Aloe Vera Juice: ವಸಡು ಸವೆತ, ಹಲ್ಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಲೋಳೇಸರ ಜ್ಯೂಸ್​ ಉತ್ತಮ ಪರಿಹಾರ

ಅಲೋವೆರಾ ಪ್ರಯೋಜನಗಳು: ದೇಹದ ಕೀಲುಗಳು ಬಲಿಷ್ಠಗೊಳ್ಳುತ್ತವೆ. ಕೀಲು ನೋವಿನಿಂದ ಮುಕ್ತಿ ಹೊಂದಬಹುದು. ಜತೆಗೆ ದೇಹವು ಅಗತ್ಯವಾದ ಜೀವಸತ್ವಗಳನ್ನು ಪಡೆಯುತ್ತದೆ. ಅತಿಸಾರ ಸಮಸ್ಯೆಯಿಂದ ಬಳಲುತ್ತಿರುವವರು ಅಲೋವೆರಾ ಜೆಲ್ ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

Aloe Vera Juice: ವಸಡು ಸವೆತ, ಹಲ್ಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಲೋಳೇಸರ ಜ್ಯೂಸ್​ ಉತ್ತಮ ಪರಿಹಾರ
ಅಲೋವೆರಾ ಜ್ಯೂಸ್
Follow us
TV9 Web
| Updated By: Skanda

Updated on: Jun 30, 2021 | 7:05 AM

ನೈಸರ್ಗಿಕವಾಗಿ ಸಿಗುವ ಲೋಳೇಸರ ಅಥವಾ ಅಲೋವೆರಾ ಜೆಲ್​ಅನ್ನು ಸಾಮಾನ್ಯವಾಗಿ ಔಷಧಿಗಳಲ್ಲಿ ಬಳಸುತ್ತಾರೆ. ಅಲೋವೆರಾ ತಿರುಳು ಅನೇಕ ಆರೋಗ್ಯ ಖಾಯಿಲೆಗೆ ರಾಮಬಾಣವಾಗಿದೆ. ಆದರೆ, ಲೋಳೇಸರದ ಒಳಗಿನ ತಿರುಳಿನಿಂದ ಜ್ಯೂಸ್​ ಮಾಡಿ ಸವಿದರೆ ಆರೋಗ್ಯಕ್ಕೆ ಪ್ರಯೋಜನ ಹೆಚ್ಚು ಎಂಬುದು ನಿಮಗೆ ತಿಳಿದಿದೆಯೇ? ಆಹಾರದಲ್ಲಿನ ಶಕ್ತಿಯುತ ಅಮೈನೋ ಆಮ್ಲಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ದೇಹದಲ್ಲಿನ ಕೆಟ್ಟ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಇದು ಸಹಾಯಕವಾಗಿದೆ. ಲೋಳೇಸರ ಜ್ಯೂಸ್​ನಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

ನೀವು ದಿನಕ್ಕೆ ಎರಡರಿಂದ ಮೂರು ಚಮಚ ನೈಸರ್ಗಿಕವಾಗಿ ಸಿಗುವ ಲೋಳೇಸರ ಜೆಲ್ ​ಅನ್ನು ಸೇವಿಸಿದರೆ ದೇಹದಲ್ಲಿ ಪೆಪ್ಸಿನ್​ ಎಂಬ ಕಿಣ್ವ ಉತ್ಪತ್ತಿಯಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯವಾಗಿದೆ. ಲೋಳೇಸರ ತಿರುಳು ಮಧುಮೇಹದಿಂದ ಬಳಲುತ್ತಿರುವವರಿಗೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯವಾಗಿದೆ. ಹಲ್ಲು ಮತ್ತು ವಸಡು ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನಕಾರಿ ಔಷಧ. ಜತೆಗೆ ವಸಡು ಸವೆತ, ಹಲ್ಲು ನೋವಿನ ಸಮಸ್ಯೆಗೆ ಲೋಳೇಸರ ಜ್ಯೂಸ್​ ಉತ್ತಮ ಪರಿಹಾರವಾಗಿ ಕೆಲಸ ಮಾಡುತ್ತದೆ.

ಕೀಲು ನೋವಿಗೆ ಉತ್ತಮ ಔಷಧ ದೇಹದ ಕೀಲುಗಳು ಬಲಿಷ್ಠಗೊಳ್ಳುತ್ತವೆ. ಕೀಲು ನೋವಿನಿಂದ ಮುಕ್ತಿ ಹೊಂದಬಹುದು. ಜತೆಗೆ ದೇಹವು ಅಗತ್ಯವಾದ ಜೀವಸತ್ವಗಳನ್ನು ಪಡೆಯುತ್ತದೆ. ಅತಿಸಾರ ಸಮಸ್ಯೆಯಿಂದ ಬಳಲುತ್ತಿರುವವರು ಅಲೋವೆರಾ ಜೆಲ್ ಸೇವಿಸುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಚರ್ಮದ ಅಲರ್ಜಿ, ಹುಣ್ಣು, ಗುಳ್ಳೆಗಳಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಅಲೋವೆರಾ ಜೆಲ್ ಸಹಾಯ ಮಾಡುತ್ತದೆ. ನೈಸರ್ಗಿಕವಾಗಿ ಸಿಗುವ ಅಲೋವೆರಾದಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಎಂದಾದ ಮೇಲೆ ಮನೆಯಲ್ಲಿ ಒಂದು ಗಿಡವನ್ನಾದರೂ ನೆಡಲೇಬೇಕು.

ಮುಖದಲ್ಲಿನ ಮೊಡವೆಗೆ ಪರಿಹಾರ ಒಂದು ಗ್ಲಾಸ್​ ನೀರಿಗೆ ನೈಸರ್ಗಿಕವಾಗಿ ಸಿಗುವ ಅಲೋವೆರಾ ಜೆಲ್​ ವಿಶ್ರಣ ಮಾಡಿ. ಆ ನೀರನ್ನು ಕುದಿಸಿ, ಅದಕ್ಕೆ ಒಂದು ಚಮಚ ನಿಂಬೆ ರಸ ಬೆರೆಸಿ ಸೇವಿಸಿದರೆ ದೇಹದಲ್ಲಿನ ವಿಷಕಾರಿ ಅಂಶವನ್ನು ಹೋಗಲಾಡಿಸಲು ಸಹಾಯಕವಾಗುತ್ತದೆ. ಲೋಳೇಸರ ಜತೆಗೆ ಕಾಲು ಚಮಚ ಜೇನುತುಪ್ಪ ಸೇರಿಸಿ ಮೊಡವೆಯಾದ ಜಾಗಕ್ಕೆ ಹಚ್ಚಿಕೊಳ್ಳುವುದರ ಮೂಲಕ ಮೊಡವೆಯನ್ನು ವಾಸಿ ಮಾಡಬಹುದು. ಜೊತೆಗೆ ಮೊಡವೆಗಳಿಂದ ಮುಖದಲ್ಲಿ ಎದ್ದು ಕಾಣಿಸುತ್ತಿರುವ ಕಲೆಗಳನ್ನು ಹೋಗಲಾಡಿಸಲು ನೆರವಾಗುತ್ತದೆ.

ಇದನ್ನೂ ಓದಿ:

Beauty Tips: ಬಿಸಿಲ ಬೇಗೆಯಿಂದ ತಣಿಯಲು ಬಳಸಿ ಮನೆಮದ್ದು; ಮುಖದ ಕಾಂತಿ ಹೆಚ್ಚಿಸಲು ಇಲ್ಲಿದೆ ಸಲಹೆ

Aloe Vera Benefits: ಕೂದಲು ಮತ್ತು ಚರ್ಮದ ಆರೈಕೆಗೆ ಅಲೋವೆರಾ; ಬಳಸುವ ಕ್ರಮ ಹೇಗೆ ಗೊತ್ತಾ?

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್