AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಅಧಿಕ ಕೊಲೆಸ್ಟ್ರಾಲ್​ ಆರೋಗ್ಯಕ್ಕೆ ಅಪಾಯಕಾರಿ; ಕೊಲೆಸ್ಟ್ರಾಲ್​ ಹೆಚ್ಚಿಸುವ ಕೆಲವು ಆಹಾರ ಪದಾರ್ಥಗಳು ಯಾವುವು? ಇಲ್ಲಿದೆ ವಿವರ 

Cholesterol increasing: ಪ್ರಸ್ತುತದಲ್ಲಿನ ಕೊರೊನಾ ಸಾಂಕ್ರಾಮಿಕದ ಹರಡುವಿಕೆಯಿದಾಗಿ ಮನೆಯಲ್ಲಿಯೇ ಇರುವ ಪರಿಸ್ಥಿತಿ ಎದುರಾಗಿತ್ತು. ಮನೆಯಲ್ಲಿ ಕುಳಿತಲ್ಲಿಯೇ ಕೆಲಸ ಮಾಡುತ್ತಿರುವ ಅದೆಷ್ಟೋ ಉದ್ಯೋಗಿಗಳಿಗೆ ಕೊಲೆಸ್ಟ್ರಾಲ್​ ಮಟ್ಟ ಅಧಿಕವಾಗಿದೆ. ಇದಕ್ಕೆ ನಿಯಮಿತ ಪೌಷ್ಠಿಕ ಆಹಾರದ ಜತೆಗೆ ವ್ಯಾಯಾಮ ಅಭ್ಯಾಸ ಬೇಕು.

Health Tips: ಅಧಿಕ ಕೊಲೆಸ್ಟ್ರಾಲ್​ ಆರೋಗ್ಯಕ್ಕೆ ಅಪಾಯಕಾರಿ; ಕೊಲೆಸ್ಟ್ರಾಲ್​ ಹೆಚ್ಚಿಸುವ ಕೆಲವು ಆಹಾರ ಪದಾರ್ಥಗಳು ಯಾವುವು? ಇಲ್ಲಿದೆ ವಿವರ 
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 02, 2021 | 7:40 AM

Share

ಇತ್ತೀಚೆಗೆ ಜನರ ಆರೋಗ್ಯದಲ್ಲಿ ಕೊಲೆಸ್ಟ್ರಾಲ್​​ ಮಟ್ಟ ಹೆಚ್ಚಾಗುತ್ತಲೇ ಇದೆ. ಇದರಿಂದ ದೇಹದ ತೂಕ ಜಾಸ್ತಿಯಾಗುತ್ತಿದೆ. ಮಕ್ಕಳಲ್ಲೂ ಸಹ ಹೆಚ್ಚಿನ ತೂಕದಿಂದಾಗಿ ಆರೋಗ್ಯದಲ್ಲಿ ದುರ್ಬಲತೆ ಕಂಡು ಬರುತ್ತಿದೆ. ಇದಕ್ಕೆಲ್ಲಾ ಕಾರಣ ಆಹಾರದ ವ್ಯವಸ್ಥೆ. ನಮ್ಮ ಆಹಾರ ವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಆರೋಗ್ಯದಲ್ಲಿ ಸುಧಾರಣೆಯನ್ನು ಕಂಡುಕೊಳ್ಳಬಹುದಾಗಿದೆ. ಹಾಗಿದ್ದಾಗ ಕೊಲೆಸ್ಟ್ರಾಲ್​ ಹೆಚ್ಚಿಸುವ ಆಹಾರ ಪದಾರ್ಥಗಳು ಯಾವುದು ಎಂಬುದರ ಕುರಿತಾಗಿ ತಿಳಿಯೋಣ.

ದೇಹದಲ್ಲಿ ಕೊಲೆಸ್ಟ್ರಾಲ್​ ಮಟ್ಟ ಹೆಚ್ಚಳ ಬೊಜ್ಜಿಗೆ ಕಾರಣವಾಗುತ್ತದೆ. ಇದು ದೇಹದಲ್ಲಿನ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಹೆಚ್ಚು ಆಯಾಸ, ಅಸ್ವಸ್ಥತೆ, ಜತೆಗೆ ಇನ್ನಿತರ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತದೆ. ಅದರಲ್ಲಿಯೂ ಪ್ರಸ್ತುತ ಕೊರೊನಾ ಸಾಂಕ್ರಾಮಿಕದ ಹರಡುವಿಕೆಯಿದಾಗಿ ಮನೆಯಲ್ಲಿಯೇ ಇರುವ ಪರಿಸ್ಥಿತಿ ಎದುರಾಗಿತ್ತು. ಮನೆಯಲ್ಲಿ ಕುಳಿತಲ್ಲಿಯೇ ಕೆಲಸ ಮಾಡುತ್ತಿರುವ ಅದೆಷ್ಟೋ ಉದ್ಯೋಗಿಗಳಿಗೆ ಕೊಲೆಸ್ಟ್ರಾಲ್​ ಮಟ್ಟ ಅಧಿಕವಾಗಿದೆ. ಇದಕ್ಕೆ ನಿಯಮಿತ ಪೌಷ್ಠಿಕ ಆಹಾರದ ಜತೆಗೆ ವ್ಯಾಯಾಮ ಅಭ್ಯಾಸ ಬೇಕು.

ಕೊಬ್ಬಿನ ಆಹಾರ ಪದಾರ್ಥಗಳಿಂದ ದೂರವಿರುವುದು ಜಂಕ್​ಫುಡ್​ಗಳಲ್ಲಿ ಹೆಚ್ಚು ಕೊಬ್ಬಿನಾಂಶ ಕಂಡು ಬರುತ್ತದೆ. ಎಣ್ಣೆಯಲ್ಲಿ ಕರಿದ ತಿಂಡಿಗಳು ದೇಹದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚಿಸುತ್ತದೆ. ದೇಹಕ್ಕೆ ವ್ಯಾಯಾಮ ಇಲ್ಲದಿದ್ದಾಗ ಅಧಿಕ ಕೊಲೆಸ್ಟ್ರಾಲ್​ ನಮ್ಮ ಆರೋಗ್ಯದಲ್ಲಿ ಸಮಸ್ಯೆಯನ್ನು ತರುತ್ತದೆ. ಹಾಗಿದ್ದಾಗ ಜಂಕ್​ಫುಡ್​ ಸೇವನೆಯನ್ನು ಆದಷ್ಟು ತ್ಯಜಿಸಿ. ಪಾನಿಪುರಿ, ಗೋಬಿ ಮಂಚೂರಿಯಂತಹ ಅತಿಯಾದ ಆಹಾರ ಸೇವನೆ ನಿಮ್ಮ ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ.

ಅತಿಯಾದ ಮಾಂಸ ಸೇವನೆಯನ್ನು ತ್ಯಜಿಸಿ ನೀವು ಮಾಂಸಾಹಾರಿಗಳಾಗಿದ್ದರೆ ಕೆಂಪು ಮಾಂಸವನ್ನು ಅತಿಯಾಗಿ ಸೇವಿಸುವುದನ್ನು ತ್ಯಜಿಸಿ. ಮಾಂಸ ಸೇವನೆಯು ದೇಹದಲ್ಲಿ ಕೊಲೆಸ್ಟ್ರಾಲ್​ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಗಟ್ಟಿ ಮಾಂಸದ ಬದಲಾಗಿ ತೆಳ್ಳಗಿನ ಮಾಂಸ ಸೇವನೆ ಮಾಡಿ.

ಕಡಿಮೆ ಕ್ಯಾಲ್ಸಿಯಂ ಆಹಾರ ಕೊಲೆಸ್ಟ್ರಾಲ್​ ಮಟ್ಟ ಹೆಚ್ಚಿಸುತ್ತದೆ ನಮ್ಮ ದೇಹವು ಆರೋಗ್ಯಕರವಾಗಿರಲು ಮತ್ತು ಸದೃಢವಾಗಿರಲು ಕ್ಯಾಲ್ಸಿಯಂ ಬಹಳ ಮುಖ್ಯವಾದ ಪೋಷಕಾಂಶ. ಮೂಳೆಗಳು ಮತ್ತು ಮೆದುಳಿನ ಬೆಳವಣಿಗೆಗೆ ಇದು ಸಹಾಯಕವಾಗಿದೆ. ಹೆಚ್ಚಿನ ಅಧ್ಯಯನಗಳಿಂದ ತಿಳಿದು ಬಂದಂತೆ ಕ್ಯಾಲ್ಸಿಯಂ ಪೋಷಕಾಂಶ, ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ, ಡೈರಿ ಉತ್ಪನ್ನಗಳಾದ ಹಾಲು- ಮೊಸರು ಇತ್ಯಾದಿಗಳು, ಮೊಟ್ಟೆ, ಪಾಲಾಕ್​ನಂತಹ ಆಹಾರ ಪದಾರ್ಥಗಳನ್ನು ಸೇವಿಸದಿದ್ದರೆ ದೇಹದಲ್ಲಿ ಕೊಲೆಸ್ಟ್ರಾಲ್​ ಮಟ್ಟ ಹೆಚ್ಚುವ ಸಾಧ್ಯತೆ ಇದೆ.

ಆಲ್ಕೋಹಾಲ್​ ಸೇವನೆ ಕೊಲೆಸ್ಟ್ರಾಲ್​ ಮಟ್ಟ ಹೆಚ್ಚಿಸುತ್ತದೆ ಮದ್ಯಪಾನ ಸೇವನೆಯು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಮಾನಸಿಕ ಸಮಸ್ಯೆಯ ಜತೆಗೆ ದೈಹಿಕ ಸಮಸ್ಯೆಗೂ ಕಾರಣವಾಗುತ್ತದೆ. ಕ್ಯಾನ್ಸರ್​ ಸೇರಿದಂತೆ ಹಲವು ರೋಗಗಳಿಗೆ ಕಾರಣವಾಗುತ್ತದೆ. ಜತೆಗೆ ದೇಹದಲ್ಲಿ ಕೊಲೆಸ್ಟ್ರಾಲ್​ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಿರುವಾಗ ಮದ್ಯಪಾನ ಸೇವನೆಯಿಂದ ದೂರವಿರುವುದು ಅವಶ್ಯಕವಾಗಿದೆ.

ಮಾನಸಿಕ ಒತ್ತಡ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ. ಕೆಲಸದಲ್ಲಿ ಒತ್ತಡ, ಕೌಟುಂಬಿಕ ಕಲಹ, ಆರ್ಥಿಕ ತೊಂದರೆಗಳು, ಭಾವನಾತ್ಮಕ ಒತ್ತಡ ಇವುಗಳು ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ. ಇದು ತಲೆನೋವು, ರಕ್ತದೊತ್ತಡದಂತಹ ಸಮಸ್ಯೆಗೆ ಕಾರಣವಾಗಬಹುದು. ಹಾಗಿರುವಾಗ ಒತ್ತಡವನ್ನು ನಿಯಂತ್ರಿಸಲು ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡಿಕೊಳ್ಳುವ ಅವಶ್ಯಕತೆ ಇದೆ.

ಇದನ್ನೂ ಓದಿ:

Obesity: ಕೊರೊನಾ ಸಮಯದಲ್ಲಿ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಕಾಡುತ್ತಿದೆಯೇ? ಪರಿಹಾರ ಕ್ರಮಗಳು ಹೀಗಿವೆ

Curry Leaves: ಕರಿಬೇವಿನ ಚಹಾ ಮಾಡಿ ಸವಿಯಿರಿ; ಇದರಲ್ಲಿರುವ ಔಷಧೀಯ ಗುಣ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ