AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲ್ತುಳಿತದ ಘಟನೆ ನಂತರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹೈಕಮಾಂಡ್ ವಿವರಣೆ ಕೇಳಿತು: ಸಿದ್ದರಾಮಯ್ಯ

ಕಾಲ್ತುಳಿತದ ಘಟನೆ ನಂತರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹೈಕಮಾಂಡ್ ವಿವರಣೆ ಕೇಳಿತು: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 10, 2025 | 5:11 PM

ಕರ್ನಾಟಕ ಸರ್ಕಾರ ಹತ್ತು ವರ್ಷಗಳ ಹಿಂದೆ ನಡೆಸಿದ ಜಾತಿಗಣತಿ ಬಗ್ಗೆ ಹೈಕಮಾಂಡ್ ಮೆಚ್ಚಗೆ ಸೂಸಿ ಅದನ್ನು ತಾತ್ವಿಕವಾಗಿ ಅಂಗೀಕರಿಸಿದೆ, ಆದರೆ ಗಣತಿಯನ್ನು ಹತ್ತು ವರ್ಷಗಳಷ್ಟು ಹಿಂದೆ ಮಾಡಿದ್ದರಿಂದ ವರದಿಯಲ್ಲಿನ ಅಂಕಿ ಅಂಶಗಳು ಬದಲಾಗಿವೆ, ಇದೇ ಕಾರಣಕ್ಕೆ ಮರುಸರ್ವೇ ಅವಶ್ಯಕತೆಯಿದೆ ಎಂದು ವರಿಷ್ಠರು ಅಭಿಪ್ರಾಯಪಟ್ಟಿದ್ದಾರೆ, ಅದನ್ನು ಮುಂದಿನ 90ದಿನಗಳೊಳಗೆ ಮಾಡಿಸಿ ವರದಿ ಸಲ್ಲಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ದೆಹಲಿ, ಜೂನ್ 10: ರಾಜಧಾನಿಯಲ್ಲಿ ಪಕ್ಷದ ಹೈಕಮಾಂಡ್ ನಾಯಕರೊಂದಿಗೆ (Congress high command) ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎರಡು ವಿಷಯಗಳನ್ನು ಪ್ರಮುಖವಾಗಿ ಚರ್ಚಿಸಲಾಯಿತು, ಮೊದಲನೆಯದ್ದು ಜಾತಿ ಗಣತಿ ಮತ್ತು ಎರಡನೇಯದ್ದು ಒಂದು ವಾರದ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದ ಘಟನೆ ಎಂದು ಹೇಳಿದರು. ಕಾಲ್ತುಳಿತ ಸಂಭವಿಸಿದ ಬಳಿಕ ಏನೆಲ್ಲ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ-ನ್ಯಾಯಾಂಗ ತನಿಖೆ, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ವಿಚಾರಣೆ, ಪೊಲೀಸ್ ಮತ್ತು ಗುಪ್ತಚರ ವಿಭಾಗ ಅಧಿಕಾರಿಗಳ ಅಮಾನತು, ಮೊದಲಾದವುಗಳನ್ನು ಹೈಕಮಾಂಡ್​ಗೆ ವಿವರಿಸಲಾಯಿತು ಎಂದು ಸಿಎಂ ಹೇಳಿದರು.

ಇದನ್ನೂ ಓದಿ: ಮುಡಾ ಹಗರಣದಲ್ಲಿ 100 ಕೋಟಿ ಆಸ್ತಿ ಜಪ್ತಿ: ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ