AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚಿಸಿದ್ದವರು ಸಿಕ್ಕಿಬಿದ್ದರು

ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚಿಸಿದ್ದವರು ಸಿಕ್ಕಿಬಿದ್ದರು

Sahadev Mane
| Updated By: ರಮೇಶ್ ಬಿ. ಜವಳಗೇರಾ

Updated on: Jun 10, 2025 | 9:45 PM

ರಾಜಸ್ಥಾನ ತಂಡದಲ್ಲಿ ಅವಕಾಶ ಕೊಡಿಸುವುದಾಗಿ 23 ಲಕ್ಷ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಸಂಜನ್, ದಿವಾಕರ್ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಪ್ರಕರಣ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು, (ಜೂನ್ 10): IPL ರಾಜಸ್ಥಾನ ತಂಡದಲ್ಲಿ ಅವಕಾಶ ಕೊಡಿಸುವುದಾಗಿ 23 ಲಕ್ಷ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಸಂಜನ್, ದಿವಾಕರ್ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮೇ 17ರಂದು ಯುವ ಕ್ರಿಕೆಟಿಗ ರಾಕೇಶ್ ಯಡೊರೆಗೆ ವಂಚಿಸಿದ್ದರು. ಹೈದರಾಬಾದ್​ ಗೆ ರಾಕೇಶ್ ತೆರಳಿದ್ದಾಗ ಕ್ರಿಕೆಟ್ ಆಡುತ್ತಿದ್ದ ರೀಲ್ಸ್ ಹಾಕಿದ್ದ. ಇದನ್ನು ಗಮನಿಸಿ ರಾಕೇಶ್​ ಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಸೈಬರ್ ವಂಚಕರು,ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಅವಕಾಶ ಕೊಡಿಸುವುದಾಗಿ ಮೆಸೇಜ್ ಮಾಡಿದ್ದರು. ನಂಬಿಕೆ ಬರಲು ರಾಕೇಶ್ ಯಡೊರೆಗೆ ಕೆಲವು ಸುಳ್ಳು ದಾಖಲೆ ಕಳುಹಿಸಿದ್ದರು. ಇದನ್ನು ನಂಬಿದ ರಾಕೇಶ್, ಆನ್​ ಲೈನ್​ ಮೂಲಕ 23 ಲಕ್ಷಕ್ಕೂ ಹೆಚ್ಚ ಹಣ ವರ್ಗಾಯಿಸಿದ್ದಾನೆ. ಬಳಿಕ ತಾನು ವಂಚನೆಗೊಳಗಾಗಿದ್ದು ತಡವಾಗಿ ಅರಿವಿಗೆ ಬಂದಿದೆ ಎಂದು ತಿಳಿಸಿದರು.

ಬಳಿಕ ರಾಕೇಶ್ ಯಡೊರೆ ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆಗೆ ದೂರು ನೀಡಿದ್ದ. ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಉತ್ತರ ಪ್ರದೇಶ ಸುಲ್ತಾನ್​ಪುರಕ್ಕೆ ತೆರಳಿ ಇಬ್ಬರನ್ನು ಬಂಧಿಸಿದ್ದು, ಸುಸಂಜನ್, ದಿವಾಕರ್ ಬಂಧಿಸಿ ಕರೆತಂದಿದ್ದಾರೆ. ಸದ್ಯ ಆರೋಪಿಗಳನ್ನು ಬೆಳಗಾವಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,
ಪ್ರಸ್ತುತ ಇಬ್ಬರು ಸೈಬರ್ ವಂಚಕರು ಹಿಂಡಲಗಾ ಸೆಂಟ್ರಲ್ ಜೈಲಿನಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.