ಶ್ರೀರಾಮುಲು ಮನೆಯಲ್ಲಿದ್ದ ವೇಳೆಯೇ ಸಿಸಿಬಿ ತಂಡ ಬಂಧಿಸಿದ್ದು, ರಾಜಣ್ಣ ಕೆಲಸದ ಆಮಿಷ, ಅಧಿಕಾರಿಗಳಿಗೆ ವರ್ಗಾವಣೆ ಆಮಿಷ ಒಡ್ಡಿ ಕೋಟ್ಯಾಂತರ ಹಣ ಕಬಳಿಕೆ ಮಾಡಿದ್ದರು ಎಂದು ಹೇಳಲಾಗಿದೆ. 2 ದಿನಗಳ ಹಿಂದೆ ರಾಜಣ್ಣ ವಿರುದ್ಧ ದಾಖಲಾಗಿದ್ದ ಎಫ್ಐಆರ್​ ದಾಖಲಾಗಿತ್ತು. ನಿನ್ನೆ ಬೆಳಗ್ಗೆಯಿಂದ ಕಾಯ್ದ ಸಿಸಿಬಿ ಇಂದು ರಾಜಣ್ಣ ಅವರನ್ನು ಬಂಧಿಸಿದ್ದಾರೆ.

ಶ್ರೀರಾಮುಲು ಹೆಸರಿನ ಜತೆಗೆ ವಿಜಯೇಂದ್ರ ಹೆಸರುನ್ನೂ ರಾಜಣ್ಣ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಅರೋಪ ಕೇಳಿಬಂದಿದ್ದು, ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ದೂರಿನ ಮೇಲೆ ರಾಜಣ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಬಂಧಿಸಲು ತೆರಳಿದ್ದಾಗ ಒಮ್ಮೆಗೆ ಬಂಧನಕ್ಕೆ ಅವಕಾಶ ನೀಡದೇ ರಾಜಣ್ಣ ಬೃಹನ್ನಾಟಕವಾಡಿದ್ದಾರೆ. ಪೊಲೀಸರ ಜತೆ ವಾದ ನಡೆಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರ ಸಚಿವರ ಹೆಸರಲ್ಲಿ ಕೋಟ್ಯಾಂತರ ರೂ.ವಸೂಲಿ ಮಾಡಿರುವ ಗಂಭೀರ ಆರೋಪ ರಾಜಣ್ಣ ವಿರುದ್ಧ ಕೇಳಿಬಂದಿತ್ತು. ಹಲವು ವರ್ಷಗಳಿಂದ‌ ಶ್ರೀರಾಮುಲು ಹಾಗೂ ರೆಡ್ಡಿ ಕುಟುಂಬದ ಜತೆ ರಾಜಣ್ಣ ನಿಕಟ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ದೊರೆತಿದೆ.

ಇದನ್ನೂ ಓದಿ: Big News: ಕೋಟ್ಯಾಂತರ ರೂ. ಮೋಸ, ವಂಚನೆ ಆರೋಪದಡಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪಿಎ ರಾಜಣ್ಣ ಬಂಧನ

ವಿಜಯೇಂದ್ರ ಟ್ವೀಟ್, ಸಿಸಿಬಿ ಪೊಲೀಸರಿಗೆ ಒತ್ತಡ ಹೆಚ್ಚಳ, ರಾಜಣ್ಣ ನನ್ನ ಪಿಎ ಅಲ್ಲ ನನಗೆ ಗೊತ್ತಿರುವ ಹುಡುಗ ಅಷ್ಟೇ ಎಂದ ಸಚಿವ ರಾಮುಲು

Published On - 2:27 pm, Fri, 2 July 21