National Doctor’s Day 2021: ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊವಿಡ್​ ಸಮಯದಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಎದುರಿಸಿದ ಕೆಲವು ಸಮಸ್ಯೆಗಳು

ರಾಷ್ಟ್ರೀಯ ವೈದ್ಯರ ದಿನ: ತಮ್ಮ ಜೀವವನ್ನೇ ಪಣಕ್ಕಿಟ್ಟು ನಿಸ್ವಾರ್ಥ ಭಾವದಿಂದ ಜನರ ಜೀವ ಕಾಪಾಡುತ್ತಿರುವ ಅದೆಷ್ಟೋ ವೈದ್ಯರಿಗೆ ಇಂದು ಮನಸ್ಪೂರ್ವಕವಾಗಿ ಕೃತಜ್ಞತೆ ಹೇಳಲೇಬೇಕಾದ ದಿನ

National Doctor's Day 2021: ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊವಿಡ್​ ಸಮಯದಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಎದುರಿಸಿದ ಕೆಲವು ಸಮಸ್ಯೆಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Jul 01, 2021 | 11:09 AM

ಇಂದು ರಾಷ್ಟ್ರೀಯ ವೈದ್ಯರ ದಿನವನ್ನು ಎಲ್ಲಡೆ ಆಚರಿಸಲಾಗುತ್ತಿದೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ನಿಸ್ವಾರ್ಥ ಭಾವದಿಂದ ಜನರ ಜೀವ ಕಾಪಾಡುತ್ತಿರುವ ಅದೆಷ್ಟೋ ವೈದ್ಯರಿಗೆ ಇಂದು ಮನಸ್ಪೂರ್ವಕವಾಗಿ ಕೃತಜ್ಞತೆ ಹೇಳಲೇಬೇಕಾದ ದಿನ. ಪ್ರಸ್ತುತದಲ್ಲಿನ ಸಾಂಕ್ರಾಮಿಕ ಸಮಯದಲ್ಲಂತೂ ದಿನದ 24 ಗಂಟೆಯೂ ತಮ್ಮ ಕೆಲಸವನ್ನು ನಿರ್ವಹಿಸುತ್ತಾ ಇಂತಹ ಬಿಕ್ಕಟ್ಟಿನ ಸಮಯದಲ್ಲಿಯೂ ಪಟ್ಟುಬಿಡದೆ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ ಆರೋಗ್ಯ ಸಂಸ್ಥೆಗಳು ಸವಾಲನ್ನೂ ಎದುರಿಸುತ್ತ ಹೋರಾಡುತ್ತಿದೆ.

ದೇಶದಲ್ಲಿ ಕೊರೊನಾವೈರಸ್​ ಎರಡನೇ ಅಲೆಯ ಸಮಯದಲ್ಲಿ ಅಗತ್ಯ ವೈದ್ಯಕೀಯ ಸಲಕರಣೆಗಳ ಕೊರತೆ ಕಂಡು ಬಂತು. ಅನೇಕ ವೈದ್ಯರು ಈ ಕುರಿತಾಗಿ ಚಿಂತಿಸತೊಡಗಿದರು. ಇರುವ ಕಡಿಮೆ ಮೂಲಕಸೌಕರ್ಯದಲ್ಲಿಯೇ ಕೆಲಸ ಮಾಡುತ್ತಿರುವುದು ಕಂಡುಬಂತು. ಅಪಾರ ಒತ್ತಡದ ಮಧ್ಯೆಯೂ ಕೆಲವು ರೋಗಿಗಳ ಕುಟುಂಬದವರಿಂದ ದೈಹಿಕವಾಗಿಯೂ ಹಲ್ಲೆ ಪ್ರಕರಣಗಳು ದಾಖಲಾದವು. ಹೀಗಿರುವಾಗ ಮಾರಣಾಂತಿಕ ಸಾಂಕ್ರಾಮಿಕದ ಮಧ್ಯೆ ವೈದ್ಯರ ಸಮುದಾಯವು ಎದುರಿಸುತ್ತಿರುವ ಕೆಲವು ಅಡೆತಡೆಗಳ ಬಗ್ಗೆ ನೋಡೋಣ.

ವೈದ್ಯಕೀಯ ಮೂಲಸೌಕರ್ಯದ ಕೊರತೆ ದೇಶದಲ್ಲಿ ಕೊರೊನಾವೈರಸ್​ ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗುತ್ತಿದ್ದಂತೆಯೇ ಆಸ್ಪತ್ರೆಗಳಲ್ಲಿ ಮೂಲಕಸೌಕರ್ಯದ ಕೊರತೆ ಕಾಣಲಾರಂಭಿಸಿತು. ಆಸ್ಪತ್ರೆಗಳಲ್ಲಿ ಬೆಡ್​ ವ್ಯವಸ್ಥೆ, ಆಮ್ಲಜನಕ ವ್ಯವಸ್ಥೆಗಾಗಿ ಹುಡುಕಾಟ ಪ್ರಾರಂಭವಾಯಿತು. ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯ ರೋಗಿಗಗಳನ್ನು ಪಡೆಯುತ್ತಿದ್ದಂತೆಯೇ ಅನೇಕ ಆಸ್ಪತ್ರೆಗಳು ಸರ್ಕಾರದ ಮೊರೆಹೋಗಬೇಕಾಯಿತು. ಆಮ್ಲಜನಕ ಪೂರೈಸಬೇಕೆಂದು ಒತ್ತಾಯಿಸಿ ಹೈಕೋರ್ಟ್​ಗೆ ಹೋಗಬೇಕಾಯಿತು.

ಕೊರೊನಾ ವೈರಸ್​ನಿಂದ ಬಲಿಯಾದ ಅದೆಷ್ಟೋ ಕುಟುಂಬಗಳು ವೈದ್ಯರ ಮೇಲೆ ತಿರುಗಿ ಬಿದ್ದರು. ವೈಯಕ್ತಿಕ ಹಸ್ತಕ್ಷೇಪವನ್ನು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಯಿತು. ಯಾವುದೇ ಭಯವಿಲ್ಲದೇ ವೈದ್ಯರು ಕೆಲಸ ಮಾಡಬಹುದು ಎಂಬ ತೀರ್ಮಾನದ ಬಳಿಕ ವೈದ್ಯರು ಪುನಃ ಕೆಲಸದಲ್ಲಿ ತೊಡಗಿಕೊಳ್ಳುವ ಪರಿಸ್ಥಿತಿಗಳು ಎದುರಾಗಿದ್ದವು.

ತಪ್ಪು ಮಾಹಿತಿ ಸಾಂಕ್ರಾಮಿಕದ ನಿಯಂತ್ರಣಕ್ಕೆ ನೀಡುತ್ತಿರುವ ವ್ಯಾಕ್ಸಿನ್​ ಕುರಿತಾಗಿ ಜನರು ಭಯಗೊಂಡಿದ್ದಾರೆ. ಹರಡುತ್ತಿರುವ ತಪ್ಪಾದ ಮಾಹಿತಿಗಳು ಜನರು ವ್ಯಾಕ್ಸಿನ್​ ಪಡೆಯಲು ಹಿಂದೇಟು ಹಾಕುವಂತೆ ಮಾಡುತ್ತಿದೆ. ಈ ಕುರಿತಾಗಿ ಜನರಿಗೆ ತಿಳಿಹೇಳಿ ಜನರನ್ನು ಮನವೊಲಿಸುವ ಪ್ರಯತ್ನವನ್ನು ವೈದ್ಯ ಸಮುದಾಯ ಮಾಡುತ್ತಿದೆ. ಜನರ ಆರೋಗ್ಯದ ದೃಷ್ಟಿಯಿಂದ ಜಾಗೃತಿ ಮೂಡಿಸುವ ಅದೆಷ್ಟೋ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದೆ. ಇಂತಹ ಪರಿಸ್ಥಿತಿಯನ್ನೂ ಸಹ ಎದುರಿಸಿ ವೈದ್ಯ ಸಂಘ ವೈರಸ್​ ವಿರುದ್ಧ ಸತತ ಪ್ರಯತ್ನದಿಂದ ಹೋರಾಡುತ್ತಾ ಮುನ್ನುಗ್ಗುತ್ತಿದೆ.

ಸಂಬಳ ಸರಿಯಾದ ಸಮಯದಲ್ಲಿ ಜನರಿಗೆ ಚಿಕಿತ್ಸೆ ನೀಡುತ್ತಾ ತಮ್ಮ ನಿಸ್ವಾರ್ಥ ಸೇವೆಯಲ್ಲಿ ತೊಡಗಿದ್ದರೂ ಸಹ ಕೆಲವು ವೈದ್ಯರು ಕಡಿಮೆ ಸಂಬಳವನ್ನು ಪಡೆಯುತ್ತಿದ್ದಾರೆ. ದಿನದ 24 ಗಂಟೆಯೂ ದುಡಿದು ತಮ್ಮ ಜೀವವನ್ನೇ ಪಣಕ್ಕಿಟ್ಟು ದುಡಿಯುತ್ತಿರುವ ವೈದ್ಯರ ಸಂಬಳ ಕಡಿಮೆ ಇದೆ. ಈ ನಡುವೆಯೂ ಸಹ ವೈದ್ಯರು ತಮ್ಮ ಕರ್ತವ್ಯಕ್ಕೆ ಬದ್ಧರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:

National Doctor’s Day 2021: ಭಾರತದ ಮೊದಲ ಮಹಿಳಾ ವೈದ್ಯೆಯ ಸ್ಪೂರ್ತಿದಾಯಕ ಕಥೆಯನ್ನು ಇಂದು ತಿಳಿಯಲೇಬೇಕು

National Doctor’s Day 2021: ಯುವ ವೈದ್ಯರೆಲ್ಲರೂ ಕೊರೊನಾ ಚಿಕಿತ್ಸೆಗೇ ಮೀಸಲು; ಮುಂದಿನ ದಿನಗಳಲ್ಲಿ ತಜ್ಞ ವೈದ್ಯರ ಕೊರತೆಯೇ ದೊಡ್ಡ ಸವಾಲಾಗಬಹುದು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ