Travel Tips: ಗರ್ಭಿಣಿಯರು ಎಲ್ಲಾದ್ರೂ ಪ್ರಯಾಣಿಸುವಾಗ ಈ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಲೇಬೇಕು
ಗರ್ಭಾವಸ್ಥೆಯಲ್ಲಿ ಮಹಿಳೆಯರ ಆರೋಗ್ಯ ತುಂಬಾನೇ ಸೂಕ್ಷ್ಮವಾಗಿರುತ್ತದೆ. ಇದೇ ಕಾರಣದಿಂದ ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅದೇ ರೀತಿ ಗರ್ಭಿಣಿ ಮಹಿಳೆಯರು ಎಲ್ಲಾದ್ರೂ ಪ್ರಯಾಣಿಸುತ್ತಿದ್ದಾರೆ ಎಂದರೂ ಕೂಡ, ಈ ಪ್ರಯಾಣದ ಸಂದರ್ಭದಲ್ಲಿ ಜಾಗರೂಕರಾಗಿರುವುದರ ಜೊತೆಗೆ ಒಂದಷ್ಟು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಅತೀ ಅವಶ್ಯಕ.

ವಿಶೇಷವಾಗಿ ಗರ್ಭಿಣಿಯರ ಆರೋಗ್ಯ ತುಂಬಾನೇ ಸೂಕ್ಷ್ಮವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ (Pregnancy) ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಲೇ ಇರುತ್ತವೆ. ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಈ ಸಮಯದಲ್ಲಿ ಬಹಳ ಜಾಗರೂಕರಾಗಿರಬೇಕು ಎಂದು ಗರ್ಭಿಣಿ ಮಹಿಳೆಯರಿಗೆ ಸಲಹೆ ನೀಡುತ್ತಾರೆ. ಅದೇ ರೀತಿ ಈ ಸಮಯದಲ್ಲಿ ಗರ್ಭಿಣಿ ಮಹಿಳೆಯರು ಎಲ್ಲಾದ್ರೂ ಪ್ರಯಾಣಿಸುತ್ತಿದ್ದಾರೆ ಎಂದಾದರೂ ಕೂಡಾ ಕೆಲವೊಂದು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಹೌದು ಗರ್ಭಾವಸ್ಥೆಯಲ್ಲಿ (Travel During Pregnancy) ಪ್ರಯಾಣಿಸುತ್ತಿದ್ದರೆ, ಸಣ್ಣ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಏಕೆಂದರೆ ಒಂದು ಸಣ್ಣ ವಿಷಯದ ನಿರ್ಲಕ್ಷ್ಯ ಸಹ ಕೆಲವೊಂದು ಬಾರಿ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಗರ್ಭಿಣಿಯರು ತಮ್ಮ ದೂರ ಪ್ರಯಾಣಕ್ಕೂ ಮುನ್ನ ಈ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು.
ಪ್ರಯಾಣದ ಸಂದರ್ಭದಲ್ಲಿ ಗರ್ಭಿಣಿಯರು ಈ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು:
ವೈದ್ಯರನ್ನು ಸಂಪರ್ಕಿಸಿ:
ದೂರ ಪ್ರಯಾಣದ ಮೊದಲು, ಗರ್ಭಿಣಿ ಮಹಿಳೆಯರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯಕ. ವಿಶೇಷವಾಗಿ ಯಾವುದೇ ದೀರ್ಘಕಾಲದ ಕಾಯಿಲೆ ಇದ್ದರೆ ಅಥವಾ ಪ್ರತಿದಿನ ಔಷಧಿ ತೆಗೆದುಕೊಳ್ಳುತ್ತಿದ್ದರೆ ಅಂತಹವರು ತಪ್ಪದೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ತಪಾಸಣೆ ಮಾಡಿದ ನಂತರ, ವೈದ್ಯರು ನಿಮಗೆ ಸರಿಯಾದ ಸಲಹೆ ನೀಡುತ್ತಾರೆ.
ನಿಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಿ:
ಗರ್ಭಿಣಿ ಮಹಿಳೆಯರು ಪ್ರಯಾಣದ ಸಂದರ್ಭದಲ್ಲಿ ಜಂಕ್ ಫುಡ್, ಕರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು. ಇಂತಹ ಆಹಾರವನ್ನು ತಿನ್ನುವುದರಿಂದ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆರೋಗ್ಯಕರ ಆಹಾರದ ಜೊತೆಗೆ ಶುದ್ಧ ನೀರನ್ನು ಕುಡಿಯಿರಿ. ಜೊತೆಗೆ ಸಾಧ್ಯವಾದಷ್ಟು ಮಸಾಲೆಯುಕ್ತ ಆಹಾರ ಸೇವಿಸುವುದರಿಂದ ದೂರವಿರಿ.
ವಿಶ್ರಾಂತಿ ತೆಗೆದುಕೊಳ್ಳಿ:
ಪ್ರಯಾಣದ ಸಮಯದಲ್ಲಿ ಆಯಾಸ ತುಂಬಾ ಸಾಮಾನ್ಯ. ಅದರಲ್ಲೂ ಗರ್ಭಿಣಿ ಮಹಿಳೆಯರು ತುಸು ಹೆಚ್ಚೇ ದಣಿದಿರುತ್ತಾರೆ. ಆದ್ದರಿಂದ ವಿಶ್ರಾಂತಿ ಪಡೆಯಿರಿ ಮತ್ತು ಸಾಕಷ್ಟು ನಿದ್ರೆ ಮಾಡಿ. ಆಯಾಸ ಮತ್ತು ನಿದ್ರೆಯ ಕೊರತೆಯು ನಿಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಬಹುದು. ನಿದ್ರೆಯ ಕೊರತೆಯಿಂದಾಗಿ ಆಯಾಸ ಮತ್ತು ಒತ್ತಡ ಹೆಚ್ಚಾಗಬಹುದು. ಆದ್ದರಿಂದ ಆರೋಗ್ಯದ ದೃಷ್ಟಿಯಿಂದ ವಿಶ್ರಾಂತಿ ಪಡೆಯುವುದು ಅತೀ ಅವಶ್ಯಕ.
ಆರಾಮದಾಯಕವಾದ ಸೀಟ್‌ಗಳನ್ನು ಆರಿಸಿ:
ಪ್ರಯಾಣದ ಸಮಯದಲ್ಲಿ ಆರಾಮದಾಯಕವಾದ ಆಸನವನ್ನು ಆರಿಸಿ. ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ವಾಶ್‌ರೂಮ್‌ಗೆ ಹತ್ತಿರವಿರುವ ಆಸನವನ್ನು ಆರಿಸಿ, ಏಕೆಂದರೆ ನೀವು ಆಗಾಗ್ಗೆ ವಾಶ್‌ರೂಮ್‌ಗೆ ಹೋಗಬೇಕಾಗುತ್ತದೆ. ಸಡಿಲ ಮತ್ತು ಆರಾಮದಾಯಕ ಬಟ್ಟೆಗಳನ್ನು ಧರಿಸಿ. ವಿಶೇಷವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದಾದರೆ ಸೀಟ್ ಬೆಲ್ಟ್ ಧರಿಸಲು ಮರೆಯದಿರಿ.
ಇದನ್ನೂ ಓದಿ: ಪ್ರತಿಯೊಬ್ಬ ಮಹಿಳೆಯೂ ತನ್ನ ಫೋನ್‌ನಲ್ಲಿ ಈ ನಂಬರ್‌ಗಳನ್ನು ಸೇವ್ ಮಾಡಿ ಇಟ್ಟುಕೊಳ್ಳಲೇಬೇಕು
ಮಾಹಿತಿ ಪಡೆಯಿರಿ:
ಪ್ರಯಾಣದ ಸಮಯದಲ್ಲಿ, ನೀವು ಹೋಗುವ ಸ್ಥಳದ ಹವಾಮಾನ, ಆಹಾರ ಮತ್ತು ಕುಡಿಯುವ ನೀರಿನ ಬಗ್ಗೆ ಮಾಹಿತಿಯನ್ನು ಮೊದಲೇ ಪಡೆದುಕೊಳ್ಳಿ. ಮತ್ತು ಟ್ರಿಪ್‌ನಲ್ಲಿ ಹತ್ತುವ ಇಳಿಯುವ, ಹೆಚ್ಚು ಹೊತ್ತು ನಡೆಯುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ. ಇನ್ನೂ ನೀವು ಹೋಗುವ ಸ್ಥಳದ ಸುತ್ತಮುತ್ತಲಿನ ಆಸ್ಪತ್ರೆಗಳು ಮತ್ತು ವೈದ್ಯರ ಬಗ್ಗೆ ಮಾಹಿತಿ ಪಡೆಯಿರಿ. ಇದರಿಂದ ಯಾವುದೇ ರೀತಿಯ ಸಮಸ್ಯೆ ಎದುರಾದರೆ, ನೀವು ತಕ್ಷಣವೇ ಆ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ.
ಅಗತ್ಯ ಔಷಧಿಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ:
ಗರ್ಭಾವಸ್ಥೆಯಲ್ಲಿ ಪ್ರಯಾಣಿಸುವಾಗ ನೀವು ಸೇವಿಸುವ ಔಷಧಿಗಳನ್ನು ತಪ್ಪದೆ ಜೊತೆಗಿಟ್ಟುಕೊಳ್ಳಿ. ಇದರ ಬಗ್ಗೆ ಯಾವುದೇ ನಿರ್ಲಕ್ಷ್ಯ ಬೇಡ. ಪ್ರಯಾಣದ ದಿನಾಂಕಕ್ಕೆ ಕೆಲವು ದಿನಗಳ ಮೊದಲು ನಿಮ್ಮ ವೈದ್ಯರನ್ನು ಭೇಟಿ ಮಾಡಿ ಮತ್ತು ನೀವು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅವರಿಗೆ ತಿಳಿಸಿ. ಇದರಿಂದ ಅವರು ನಿಮಗೆ ಇತರ ಅಗತ್ಯ ಔಷಧಿಗಳನ್ನು ಸಹ ಶಿಫಾರಸು ಮಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ