National Doctor’s Day 2021: ಭಾರತದ ಮೊದಲ ಮಹಿಳಾ ವೈದ್ಯೆಯ ಸ್ಪೂರ್ತಿದಾಯಕ ಕಥೆಯನ್ನು ಇಂದು ತಿಳಿಯಲೇಬೇಕು

ರಾಷ್ಟ್ರೀಯ ವೈದ್ಯರ ದಿನ 2021: ಎಲ್ಲಾ ಮಹಿಳಾ ವೈದ್ಯರಿಗೆ ಸ್ಪೂರ್ತಿಯಾಗಿರುವ, ಭಾರತದಲ್ಲಿ ಮೊದಲ ಮಹಿಳಾ ವೈದ್ಯರಾಗಿ ಸೇವೆ ಸಲ್ಲಿಸಿದ ಆನಂದ ಬಾಯಿ ಗೋಪಾಲ​ರಾವ್​ ಜೋಶಿ ಅವರ ಜೀವನ ಚರಿತ್ರೆ ಕುರಿತು ತಿಳಿಯೋಣ.

National Doctor's Day 2021: ಭಾರತದ ಮೊದಲ ಮಹಿಳಾ ವೈದ್ಯೆಯ ಸ್ಪೂರ್ತಿದಾಯಕ ಕಥೆಯನ್ನು ಇಂದು ತಿಳಿಯಲೇಬೇಕು
ಆನಂದ ಬಾಯಿ ಜೋಶಿ
Follow us
TV9 Web
| Updated By: shruti hegde

Updated on: Jul 01, 2021 | 10:26 AM

ಕಷ್ಟದ ಪರಿಸ್ಥಿತಿಯಲ್ಲಿ ಜನರ ಜೀವ ಉಳಿಸಲು ಸಹಾಯ ಮಾಡುವ ವೈದ್ಯರ ದಿನವಿಂದು. ಅಗತ್ಯವಿರುವ ಸಮಯದಲ್ಲಿ ನಿಸ್ವಾರ್ಥವಾಗಿ ಸಹಾಯ ಮಾಡಿದ ವೈದ್ಯರಿಗೆ ಕೃತಜ್ಞತೆ ಸಲ್ಲಿಸಲು ಪ್ರತೀ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಅದರಲ್ಲಿಯೂ ಕೊವಿಡ್​19 ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ತಮ್ಮ ಜೀವವನ್ನೇ ಒತ್ತೆ ಇಟ್ಟು ಜನರ ಸೇವೆಯಲ್ಲಿ ದಿನವಿಡೀ ಕೆಲಸ ನಿರ್ವಹಿಸಿದ ವೈದ್ಯರಿಗೆ ಇಂದು ಕೃತಜ್ಞತೆ ಸಲ್ಲಿಸಲೇಬೇಕು. ಹೀಗಿರುವಾಗ ಎಲ್ಲಾ ಮಹಿಳಾ ವೈದ್ಯರಿಗೆ ಸ್ಪೂರ್ತಿಯಾಗಿರುವ, ಭಾರತದಲ್ಲಿ ಮೊದಲ ಮಹಿಳಾ ವೈದ್ಯರಾಗಿ ಸೇವೆ ಸಲ್ಲಿಸಿದ ಆನಂದ ಬಾಯಿ ಗೋಪಾಲ​ರಾವ್​ ಜೋಶಿ ಅವರ ಜೀವನ ಚರಿತ್ರೆ ಕುರಿತು ತಿಳಿಯೋಣ.

ಆನಂದ ಬಾಯಿ ಅವರು 1865 ಮಾರ್ಚ್​ 31ರಂದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಸಂಪ್ರದಾಯವಾದಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಪೋಷಕರು ಅವರಿಗೆ ಯಮುನಾ ಎಂಬ ಹೆಸರಿಟ್ಟು ನಾಮಕರಣ ಮಾಡಿದರು. ಆದರೆ, ಮದುವೆಯ ಬಳಿಕ ಅವರ ಹೆಸರನ್ನು ಬದಲಾಯಿಸಲಾಯಿತು. ತಮ್ಮ ಒಂಭತ್ತನೇ ವಯಸ್ಸಿನಲ್ಲಿ 25 ವರ್ಷದ ಗೋಪಾಲರಾವ್​ ಜೋಶಿ ಅವರನ್ನು ವಿವಾಹವಾದರು. ಮದುವೆಯ ನಂತರ ಅಧ್ಯಯನ ಮಾಡಬೇಕು ಎಂಬ ಷರತ್ತಿನಿಂದ ಗೋಪಾಲರಾವ್​ ಅವರು ಮದುವೆಯಾಗಲು ಒಪ್ಪಿಕೊಂಡಿದ್ದರು. ಆದರೆ, ಆನಂದ ಬಾಯಿ ಅವರಿಗೆ ವರ್ಣಮಾಲೆಯ ಅಕ್ಷರಗಳ ಕುರಿತಾಗಿ ಜ್ಞಾನವಿರಲಿಲ್ಲ ಹಾಗಾಗಿ ಶಿಕ್ಷಣ ಪಡೆಯುವುದರ ಕುರಿತಾಗಿ ಅವರ ಕುಟುಂಬವು ವಿರೋಧಿಸಿತು. ಆದರೆ, ಗೋಪಾಲರಾವ್​ ಅವರ ಆಶಯದ ಸಲುವಾಗಿ ಆನಂದಬಾಯಿ ಅವರು ಶಿಕ್ಷಣ ಕಲಿಯಲು ಮುಂದಾದರು.

ಆರಂಭದಲ್ಲಿ ಆನಂದ ಬಾಯಿ ಜೋಶಿ ಅವರಿಗೆ ಶಿಕ್ಷಣದಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಅವರಿಗೆ ಶಿಕ್ಷಣ ಕಲಿಸಲು ಅವರ ಪತಿ ಗದರಿಸುತ್ತಿದ್ದರು. ಹಾಗಿರುವಾಗ ಜೀವನದಲ್ಲಿ ಅವರು ಅನುಭವಿಸಿದ ಒಂದು ಹಿನ್ನಡೆ ಅವರನ್ನು ಶಿಕ್ಷಣ ಕಲಿಯುವಂತೆ ಮಾಡಿತು. ಆನಂದ ಬಾಯಿ ಅವರು 14ನೇ ವಯಸ್ಸಿನಲ್ಲಿದ್ದಾಗ ತಮ್ಮ 10 ದಿನಗಳ ಮಗುವನ್ನು ಕಳೆದುಕೊಂಡರು. ಮಗುವಿನ ಸಾವಿನ ಸುದ್ದಿ ಅವರನ್ನು ಹೆಚ್ಚು ಚಿಂತೆಗೀಡು ಮಾಡಿತು. ಇದರಿಂದ ಅವರು ಆಘಾತಕ್ಕೊಳಗಾದರು. ಈ ನೋವಿನಿಂದ ಬೇಸತ್ತಿದ್ದ ಅವರು ವೈದ್ಯರಾಗಲು ನಿರ್ಧಾರ ಕೈಗೊಂಡರು.

ವೈದ್ಯರಾಗಲೇಬೇಕು ಎಂದು ಪ್ರತಿಜ್ಞೆ ಮಾಡಿದ್ದ ಅವರು ಹೆಚ್ಚು ಅಧ್ಯಯನದ ಕುರಿತಾಗಿ ಒಲವು ತೋರಿಸಿದರು. ಮೂಲಭೂತ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಪೆನ್ಸಿಲ್ವೇನಿಯಾದ ವುಮೆನ್ಸ್​ ಮೆಡಿಕಲ್​ ಕಾಲೇಜಿನಲ್ಲಿ ವೈದ್ಯಕೀಯ ಕಾರ್ಯಕ್ರಮಕ್ಕೆ ಸೇರಿಕೊಂಡರು. ಈ ಕಾಲೇಜು ವಿಶ್ವದ ಎರಡು ಮಹಿಳಾ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾಗಿದೆ. ವಿವಾಹಿತ ಮಹಿಳೆಯಾಗಿ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗಿದ್ದಕ್ಕಾಗಿ ಸಮಾಜದಿಂದ ಸಾಕಷ್ಟು ಟೀಕೆಗೆ ಒಳಗಾದರು. ಆದರೂ ಸಹ ಛಲ ಬಿಡದೆ ತಮ್ಮ ಗುರಿಯತ್ತ ಮಾತ್ರ ಗಮನಹರಿಸಿದ್ದರು.

ಟೀಕೆಯ ಬಗ್ಗೆ ಗಮನಕೊಡದೇ ಗೋಪಾಲರಾವ್​ ಜೋಶಿ ಅವರು ತಮ್ಮ ಪತ್ನಿಯನ್ನು ಗುರಿ ಸಾಧಿಸುವ ಸಲುವಾಗಿ ಹಡಗಿನಲ್ಲಿ ಕೋಲ್ಕತ್ತಾದಿಂದ ನ್ಯೂಯಾರ್ಕ್​ಗೆ ಕಳುಹಿಸಿದರು. ಯುನೈಟೆಡ್​ ಸ್ಟೇಟ್​ನಿಂದ ತಮ್ಮ 19ನೇ ವಯಸ್ಸಿನಲ್ಲಿರುವಾಗ ಪಾಶ್ಚಿಮಾತ್ಯ ಔಷಧದಲ್ಲಿ ಎರಡು ವರ್ಷಗಳ ಪದವಿ ಪಡೆದು ಭಾರತದ ಮೊದಲ ಮಹಿಳಾ ವೈದ್ಯರಾದರು.

ಭಾರತಕ್ಕೆ ಹಿಂದಿರುಗಿದ ನಂತರ ಅವರಿಗೆ ಹೆಮ್ಮೆಯಿಂದ ಸ್ವಾಗತ ಕೋರಲಾಯಿತು. ಬಳಿಕ ಜನರಿಗೆ ಸೇವೆ ಮಾಡುತ್ತ ತಮ್ಮ ವೃತ್ತಿಯಲ್ಲಿ ಮುಂದುವರೆದರು. ಅವರು ತಮ್ಮ 22ನೇ ವಯಸ್ಸಿನಲ್ಲಿ ಕ್ಷಯರೋಗಕ್ಕೆ ಬಲಿಯಾದರು. ಆದರೆ ತಮ್ಮ ಶಿಕ್ಷಣವನ್ನು ಮುಂದುವರೆಸಲು ಮತ್ತು ಮಹಿಳೆಯರ ಶಿಕ್ಷಣ ಪಡೆಯುವಂತೆ ಸ್ಪೂರ್ತಿಯಾದ ಮಹಿಳೆ ಎಂಬ ಹೆಸರಿಗೆ ಇಂದಿಗೂ ಪಾತ್ರರಾಗಿದ್ದಾರೆ.

ಇದನ್ನೂ ಓದಿ:

National Doctor’s Day 2021: ಯುವ ವೈದ್ಯರೆಲ್ಲರೂ ಕೊರೊನಾ ಚಿಕಿತ್ಸೆಗೇ ಮೀಸಲು; ಮುಂದಿನ ದಿನಗಳಲ್ಲಿ ತಜ್ಞ ವೈದ್ಯರ ಕೊರತೆಯೇ ದೊಡ್ಡ ಸವಾಲಾಗಬಹುದು

8ತಿಂಗಳ ಗರ್ಭಿಣಿ ವೈದ್ಯೆಯ ಕೊರೊನಾ ಡ್ಯೂಟಿ…!

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್