Hair on Ears: ವ್ಯಕ್ತಿಯ ಕಿವಿಯಲ್ಲಿ ಕೂದಲು ಬೆಳೆದ್ರೆ ಏನರ್ಥ ಗೊತ್ತಾ?
ಕೆಲವರಿಗೆ ಕೈ ಮೇಲೆ ಕೂದಲು ಬೆಳೆದರೆ, ಕೆಲ ಪುರುಷರಲ್ಲಿ ಎದೆ ಮೇಲೆ ಸಿಕ್ಕಾಪಟ್ಟೆ ಕೂದಲು ಬೆಳೆಯುತ್ತವೆ. ಇನ್ನೂ ಕೆಲವರ ಕಿವಿಯಲ್ಲೂ ಕೂದಲು ಬೆಳೆಯುತ್ತವೆ. ಹೀಗೆ ಬೆಳೆಯುವ ಕೂದಲುಗಳ ಮೂಲಕ ಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ಭವಿಷ್ಯ, ಶುಭ ಮತ್ತು ಅಶುಭಗಳ ಬಗ್ಗೆ ತಿಳಿಸಲಾಗುತ್ತದೆ. ಹಾಗಾದರೆ ಕಿವಿಯಲ್ಲಿ ಕೂದಲಿದ್ದರೆ ಅದು ಶುಭದ ಸಂಕೇತವೋ ಅಥವಾ ಅಶುಭವೋ? ಅದರ್ಥ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹಾರ್ಮೋನುಗಳ ಬದಲಾವಣೆಯ ಕಾರಣದಿಂದಾಗಿ ತುಟಿಯ ಮೇಲೆ ಬೇಡದ ಕೂದಲು, ಕೆಲ ಪುರುಷರ ಎದೆ ಭಾಗದಲ್ಲಿ ದಟ್ಟವಾಗಿ ಕೂದಲು ಬೆಳೆಯುತ್ತವೆ. ಇನ್ನೂ ಕೆಲವರ ಕಿವಿಯಲ್ಲೂ ಕೂದಲು (ears hairy) ಬೆಳೆಯುವುದುಂಟು. ಸಾಮಾನ್ಯವಾಗಿ ಹಾರ್ಮೋನುಗಳ ಕಾರಣದಿಂದಾಗಿ ಹೀಗೆಲ್ಲಾ ಆಗುತ್ತೆ ಎಂದು ಹೇಳ್ತಾರೆ. ಆದ್ರೆ ಸಾಮುದ್ರಿಕ ಶಾಸ್ತ್ರದಲ್ಲಿ ಇದರ ಅರ್ಥವೇ ಬೇರೆಯಿದೆ. ಹೌದು ಶಾಸ್ತ್ರಗಳ ಪ್ರಕಾರ ಇದು ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ ಕೆಲವೊಂದು ಅಂಶಗಳು ಅಂದರೆ ಅದೃಷ್ಟ, ದುರಾದೃಷ್ಟ, ನಡವಳಿಕೆ, ವ್ಯಕ್ತಿತ್ವ, ಭವಿಷ್ಯ ಇವೆಲ್ಲವನ್ನು ಪ್ರತಿಬಿಂಬಿಸುತ್ತವೆ. ಹಾಗಾದ್ರೆ ಈ ಸಾಮುದ್ರಿಕ ಶಾಸ್ತ್ರದ ಪ್ರಕಾರ ವ್ಯಕ್ತಿಯ ಕಿವಿ ಮೇಲೆ ಕೂದಲು ಇದ್ರೆ (meaning of hairy ears) ಅದರರ್ಥ ಏನು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಿವಿಯಲ್ಲಿ ಕೂದಲು ಇದ್ದರೆ ಏನರ್ಥ?
ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯದ ಸಂಕೇತ: ಸಮುದ್ರಿಕ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಕಿವಿಯಲ್ಲಿ ಸ್ವಾಭಾವಿಕವಾಗಿ ಉದ್ದ ಮತ್ತು ದಪ್ಪ ಕೂದಲು ಬೆಳೆದರೆ, ಅದು ತುಂಬಾ ಶುಭದ ಸಂಕೇತವಾಗಿದೆ. ಕಿವಿಯ ಮೇಲೆ ಕೂದಲು ಬೆಳೆದರೆ ಅದು ಆ ವ್ಯಕ್ತಿಗೆ ದೀರ್ಘಯುಷ್ಯವಿರುತ್ತಂತೆ. ಜೊತೆಗೆ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ.
ಶಾಂತ ಮತ್ತು ಗಂಭೀರ ಜನರು: ಕಿವಿಯ ಮೇಲೆ ಕೂದಲು ಇರುವ ಜನರು ಸ್ವಭಾವತಃ ಶಾಂತ, ಗಂಭೀರ ಮತ್ತು ಚಿಂತನಶೀಲ ವ್ಯಕ್ತಿಗಳಾಗಿರುತ್ತಾರೆ. ಅವರು ಆತುರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಅಂತಹ ಜನರ ಆಲೋಚನೆಗಳು ಇತರರಿಗಿಂತ ಭಿನ್ನವಾಗಿರುತ್ತವೆ. ಈ ಜನರು ತಮ್ಮನ್ನು ಮಾತ್ರ ನಂಬುತ್ತಾರೆ ಮತ್ತು ಇವರು ಇತರರಿಗೆ ಸರಿಯಾದ ಮತ್ತು ನಿಖರವಾದ ಸಲಹೆಯನ್ನು ನೀಡುತ್ತಾರೆ.
ಆಧ್ಯಾತ್ಮಿಕ ಒಲವು: ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕಿವಿಗಳಲ್ಲಿ ಕೂದಲು ಹೊಂದಿರುವ ಜನರು ಆಧ್ಯಾತ್ಮಿಕತೆ, ತತ್ವಶಾಸ್ತ್ರದ ಕಡೆಗೆ ಹೆಚ್ಚು ಒಲವು ತೋರುತ್ತಾರೆ ಮತ್ತು ಇವರು ಒಂಟಿಯಾಗಿರಲು ಇಷ್ಟಪಡುತ್ತಾರೆ. ಮತ್ತು ಆಧ್ಯಾತ್ಮಿಕತೆಯಲ್ಲಿ ಹೆಚ್ಚಿನ ಒಲವು ಹೊಂದಿರುತ್ತಾರೆ.
ಸಂಪತ್ತು ಮತ್ತು ಸಮೃದ್ಧಿ: ಸಾಮುದ್ರಕ ಶಾಸ್ತ್ರದಲ್ಲಿ ಕಿವಿಗಳ ಮೇಲೆ ಕೂದಲು ಬೆಳೆಯುವುದನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸಮುದ್ರಿಕ ಶಾಸ್ತ್ರದ ಪ್ರಕಾರ, ಕಿವಿಯ ಮೇಲೆ ಕೂದಲು ಇರುವ ಜನರು ಜೀವನದಲ್ಲಿ ಕಠಿಣ ಪರಿಶ್ರಮಿಗಳು ಮತ್ತು ಶ್ರದ್ಧೆಯುಳ್ಳವರಾಗಿರುತ್ತಾರೆ. ಅಂತಹ ಜನರು ಕ್ರಮೇಣ ಆರ್ಥಿಕ ಸ್ಥಿರತೆಯನ್ನು ಪಡೆಯುತ್ತಾರೆ ಮತ್ತು ಕಾಲಾನಂತರದಲ್ಲಿ ಉತ್ತಮ ಸಮೃದ್ಧಿಯನ್ನು ಗಳಿಸುತ್ತಾರೆ.
ಇದನ್ನೂ ಓದಿ: ಪರ್ಸನಲ್ಲಿ ಹರಿದು ಹೋಗಿರುವ ನೋಟಿದ್ದರೆ ಏನಾಗುತ್ತೆ ಗೊತ್ತಾ?
ಬುದ್ಧಿವಂತಿಕೆ ಮತ್ತು ಜ್ಞಾನ: ಸಾಮುದ್ರಿಕ ಶಾಸತ್ರದ ಪ್ರಕಾರ ಕಿವಿಯ ಮೇಲಿನ ಕೂದಲು ಆ ವ್ಯಕ್ತಿಯ ಬುದ್ಧಿವಂತಿಕೆ ಮತ್ತು ಆಳವಾದ ಜ್ಞಾನದ ಸಂಕೇತವಾಗಿದೆ. ಅಂತಹ ಜನರು ಗಂಭೀರ ಮತ್ತು ಚಿಂತನಶೀಲ ಸ್ವಭಾವದವರಾಗಿದ್ದು, ಜೀವನದ ಆಳವಾದ ಅಂಶಗಳನ್ನು ಅರ್ಥಮಾಡಿಕೊಳ್ಳಲು ಸಮರ್ಥರಾಗಿದ್ದಾರೆ.
ಎಚ್ಚರಿಕೆ ಚಿಹ್ನೆಗಳು:
ಕಿವಿಯ ಮೇಲೆ ಕೂದಲು ಇರುವುದು ಸಾಮಾನ್ಯವಾಗಿ ಶುಭವೆಂದು ಪರಿಗಣಿಸಲಾಗಿದ್ದರೂ, ಈ ಕೂದಲು ಅತಿಯಾಗಿ ದಪ್ಪವಾಗಿದ್ದರೆ, ಸಿಕ್ಕು ಬಿದ್ದಿದ್ದರೆ ಅಥವಾ ಅಸಹಜವಾಗಿ ಕಂಡುಬಂದರೆ, ಅದು ಮಾನಸಿಕ ಒತ್ತಡ, ಹಾರ್ಮೋನು ಅಸಮತೋಲನ ಅಥವಾ ಯಾವುದೇ ಆರೋಗ್ಯ ಸಮಸ್ಯೆಯ ಸಂಕೇತವೂ ಆಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ವೈದ್ಯಕೀಯ ಸಲಹೆಯನ್ನು ಪಡೆಯುವುದು ಉತ್ತಮ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ