ದೆಹಲಿ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ; 8ನೇ ಮಹಡಿಯಿಂದ ಹಾರಿದ ತಂದೆ, ಇಬ್ಬರು ಮಕ್ಕಳ ದುರಂತ ಸಾವು
ದೆಹಲಿಯ ದ್ವಾರಕಾ ಅಪಾರ್ಟ್‌ಮೆಂಟ್ ಬೆಂಕಿ ಅವಘಡ ಸಂಭವಿಸಿದೆ. ತಂದೆ ಮತ್ತು ಇಬ್ಬರು ಮಕ್ಕಳು ಉರಿಯುತ್ತಿರುವ ಕಟ್ಟಡದಿಂದ ಹಾರುತ್ತಿರುವ ಶಾಕಿಂಗ್ ವೀಡಿಯೊ ವೈರಲ್ ಆಗಿದೆ. ಮಂಗಳವಾರ ಮುಂಜಾನೆ ಎಂಆರ್‌ವಿ ಶಾಲೆಯ ಬಳಿಯ ದ್ವಾರಕಾ ಸೆಕ್ಟರ್ 13 ರಲ್ಲಿರುವ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದ ನಿವಾಸಿಗಳು ಸಿಲುಕಿಕೊಂಡರು. ದೆಹಲಿ ಅಗ್ನಿಶಾಮಕ ದಳಕ್ಕೆ ತುರ್ತು ಕರೆ ಬಂದಿತು. ಬೆಂಕಿಯನ್ನು ನಿಯಂತ್ರಿಸಲು ಮತ್ತು ಸಿಕ್ಕಿಬಿದ್ದವರನ್ನು ರಕ್ಷಿಸಲು ಸ್ಕೈಲಿಫ್ಟ್ ಜೊತೆಗೆ ಎಂಟು ಅಗ್ನಿಶಾಮಕ ದಳಗಳನ್ನು ತಕ್ಷಣವೇ ಕಳುಹಿಸಲಾಯಿತು.
ನವದೆಹಲಿ, ಜೂನ್ 10: ದೆಹಲಿಯ ದ್ವಾರಕಾದ (Dwaraka) ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ತಂದೆ ಮತ್ತು ಅವರ ಇಬ್ಬರು ಮಕ್ಕಳು ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆಯಿಂದ ಬಹುಮಹಡಿ ಕಟ್ಟಡಗಳಲ್ಲಿ ಬೆಂಕಿಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ದೆಹಲಿಯ ಅಪಾರ್ಟ್‌ಮೆಂಟ್‌ನ ಮೇಲಿನ ಮಹಡಿಯಲ್ಲಿ ಬೆಂಕಿ (Fire Accident) ಕಾಣಿಸಿಕೊಂಡಿದೆ. ತಕ್ಷಣ ಇಡೀ ಮಹಡಿಯನ್ನು ಬೆಂಕಿ ಆವರಿಸಿದೆ. ಈ ವೇಳೆ ಜೀವ ಉಳಿಸಿಕೊಳ್ಳಲು ತಂದೆ ಮತ್ತು ಇಬ್ಬರು ಸಣ್ಣ ಮಕ್ಕಳು 8ನೇ ಮಹಡಿಯಿಂದ ಕೆಳಗೆ ಹಾರಿದ್ದಾರೆ. ಆದರೆ, ನೆಲಕ್ಕೆ ತಲೆ ಬಡಿದು ಅವರು ಸಾವನ್ನಪ್ಪಿದ್ದಾರೆ. ಈ ಘಟನೆಯ ಶಾಕಿಂಗ್ ವಿಡಿಯೋ ವೈರಲ್ ಆಗಿದೆ. 35 ವರ್ಷದ ಯಶ್ ಯಾದವ್ ತನ್ನ 10 ವರ್ಷದ ಇಬ್ಬರು ಮಕ್ಕಳನ್ನು ಹಿಡಿದುಕೊಂಡು ಬೆಂಕಿಯಿಂದ ತಪ್ಪಿಸಿಕೊಳ್ಳಲು ಉರಿಯುತ್ತಿರುವ ಅಪಾರ್ಟ್‌ಮೆಂಟ್‌ನ ಎಂಟನೇ ಮಹಡಿಯಿಂದ ಹಾರಿದ ಭಯಾನಕ ಕ್ಷಣವನ್ನು ವಿಡಿಯೋದಲ್ಲಿ ನೋಡಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ