Curry Leaves: ಕರಿಬೇವಿನ ಚಹಾ ಮಾಡಿ ಸವಿಯಿರಿ; ಇದರಲ್ಲಿರುವ ಔಷಧೀಯ ಗುಣ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ

Curry Leaves Health Benefits: ದೇಹದಲ್ಲಿ ಸೋಂಕು ಮತ್ತು ಉರಿಯೂತ ಸಮಸ್ಯೆಯನ್ನು ತಡೆಗಟ್ಟಲು ಕರಿಬೇವು ತುಂಬಾ ಸಹಾಯಕಾರಿಯಾಗಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಶಕ್ತಿ ಆರೋಗ್ಯವನ್ನು ಸುಧಾರಿಸುತ್ತದೆ.

Curry Leaves: ಕರಿಬೇವಿನ ಚಹಾ ಮಾಡಿ ಸವಿಯಿರಿ; ಇದರಲ್ಲಿರುವ ಔಷಧೀಯ ಗುಣ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ
ಕರಿ ಬೇವಿನ ಎಲೆಗಳ ಚಹ
Follow us
TV9 Web
| Updated By: Skanda

Updated on: Jun 30, 2021 | 8:26 AM

ನಾವು ಮಾಡುವ ಅಡುಗೆಯಲ್ಲಿ ಸಾಮಾನ್ಯವಾಗಿ ಕರಿಬೇವನ್ನು ಬಳಸುತ್ತೇವೆ. ಹಾಗಾಗಿಯೇ ಪ್ರತಿಯೊಬ್ಬರ ಮನೆಯಲ್ಲಿ ಕರಿಬೇವಿನ ಗಿಡ ಇದ್ದೇಇರುತ್ತದೆ. ಆದರೆ ಊಟ ಮಾಡುವಾಗ ಅಡುಗೆಯಲ್ಲಿ ಕರಿಬೇವಿನ ಎಲೆಗಳು ಸಿಕ್ಕರೆ ಅದನ್ನು ಬದಿಗಿಡುತ್ತೇವೆ. ಅದರ ಬದಲಾಗಿ ಊಟದ ಜತೆಗೆ ಕರಿಬೇವಿನ ಎಲೆಗಳನ್ನು ಸವಿಯುವುದು ಆರೊಗ್ಯಕ್ಕೆ ಉತ್ತಮ. ಸಾಮಾನ್ಯವಾಗಿ ಅಡುಗೆಗೆ ರುಚಿ ತಂದುಕೊಡಲು ಕರಿಬೇವನ್ನು ಬಳಸಿದರೆ, ಇದರ ಚಹಾ ಮಾಡಿ ಸವಿದರೆ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.

ದೇಹದಲ್ಲಿ ಸೋಂಕು ಮತ್ತು ಉರಿಯೂತ ಸಮಸ್ಯೆಯನ್ನು ತಡೆಗಟ್ಟಲು ಕರಿಬೇವು ತುಂಬಾ ಸಹಾಯಕಾರಿಯಾಗಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಶಕ್ತಿ ಆರೋಗ್ಯವನ್ನು ಸುಧಾರಿಸುತ್ತದೆ. ಚರ್ಮದ ಕೋಶಗಳನ್ನು ಸದೃಢಗೊಳಿಸುತ್ತದೆ. ಆ ಮೂಲಕ ನಿಮಗೆ ಯಾವುದೇ ಚರ್ಮದ ಸಮಸ್ಯೆ ಕಾಡುವುದಿಲ್ಲ.

ಆರೋಗ್ಯಕ್ಕೆ ಉತ್ತಮ ಕರಿಬೇವಿನಿಂದ ತಯಾರಿಸಿದ ಚಹಾ ಆರೋಗ್ಯಕ್ಕೆ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ. ರಕ್ತದೊತ್ತಡ ಅಥವಾ ಮಾನಸಿಕ ಒತ್ತಡಕ್ಕೆ ಸಿಲುಕಿಕೊಂಡಿರುವವರು ಕರಿಬೇವಿನ ಎಲೆಗಳಿಂದ ತಯಾರಿಸಿದ ಚಹಾ ಸವಿದರೆ ಒತ್ತಡಕ್ಕೆ ಒಳಗಾಗುವುದನ್ನು ತಡೆಯಬಹುದು. ಕರಿಬೇವು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ವಾಂತಿ, ವಾಕರಿಕೆಯ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ಕರಿಬೇವಿನ ಚಹಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮಧುಮೇಹ ಸಮಸ್ಯೆಯನ್ನು ನಿಯಂತ್ರಿಸಲು ಕರಿಬೇವು ಸಹಾಯ ಮಾಡುತ್ತದೆ. ಜಠರಗಳಿಗೆ ರಕ್ಷಣೆಯನ್ನು ನೀಡುತ್ತದೆ. ಅತಿಸಾರವನ್ನು ಗುಣಪಡಿಸುತ್ತದೆ. ದೇಹದಲ್ಲಿ ತೂಕ ಹೆಚ್ಚಿಸುವ ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಚರ್ಮದ ಆರೈಕೆ ಮಾಡಿಕೊಳ್ಳಲು ಕರಿಬೇವಿನ ಸೇವನೆ ಒಳ್ಳೆಯದು. ಇದು ಪಿತ್ತಜನಕಾಂಗದ ಆರೋಗ್ಯವನ್ನು ಸುಧಾರಿಸುತ್ತದೆ.

ಕಪ್ಪು ಕೂದಲು ಕರಿಬೇವಿನ ತೈಲವನ್ನು ತಯಾರಿಸಬಹುದು. ಇದು ತಲೆ ಕೂದಲಿನ ಬೆಳವಣಿಗೆಗೆ ಸಹಾಯಕವಾಗಿದೆ. ಕೂದಲು ಹೆಚ್ಚು ಕಪ್ಪಾಗಿರುವಂತೆ ನೋಡಿಕೊಳ್ಳುತ್ತದೆ. ಈಗಿನ ಯುವಕ-ಯುವತಿಯರು ತಲೆ ಕೂದಲು ಬೆಳ್ಳಗಾಗುವ ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ. ಜತೆಗೆ ಕೂದಲು ಉದುರುವ ಸಮಸ್ಯೆ ಕಾಡುತ್ತಿರುತ್ತದೆ. ಇದರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರಿಬೇವಿನ ಎಲೆಗಳಿಂದ ತಯಾರಿಸಿದ ಎಣ್ಣೆಯನ್ನು ವಾರಕ್ಕೊಮ್ಮೆಯಾದರೂ ತಲೆಕೂದಲಿಗೆ ಹಚ್ಚುವ ಅಭ್ಯಾಸ ಮಾಡಿಕೊಳ್ಳಿ.

ಚಹಾ ತಯಾರಿಸುವ ವಿಧಾನ ಕರಿಬೇವಿನ ಎಲೆಗಳನ್ನು ಸಂಗ್ರಹಿಸಿ ಸ್ವಚ್ಛವಾಗಿ ತೊಳೆಯಿರಿ. ನಂತರ ಒಂದು ಪಾತ್ರೆಗೆ ನೀರು ಹಾಕಿ ಚೆನ್ನಾಗಿ ಕುದಿಸಿ. ನಂತರ ಕುದಿಯುತ್ತಿರುವ ನೀರಿಗೆ ಕರಿಬೇವಿನ ಎಲೆಗಳು ಮತ್ತು ಶುಂಠಿಯನ್ನು ಸೇರಿಸಿ ಕುದಿಸಿ. ಇದೀಗ ಕರಿಬೇವಿನ ಚಹಾ ಸಿದ್ಧಗೊಂಡಿದೆ. ಇದಕ್ಕೆ ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿ ಸವಿಯಬಹುದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದನ್ನೂ ಓದಿ:

Neem Leaves: ಕಹಿ ಬೇವಿನ ಸೇವನೆ ಕಷ್ಟವಾದರೂ, ಆರೋಗ್ಯಕರ ಗುಣಗಳ ದೃಷ್ಟಿಯಿಂದ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ

ದಾವಣಗೆರೆ ಸ್ಪೆಷಲ್ ನರ್ಗಿಸ್ ಮಂಡಕ್ಕಿ; ಬಿಸಿ ಬಿಸಿ ಟೀ ಜೊತೆಗೆ ಮಾಡಿ ಸವಿಯಿರಿ