Sign In

By signing in or creating an account, you agree with Associated Broadcasting Company's Terms & Conditions and Privacy Policy.

Big News: ಕೋಟ್ಯಾಂತರ ರೂ. ಮೋಸ, ವಂಚನೆ ಆರೋಪದಡಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪಿಎ ರಾಜಣ್ಣ ಬಂಧನ

2 ದಿನಗಳ ಹಿಂದೆ ರಾಜಣ್ಣ ವಿರುದ್ಧ ದಾಖಲಾಗಿದ್ದ ಎಫ್ಐಆರ್​ ದಾಖಲಾಗಿತ್ತು. ನಿನ್ನೆ ಬೆಳಗ್ಗೆಯಿಂದ ಕಾಯ್ದ ಸಿಸಿಬಿ ಇಂದು ರಾಜಣ್ಣ ಅವರನ್ನು ಬಂಧಿಸಿದ್ದಾರೆ.

Big News: ಕೋಟ್ಯಾಂತರ ರೂ. ಮೋಸ, ವಂಚನೆ ಆರೋಪದಡಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪಿಎ ರಾಜಣ್ಣ ಬಂಧನ
ಸಚಿವ ಶ್ರೀರಾಮುಲು ಜತೆ ರಾಜಣ್ಣ
Follow us
TV9 Web
| Updated By: guruganesh bhat

Updated on:Jul 01, 2021 | 11:00 PM

ಬೆಂಗಳೂರು: ಸಚಿವರು, ಸಿಎಂ ಕಚೇರಿ ಹೆಸರಲ್ಲಿ ಹಲವರಿಗೆ ಮೋಸ ಎಸಗಿದ ಆರೋಪದಡಿ ಸಿಸಿಬಿ ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಅವರ ಪಿಎ ರಾಜಣ್ಣ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬೆಂಗಳೂರನಲ್ಲಿ ಸಚಿವ ಶ್ರೀರಾಮುಲು ಮನೆಯಲ್ಲಿದ್ದ ವೇಳೆಯೇ ಸಿಸಿಬಿ ತಂಡ ಬಂಧಿಸಿದ್ದು, ರಾಜಣ್ಣ ಕೆಲಸದ ಆಮಿಷ, ಅಧಿಕಾರಿಗಳಿಗೆ ವರ್ಗಾವಣೆ ಆಮಿಷ ಒಡ್ಡಿ ಕೋಟ್ಯಾಂತರ ಹಣ ಕಬಳಿಕೆ ಮಾಡಿದ್ದರು ಎಂದು ಹೇಳಲಾಗಿದೆ. 2 ದಿನಗಳ ಹಿಂದೆ ರಾಜಣ್ಣ ವಿರುದ್ಧ ದಾಖಲಾಗಿದ್ದ ಎಫ್ಐಆರ್​ ದಾಖಲಾಗಿತ್ತು. ನಿನ್ನೆ ಬೆಳಗ್ಗೆಯಿಂದ ಕಾಯ್ದ ಸಿಸಿಬಿ ಇಂದು ರಾಜಣ್ಣ ಅವರನ್ನು ಬಂಧಿಸಿದ್ದಾರೆ.

ಶ್ರೀರಾಮುಲು ಹೆಸರಿನ ಜತೆಗೆ ವಿಜಯೇಂದ್ರ ಹೆಸರುನ್ನೂ ರಾಜಣ್ಣ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಅರೋಪ ಕೇಳಿಬಂದಿದ್ದು, ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ದೂರಿನ ಮೇಲೆ ರಾಜಣ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಬಂಧಿಸಲು ತೆರಳಿದ್ದಾಗ ಒಮ್ಮೆಗೆ ಬಂಧನಕ್ಕೆ ಅವಕಾಶ ನೀಡದೇ ರಾಜಣ್ಣ ಬೃಹನ್ನಾಟಕವಾಡಿದ್ದಾರೆ. ಪೊಲೀಸರ ಜತೆ ವಾದ ನಡೆಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರ ಸಚಿವರ ಹೆಸರಲ್ಲಿ ಕೋಟ್ಯಾಂತರ ರೂ.ವಸೂಲಿ ಮಾಡಿರುವ ಗಂಭೀರ ಆರೋಪ ರಾಜಣ್ಣ ವಿರುದ್ಧ ಕೇಳಿಬಂದಿತ್ತು. ಹಲವು ವರ್ಷಗಳಿಂದ‌ ಶ್ರೀರಾಮುಲು ಹಾಗೂ ರೆಡ್ಡಿ ಕುಟುಂಬದ ಜತೆ ರಾಜಣ್ಣ ನಿಕಟ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ದೊರೆತಿದೆ.

Rajanna SriRamulu PA

2007ರಿಂದಲೂ ಸಚಿವ ಶ್ರೀರಾಮುಲು ಆಪ್ತನಾಗಿದ್ದ ರಾಜಣ್ಣ ಈ ಮೊದಲು ಎನೋಬಲ್​ ಇಂಡಿಯಾದಲ್ಲಿ ಕೆಲಸ ಮಾಡಿದ್ದರು. 2008-09ರಲ್ಲಿ ಶ್ರೀರಾಮುಲು ಸಚಿವರಾಗಿದ್ದಾಗಲೂ ಅವರಿಗೆ ಪಿಎ ಆಗಿ ಕೆಲಸ ಮಾಡಿದ್ದರು. ಬಳ್ಳಾರಿಯಲ್ಲಿ ಕುಡಿವ ನೀರಿನ ವಾಟರ್​ ಬಾಟಲ್ ಪ್ಲಾಂಟ್ ಮತ್ತು ಬೈಲ್ ಶಾಪ್ ಹೊಂದಿರುವ ರಾಜಣ್ಣ ಹೆಚ್ಚಾಗಿ ಸಚಿವ ರಾಮುಲು ಜೊತೆ ಕಾಣಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ:

ಗ್ರಾಮ ಪಂಚಾಯತಿ ಮಟ್ಟದ ನೌಕರರ ಕಾಯಮಾತಿ ಇಲ್ಲ, ಕೊವಿಡ್​ನಿಂದ ಮೃತಪಟ್ಟರೆ 30 ಲಕ್ಷ ಪರಿಹಾರ; ಸಚಿವ ಈಶ್ವರಪ್ಪ 

National Doctors Day 2021: ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊವಿಡ್​ ಸಮಯದಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಎದುರಿಸಿದ ಕೆಲವು ಸಮಸ್ಯೆಗಳು

(Social Welfare Minister Sriramulu PA Rajanna arrested on charges of fraud and fraud by CCB Police in Bengaluru)

Published On - 9:29 pm, Thu, 1 July 21

ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ