ಹಾಡಿನ ಒಂದು ಸಾಲಿನಿಂದಲೇ ಶುರುವಾಗಿದ್ದು ‘ದೂರ ತೀರ ಯಾನ’ ಸಿನಿಮಾ: ಮಂಸೋರೆ
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡೈರೆಕ್ಟರ್ ಮಂಸೋರೆ ನಿರ್ದೇಶನ ಮಾಡಿರುವ ‘ದೂರ ತೀರ ಯಾನ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜುಲೈ 11ರಂದು ಸಿನಿಮಾ ತೆರೆಕಾಣಲಿದೆ. ಈ ಸಿನಿಮಾದ ಟೈಟಲ್ ಸಾಂಗ್ ಇಂದು (ಜೂನ್ 10) ಬಿಡುಗಡೆ ಆಗಿದೆ. ಈ ವೇಳೆ ಮಂಸೋರೆ ಅವರು ಸಿನಿಮಾ ಬಗ್ಗೆ ಮಾತನಾಡಿದರು.
ಮಂಸೋರೆ ನಿರ್ದೇಶನ ಮಾಡಿರುವ ‘ದೂರ ತೀರ ಯಾನ’ (Doora Theera Yaana) ಸಿನಿಮಾ ಬಿಡುಗಡೆ ರೆಡಿಯಾಗಿದೆ. ಜುಲೈ 11ರಂದು ಚಿತ್ರ ತೆರೆಕಾಣಲಿದೆ. ಈ ಸಿನಿಮಾದ ಟೈಟಲ್ ಸಾಂಗ್ ಇಂದು (ಜೂನ್ 10) ಬಿಡುಗಡೆ ಆಗಿದೆ. ಈ ವೇಳೆ ಮಂಸೋರೆ (Director Mansore) ಅವರು ಸಿನಿಮಾ ಬಗ್ಗೆ ಮಾತನಾಡಿದರು. ಚಿತ್ರ ಶುರುವಾಗಲು ಕಾರಣ ಏನು ಎಂಬುದನ್ನು ವಿವರಿಸಿದರು. ‘ಸಿನಿಮಾ ಶುರುವಾಗಲು ಈ ಹಾಡಿನಲ್ಲಿ ಬರುವ ‘ಮುಗಿಯದು ನಮ್ಮ ಪಯಣ’ ಎಂಬ ಸಾಲು ಮುಖ್ಯ ಕಾರಣ. ಆ ಸಾಲನ್ನು ಕೊಟ್ಟಿದ್ದೇ ನಿರ್ಮಾಪಕ ದೇವರಾಜ್ ಅವರು. ಕಳೆದ ವರ್ಷ ನಾನು ಸ್ವಲ್ಪ ಕುಗ್ಗಿದ್ದಾಗ, ಮುಂದೇನು ಅಂತ ಬ್ಲ್ಯಾಂಕ್ ಆಗಿದ್ದೆ. ಆದ ನಿರ್ಮಾಪಕರು ಬಂದು ನಮ್ಮ ಜರ್ನಿ ಇಲ್ಲಿಗೆ ಮುಗಿಯಲ್ಲ ಅಂತ ಹೇಳಿದರು. ಅವರು ಹೇಳಿದ ಆ ಮಾತಿನಿಂದ ಈ ಸಿನಿಮಾ ಶುರುವಾಯಿತು’ ಎಂದಿದ್ದಾರೆ ಮಂಸೋರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?

Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ

‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್

ಟೇಕಾಫ್ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
