Personality Test: ನೀವು ಆಶಾವಾದಿಯೇ ಎಂಬುದನ್ನು ತಿಳಿಸುತ್ತೆ ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸುವ ಅಂಶ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್‌ಗಳು ಸಾಕಷ್ಟು ಜನಪ್ರಿಯವಾಗಿವೆ. ಬುದ್ಧಿವಂತಿಕೆ ಹಾಗೂ ದೃಷ್ಟಿಗೆ ಸವಾಲೊಡ್ಡುವ ಈ ಚಿತ್ರಗಳು ಮೆದುಳಿಗೆ ವ್ಯಾಮಾಯವನ್ನು ನೀಡುವುದರ ಜೊತೆಗೆ ವ್ಯಕ್ತಿಯ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಸಹ ತಿಳಿಸುತ್ತದೆ. ಅಂತಹದ್ದೊಂದು ವ್ಯಕ್ತಿತ್ವ ಪರೀಕ್ಷೆಯ ಚಿತ್ರ ಇದೀಗ ವೈರಲ್ ಆಗಿದ್ದು, ಆ ಚಿತ್ರದ ನಿಮಗೆ ಮೊದಲು ಕಾಣಿಸುವ ಅಂಶದ ಮೂಲಕ ನೀವು ಆಶಾವಾದಿಯೋ ಅಥವಾ ನಿರಾಶಾವಾದಿಯೋ ಎಂಬುದನ್ನು ಪರೀಕ್ಷಿಸಿ.

ಒಬ್ಬೊಬ್ಬರ ವ್ಯಕ್ತಿತ್ವ (Personality) ಒಂದೊಂದು ರೀತಿ ಇರುತ್ತದೆ. ಸಾಮಾನ್ಯವಾಗಿ ಇಂತಹ ವ್ಯಕ್ತಿತ್ವವನ್ನು ಒಬ್ಬ ವ್ಯಕ್ತಿ ಧರಿಸುವ ಬಟ್ಟೆ, ಆತನ ಇತರರೊಂದಿಗೆ ನಡೆದುಕೊಳ್ಳುವ ರೀತಿ, ಆತನ ಮಾತು ಸೇರಿದಂತೆ ಬಾಹ್ಯವಾಗಿ ಕಾಣಿಸುವ ಅಂಶಗಳ ಮೂಲಕ ಆತನ ವ್ಯಕ್ತಿತ್ವವನ್ನು ಜನ ಅಳೆಯುತ್ತಾರೆ. ಇದೊಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ನಮ್ಮೊಳಗೆ ಅಡಗಿರುವ ನಿಗೂಡ ವ್ಯಕ್ತಿತ್ವ ಹೇಗಿದೆಯೆಂಬುದನ್ನು ನಾವೇ ಅಳೆಯಬಹುದು. ಆಂತಹದ್ದೊಂದು ವ್ಯಕ್ತಿತ್ವ ಪರೀಕ್ಷೆಯ (Personality) ಫೋಟೋ ಇದೀಗ ವೈರಲ್ ಆಗಿದ್ದು, ಆ ಚಿತ್ರದ ಮುಖಾಂತರ ನೀವು ಆಶಾವಾದಿ ವ್ಯಕ್ತಿತ್ವದವೇ ಅಥವಾ ನಿರಾಶಾವಾದಿಗಳೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.
ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸುವ ಅಂಶ ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ:
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ವ್ಯಕ್ತಿತ್ವ ಪರೀಕ್ಷೆಯನ್ನು Glass Almanac ಹೆಸರಿನ ಯುಟ್ಯೂಬ್ ಚಾನೆಲ್‌ನಲ್ಲಿ ಶೇರ್ ಮಾಡಲಾಗಿದೆ. ವ್ಯಕ್ತಿತ್ವ ಪರೀಕ್ಷೆಯ ಈ ಚಿತ್ರದಲ್ಲಿ ಮೊಲ ಮತ್ತು ಬಾತುಕೋಳಿ ಇದ್ದು, ಈ ಎರಡು ಅಂಶಗಳಲ್ಲಿ ನಿಮಗೇನು ಕಾಣಿಸಿತು ಎಂಬುದರ ಮೇಲೆ ನೀವು ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ.
ವಿಡಿಯೋ ಇಲ್ಲಿದೆ ನೋಡಿ:
ಮೊದಲು ಬಾತುಕೋಳಿ ಕಾಣಿಸಿದರೆ: ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಮಗೆ ಮೊದಲು ಬಾತುಕೋಳಿ ಕಾಣಿಸಿದರೆ ನೀವು ಆಶಾವಾದಿಗಳು ಎಂದರ್ಥ. ಮುಖ ತುಂಬ ನಗುವನ್ನು ಹೊಂದಿರುವ ನೀವು ಸಾರ್ವಜನಿಕವಾಗಿ ಪ್ರಕಾಶಮಾನವಾಗಿ ಶೈನ್ ಆಗುವವರಾಗಿರುತ್ತೀರಿ. ಸಕಾರಾತ್ಮಕತೆಯನ್ನು ಹೊಂದಿರುವ ನೀವು ಭಾವನೆಗಳಿಗೆ ಮತ್ತು ಕಾಳಜಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡುವವರಾಗಿರುತ್ತೀರಿ. ಜೊತೆಗೆ ಸೂಕ್ಷ್ಮ ಸ್ವಭಾವವನ್ನು ಹೊಂದಿರುವ ನೀವು ಇತರರ ಕಷ್ಟಗಳಿಗೂ ಬಹುಬೇಗ ಸ್ಪಂದಿಸುವ ಸ್ವಭಾವವನ್ನು ಹೊಂದಿದವರಾಗಿದ್ದೀರಿ.
ಇದನ್ನೂ ಓದಿ: ನೀವು ಹುಟ್ಟಿದ ತಿಂಗಳಿಗನುಗುಣವಾಗಿ ಯಾವ ಬಣ್ಣ ನಿಮಗೆ ಮ್ಯಾಚ್ ಆಗುತ್ತೆ ತಿಳಿಯಿರಿ
ಮೊದಲು ಮೊಲವನ್ನು ನೋಡಿದರೆ: ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನೀವು ಮೊದಲು ಮೊಲವನ್ನು ನೋಡಿದರೆ, ನೀವು ನಿರಾಶಾವಾದಿಯೆಂದು ಅರ್ಥ. ಅಲ್ಲದೆ ಇದು ನೀವು ಪ್ರತಿ ಕೆಲಸದಲ್ಲೂ ವಿಳಂಬವನ್ನು ಮಾಡುತ್ತೀರಿ ಎಂಬುದನ್ನು ಸೂಚಿಸುತ್ತದೆ. ಹೌದು ಮುಖ್ಯ ಕೆಲಸವೆಂದು ತಿಳಿದಿದ್ದರೂ ಸಹ ಭಯ, ಅಥವಾ ಉದಾಸೀನತೆಯಿಂದ ಆ ಕೆಲಸದಲ್ಲಿ ವಿಳಂಬ ಮಾಡುತ್ತೀರಿ. ಆದರೆ ಪ್ರೇರಣೆ, ಸ್ವಯಂ ಶಿಸ್ತಿನ ಪ್ರಮಾಣವನ್ನು ಮಾಡುವ ಮೂಲಕ ಈ ಉದಾಸೀನತೆಯಿಂದ ಹೊರ ಬಂದು, ಕೆಲಸವನ್ನು ಮತ್ತೆ ಮಾಡ್ತೇನೆ ಎನ್ನುವ ಬದಲು ಆಗ ಬೇಕಿದ್ದ ಕೆಲಸವನ್ನು ಈಗಲೇ ಮಾಡಿ ಮುಗಿಸುತ್ತೇನೆ ಎಂಬ ಮನಸ್ಥಿಯನ್ನು ರೂಪಿಸಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ