Aloe Vera Benefits: ಕೂದಲು ಮತ್ತು ಚರ್ಮದ ಆರೈಕೆಗೆ ಅಲೋವೆರಾ; ಬಳಸುವ ಕ್ರಮ ಹೇಗೆ ಗೊತ್ತಾ?
ಅಲೋವೆರಾದಿಂದ ಪ್ರಯೋಜಗಳಿದೆ ಎಂಬುದು ಸಾಮಾನ್ಯವಾಗಿ ಗೊತ್ತಿರುವ ವಿಷಯ. ಆದರೆ ಅದರ ಬಳಕೆ ಹೇಗೆ? ಬಳಕೆಯ ಕ್ರಮ ಸರಿಯಾಗಿದ್ದಲ್ಲಿ ಮಾತ್ರ ಆರೋಗ್ಯದಲ್ಲಿ ಅದರ ಲಾಭ ಸಿಗಲು ಸಾಧ್ಯ. ಹಾಗಾಗಿ ಯಾವ ಕ್ರಮದಲ್ಲಿ ಅಲೋವೆರಾ ಬಳಸಬೆಕು ಎಂಬುದರ ಕುರಿತಾಗಿ ತಿಳಿಯೋಣ.
ಮನೆಯ ಸುತ್ತಮುತ್ತಲೇ ಸಿಗುವ ಅದೆಷ್ಟೋ ಆಯುರ್ವೇದ ಗಿಡಗಳಿಂದ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಅದರಲ್ಲಿ ವಿಶೇಷವಾಗಿ ನೈಸರ್ಗಿಕವಾಗಿ ಸಿಗುವ ಅಲೋವೆರಾ ಬಳಕೆಯಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಗಳಿವೆ. ಅಲೋವೆರಾದಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಇ ಅಂಶಗಳಿರುತ್ತವೆ. ಕೂದಲು ಉದುರುವ ಸಮಸ್ಯೆಗೆ, ಚರ್ಮದ ಕಾಂತಿಗೆ ಜತೆಗೆ ತೂಕ ನಷ್ಟಕ್ಕೆ ಅಲೋವೆರಾ ಬಳಕೆ ಉತ್ತಮ ಮಾರ್ಗ.
ಅಲೋವೆರಾದಿಂದ ಪ್ರಯೋಜಗಳಿದೆ ಎಂಬುದು ಸಾಮಾನ್ಯವಾಗಿ ಗೊತ್ತಿರುವ ವಿಷಯ. ಆದರೆ ಅದರ ಬಳಕೆ ಹೇಗೆ? ಬಳಕೆಯ ಕ್ರಮ ಸರಿಯಾಗಿದ್ದಲ್ಲಿ ಮಾತ್ರ ಆರೋಗ್ಯದಲ್ಲಿ ಅದರ ಲಾಭ ಸಿಗಲು ಸಾಧ್ಯ. ಹಾಗಾಗಿ ಯಾವ ಕ್ರಮದಲ್ಲಿ ಅಲೋವೆರಾ ಬಳಸಬೆಕು ಎಂಬುದರ ಕುರಿತಾಗಿ ತಿಳಿಯೋಣ.
ಒಣ ಚರ್ಮದ ಆರೈಕೆಗೆ ಸ್ವಲ್ಪ ಅಲೋವೆರಾ, ಒಂದು ಚಿಟಿಕೆ ಅರಿಶಿಣ, ಒಂದು ಚಮಚ ಜೇನುತುಪ್ಪ, ಒಂದು ಚಮಚ ಹಾಲು ಮತ್ತು ಒಂದು ಚಮಚ ರೋಸ್ ವಾಟರ್ಅನ್ನು ವಿಶ್ರಣಮಾಡಿ ಒಣ ಚರ್ಮಕ್ಕೆ ಹಚ್ಚಿಕೊಳ್ಳಿ.
ಅಲೋವೆರಾದಿಂದ ಸ್ಕ್ರಬ್ ಅರ್ಧ ಕಪ್ ತಾಜಾ ಅಲೋವೆರಾ ಜೆಲ್, ಒಂದು ಕಪ್ ಸಕ್ಕರೆ ಮತ್ತು ಎರಡು ಚಮಚ ನಿಂಬೆ ರಸವನ್ನು ಮಿಶ್ರಣಮಾಡಿಕೊಳ್ಳಿ. ಆಲೋವೆರಾ ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ಹಾಗಾಗಿ ಮುಖ ಕಾಂತಿಯುಕ್ತವಾಗಿ ಕಾಣಲು ಈ ರೀತಿಯಲ್ಲಿ ಅಲೋವೆರಾವನ್ನು ಬಳಸಬಹುದು.
ಮೊಡವೆಗಳಿಗೆ ಅಲೋವೆರಾ ಅಲೋವೆರಾ ಜತೆಗೆ ಕಾಲು ಚಮಚ ಜೇನುತುಪ್ಪ ಸೇರಿಸಿ ಮೊಡವೆಯಾದ ಜಾಗಕ್ಕೆ ಹಚ್ಚಿಕೊಳ್ಳುವುದರ ಮೂಲಕ ಮೊಡವೆಯನ್ನು ವಾಸಿ ಮಾಡಬಹುದು. ಜೊತೆಗೆ ಮೊಡವೆಗಳಿಂದ ಮುಖದಲ್ಲಿ ಎದ್ದು ಕಾಣಿಸುತ್ತಿರುವ ಕಲೆಗಳನ್ನು ಹೋಗಲಾಡಿಸಲು ನೆರವಾಗುತ್ತದೆ.
ತೂಕ ನಷ್ಟಕ್ಕೆ ಅಲೋವೆರಾ ಒಂದು ಗ್ಲಾಸ್ ನೀರಿಗೆ ನೈಸರ್ಗಿಕವಾಗಿ ಸಿಗುವ ಅಲೋವೆರಾ ಜೆಲ್ಅನ್ನು ವಿಶ್ರಣ ಮಾಡಿ. ಆ ನೀರನ್ನು ಕುದಿಸಿ, ಅದಕ್ಕೆ ಒಂದು ಚಮಚ ನಿಂಬೆ ರಸ ಬೆರೆಸಿ ಸೇವಿಸಿದರೆ ದೇಹದಲ್ಲಿನ ವಿಷಕಾರಿ ಅಂಶವನ್ನು ಹೋಗಲಾಡಿಸಲು ಸಹಾಯಕವಾಗುತ್ತದೆ.
ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ನೈಸರ್ಗಿಕವಾಗಿ ಸಿಗುವ ಅಲೋವೆರಾವನ್ನು ಚೆನ್ನಾಗಿ ತೊಳೆದು ಕಟ್ ಮಾಡಿಕೊಳ್ಳಿ. ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಬಿಸಿ ಆರುವವರೆಗೆ ಪಾತ್ರೆಯನ್ನು ತೆರೆದಿಡಿ. ಬಳಿಕ ತಯಾರಿಸಿದ ತೈಲವನ್ನು ಸೋಸಿದರೆ ಅಲೋವೆರಾ ತೈಲ ಸಿದ್ಧವಾಗುತ್ತದೆ. ಇದನ್ನು ತಲೆ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ಎಣ್ಣೆಯ ಅಂಶ ಕೂದಲಿನ ಬುಡ ಭಾಗಕ್ಕೆ ತಾಗಬೇಕು. ವಾರದಲ್ಲಿ ಎಡು ಬಾರಿಯಾದರೂ ಹೀಗೆ ಮಾಡಿದರೆ ಕೂದಲು ಉದ್ದವಾಗಿ ಬೆಳೆಯುವುದರ ಜೊತೆಗೆ ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.
ಇದನ್ನೂ ಓದಿ: Beauty Tips: ಬಿಸಿಲ ಬೇಗೆಯಿಂದ ತಣಿಯಲು ಬಳಸಿ ಮನೆಮದ್ದು; ಮುಖದ ಕಾಂತಿ ಹೆಚ್ಚಿಸಲು ಇಲ್ಲಿದೆ ಸಲಹೆ