ಬೆಳಗ್ಗೆ ಚಾಕಲೇಟ್​ ಸೇವಿಸುವುದರಿಂದ ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಿಕೊಳ್ಳಬಹುದು: ಅಧ್ಯಯನ

ಹಾಲಿನ ಚಾಕಲೇಟ್​ ತಿನ್ನುವ ಸಮಯವು ದೇಹದ ತೂಕ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ ಸಂಶೋಧಕರು ಕಂಡುಹಿಡಿದಿದ್ದಾರೆ.

ಬೆಳಗ್ಗೆ ಚಾಕಲೇಟ್​ ಸೇವಿಸುವುದರಿಂದ  ತೂಕ  ಮತ್ತು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಿಕೊಳ್ಳಬಹುದು: ಅಧ್ಯಯನ
ಚಾಕಲೇಟ್
Follow us
TV9 Web
| Updated By: shruti hegde

Updated on: Jul 01, 2021 | 3:00 PM

ಸಾಮಾನ್ಯವಾಗಿ ಚಾಕಲೇಟ್​ ಎಂದರೆ ಎಲ್ಲರಿಗೂ ಇಷ್ಟ. ಮಕ್ಕಳಿಂದ ವಯಸ್ಕರವರೆಗೂ ಸಹ ಚಾಕಲೇಟ್​ ಸವಿಯದವರೇ ಇಲ್ಲ! ಅದರಲ್ಲಿಯೂ ಮಿಲ್ಕ್​ ಚಾಕಲೆಟ್​ಗಳನ್ನು ಹೆಚ್ಚು ಇಷ್ಟಪಟ್ಟು ಇನ್ನುತ್ತಾರೆ. ಹಾಲಿನಿಂದ ತಯಾರಿಸಿ ಚಾಕಲೇಟ್​ನಲ್ಲಿರುವ ಹೆಚ್ಚಿನ ಕ್ಯಾಲೋರಿ ಸಾಮಾನ್ಯವಾಗಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದರೆ ಚಾಕಲೇಟ್​ ಸೇವಿಸುವ ಸಮಯ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಹಾಗಿರುವಾಗ ನಿರ್ದಿಷ್ಟ ಸಮಯದಲ್ಲಿ ಚಾಕಲೇಟ್​ ಸೇವಿಸುವರಿಂದ ರಕ್ತದಲ್ಲಿನ ಸಕ್ಕರೆ ಮತ್ತು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಈ ಕುರಿತಂತೆ ಸ್ಪೇನ್​ನ ಬ್ರಿಗಮ್​ ಮತ್ತು ಮರ್ಸಿಯಾ ವಿಶ್ವ ವಿದ್ಯಾಲಯದ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಹಾಲಿನ ಚಾಕಲೇಟ್​ ತಿನ್ನುವ ಸಮಯವು ದೇಹದ ತೂಕ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿದಿದ್ದಾರೆ. ಹೆಚ್ಚು ಶುಲ್ಕವುಳ್ಳ 100ಗ್ರಾಂ ಮಿಲ್ಕ್​ ಚಾಕಲೇಟ್​ಟನ್ನು ಸೇವಿಸುವುದರಿಂದ ದೇಹದಲ್ಲಿನ ಹೆಚ್ಚಿನ ಕೊಬ್ಬನ್ನು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹೊಸ ಅಧ್ಯಯನವನ್ನು FASEB ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

19 ಮಹಿಳೆಯರೊಂದಿಗೆ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಮಹಿಳೆಯರು ಬೆಳಗ್ಗೆ ಎದ್ದ ತಕ್ಷಣದ ಒಂದು ಗಂಟೆಯ ಒಳಗೆ 10 ಗ್ರಾಂ ಚಾಕಲೇಟ್​ಅನ್ನು ಸೇವಿಸಿದರು. ಹಾಗೆಯೇ ರಾತ್ರಿ ಮಲಗುವ ಒಂದು ಗಂಟೆಯ ಒಳಗೆ ಮತ್ತೊಂದು ಚಾಕಲೇಟನ್ನು ಸೇವಿಸುತ್ತಿದ್ದರು. ಅಧ್ಯಯನ ನಡೆಸಿದ ಬಳಿಕ ಸಂಶೋಧಕರು ನೀಡಿದ ವರದಿ ಹೀಗಿದೆ..

*ಬೆಳಗ್ಗೆ ಮತ್ತು ರಾತ್ರಿ ಹೊತ್ತಿನಲ್ಲಿ ಚಾಕಲೇಟ್​ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗಲಿಲ್ಲ *ಬೆಳಗ್ಗಿನ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಾಕಲೇಟ್​ ಸೇವಿಸುವುದು ಕೊಬ್ಬನ್ನು ಕರಗಿಸಲು ಮತ್ತು ರಕ್ತದಲ್ಲಿನ ಗ್ಲುಕೋಸ್​ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ *ರಾತ್ರಿ ಚಾಕಲೇಟ್​ ಸೇವನೆ ಮತ್ತು ಬೆಳಗ್ಗಿನ ವಿಂಶ್ರಾಂತಿ ಮತ್ತು ವ್ಯಾಯಾಮ ಚಯಾಪಚಯ ಕ್ರಿಯೆಯನ್ನು ಬದಲಿಸುತ್ತದೆ

ನಮ್ಮ ಅಧ್ಯಯನದ ಪ್ರಕಾರ ನಾವು ಚಾಕಲೇಟ್​ ತಿನ್ನುವ ಸಮಯ ಯಾವುದು ಎಂಬುದು ನಮ್ಮ ದೇಹದ ತೂಕವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಸಂಶೋಧಕ ಸ್ಕೀರ್​ ಹೇಳಿದ್ದಾರೆ. ನಮ್ಮ ಸಂಶೋಧನೆಯಲ್ಲಿ ತೊಡಗಿದ್ದ ಮಹಿಳೆಯರಲ್ಲಿ ಕ್ಯಾಲೊರಿ ಹೆಚ್ಚಿರುವ ಚಾಕಲೇಟನ್ನು ಸೇವಿಸಿದರೂ ಸಹ ತೂಕ ಹೆಚ್ಚಳಕ್ಕೆ ಕಾರಣವಾಗಲಿಲ್ಲ ಎಂದು ಗರೌಲೆಟ್​ ಹೇಳಿದ್ದಾರೆ.

ಇದನ್ನೂ ಓದಿ:

Chocolate Coffee: ಮನೆಯಲ್ಲಿ ಸುಲಭವಾಗಿ ಮಾಡಿ ಚಾಕಲೇಟ್ ಕಾಫಿ; ಮಾಡುವ ವಿಧಾನ ಇಲ್ಲಿದೆ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ