ತಲೆಯಲ್ಲಿ ಬಿಳಿ ಕೂದಲುಗಳೇ ಹೆಚ್ಚು ಕಾಣುತ್ತಿವೆಯೇ? ಕಾರಣವೇನು?

ಹದಿಹರೆಯದ ವಯಸ್ಸಿನಲ್ಲಿ ಅದೆಷ್ಟು ಉದ್ದನೇಯ ಕೂದಲಿತ್ತು. ಕಾಲಾನಂತರ ಕೂದಲು ಉದುರುವ ಸಮಸ್ಯೆ ಕಾಡತೊಡಗಿತ್ತು. ಏಕೆ ಹೀಗೆ ಆಗುತ್ತಿದೆ? ಎಂದೆಲ್ಲಾ ಚಿಂತೆ ಮೂಡುವುದು ಸಹಜ. ಇವುಗಳಿಗೆ ಕಾರಣವೇನಿರಬಹುದು ಎಂಬುದನ್ನು ತಿಳಿದುಕೊಳ್ಳಿ.

ತಲೆಯಲ್ಲಿ ಬಿಳಿ ಕೂದಲುಗಳೇ ಹೆಚ್ಚು ಕಾಣುತ್ತಿವೆಯೇ? ಕಾರಣವೇನು?
ಬಿಳಿ ಕೂದಲು
Follow us
shruti hegde
| Updated By: ಆಯೇಷಾ ಬಾನು

Updated on:May 21, 2021 | 7:09 AM

ವಯಸ್ಸಾದಂತೇ ತಲೆಯಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯ. ಪ್ರಾಯದಲ್ಲಿದ್ದಾಗ ಕಪ್ಪು ಬಣ್ಣದಲ್ಲಿದ್ದ ಕೂದಲು ವಯಸ್ಸಾದಂತೆಯೇ ಬದಲಾಯಿತು. ಆಗ ಅದೆಷ್ಟು ಚಂದದ ಕೂದಲಿತ್ತು. ಇದೀಗ ಕೂದಲುಗಳೆಲ್ಲ ಉದುರುತ್ತಿವೆ. ಬಣ್ಣ ಕೂಡಾ ಬದಲಾಗಿದೆ. ಹದಿಹರೆಯದ ವಯಸ್ಸಿನಲ್ಲಿ ಅದೆಷ್ಟು ಉದ್ದನೇಯ ಕೂದಲಿತ್ತು. ಕಾಲಾನಂತರ ಕೂದಲು ಉದುರುವ ಸಮಸ್ಯೆ ಕಾಡತೊಡಗಿತ್ತು. ಏಕೆ ಹೀಗೆ ಆಗುತ್ತಿದೆ? ಎಂದೆಲ್ಲಾ ಚಿಂತೆ ಮೂಡುವುದು ಸಹಜ. ಇವುಗಳಿಗೆ ಕಾರಣವೇನಿರಬಹುದು ಎಂಬುದನ್ನು ತಿಳಿದುಕೊಳ್ಳಿ.

ದೇಹವು ಕೂದಲಿನ ಕಿರು ಚೀಲಗಳನ್ನು ಹೊಂದಿರುತ್ತದೆ. ಅವುಗಳು ಮೆಲನಿನ್​ ಎಂದು ಕರೆಯಲ್ಪಡುವ ವರ್ಣದ್ರವ್ಯ ಕೋಶಗಳನ್ನು ಹೊಂದಿರುತ್ತದೆ. ಈ ಕೋಶಗಳು ನಿಮ್ಮ ಕೂದಲಿಗೆ ಬಣ್ಣವನ್ನು ನೀಡುತ್ತದೆ. ಆದರೆ ಕಾಲಾನಂತರದಲ್ಲಿ ಕೂದಲ ಕಿರು ಚೀಲಗಳು ವರ್ಣದ್ರವ್ಯವನ್ನು ಕಳೆದುಕೊಳ್ಳಬಹುದು. ಇದರ ಪರಿಣಾಮವಾಗಿ ಬಿಳಿ ಕೂದಲು ಹುಟ್ಟಿಕೊಳ್ಳುತ್ತವೆ.

ಚಿಕ್ಕ ವಯಸ್ಸಿನವರಿಗೆ ಬಿಳಿ ಕೂದಲು ಕಾಣಿಸಿಕೊಳ್ಳಲು ಕಾರಣವೇನು? ಬಿಳಿ ಕೂದಲು ವಯಸ್ಸಾಗಿದ್ದವರ ಲಕ್ಷಣವಾಗಿದ್ದರೂ, ಇದೀಗ ಹೆಚ್ಚು ಹದಿಹರೆಯದವರಲ್ಲಿ ಕಂಡು ಬರುತ್ತಿದೆ. ಶಾಲೆಗೆ ಹೋಗುವ ಮಕ್ಕಳಲ್ಲಿ ಅಥವಾ 20ರ ಹರೆಯಲ್ಲಿ ಬಿಳಿ ಕೂದಲು ಕಂಡು ಬರುತ್ತಿದೆ.

ಕೂದಲಿಗೆ ರಾಸಾಯನಿಕ ತೈಲಗಳನ್ನು ಬಳಸುವುದು ಹದಿಹರೆಯದವರಲ್ಲಿ ಮೇಕ್​ಅಪ್​ ಕ್ರೇಜ್​ ಹೆಚ್ಚಾಗಿರುತ್ತದೆ. ಕೂದಲಿಗೆ ವಿವಿಧ ಸ್ಟೈಲ್​ ಜೊತೆಗೆ ರಾಸಾಯನಿಕದಿಂದ ಕೂಡಿದ ವಿವಿಧ ತೈಲಗಳನ್ನು ಬಳಸುತ್ತೀರಿ ಇದರಿಂದ ಬಹುಬೇಗ ಬಿಳಿ ಬಣ್ಣದ ಕೂದಲುಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ.

ಒತ್ತಡ ಪ್ರತಿಯೊಬ್ಬರೂ ಮಾನಸಿಕ ಒತ್ತಡಕ್ಕೆ ಸಿಲುಕುತ್ತಾರೆ. ಇದರ ಅತಿರೇಕತೆಯಿಂದ ಪರಿಣಾಮಗಳು ಉಂಟಾಗಬಹುದು. ಹೆಚ್ಚು ಆತಂಕ, ನಿದ್ರೆ ಬಾರದಿರುವುದು, ಹಸಿವಾಗದಿರುವುದು ಜತೆಗೆ ತೀವ್ರ ರಕ್ತದೊತ್ತಡದಿಂದ ಬಿಳಿ ಕೂದಲು ಹುಟ್ಟಿಕೊಳ್ಳುತ್ತವೆ.

ಥೈರಾಯ್ಡ್​ ಸಮಸ್ಯೆ ಥೈರಾಯ್ಡ್​ ಸಮಸ್ಯೆಯಿಂದ ಉಂಟಾಗುವ ಹಾರ್ಮೋನ್​ಗಳ ಬದಲಾವಣೆಗಳು ಕೂದಲ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ಕೂದಲು ಉದುರುವ ಸಮಸ್ಯೆ ಕಾಡಬಹುದು ಜತೆಗೆ ಬಿಳಿ ಕೂದಲು ಹುಟ್ಟಿಕೊಳ್ಳಬಹುದು.

ಧೂಮಪಾನ ಧೂಮಪಾನ ಮಾಡುವುದು ಶ್ವಾಸಕೋಶ ಕ್ಯಾನ್ಸರ್​ ಮತ್ತು ಹೃದಯಕ್ಕೆ ಅಪಾಯವನ್ನು ತಂದೊಡ್ಡುತ್ತದೆ. ಜತೆಗೆ ಕೂದಲಿನ ಮೇಲೂ ಪರಿಣಾಮ ಬೀರುತ್ತದೆ. ಕೂದಲು ಉದುರುವಿಕೆ ಮತ್ತು ಬಿಳಿ ಕೂದಲು ಹುಟ್ಟಿಕೊಳ್ಳಲು ಕಾರಣವಾಗುತ್ತದೆ.

ಬಿಳಿ ಕೂದಲು ನಿಯಂತ್ರಣ ಸಾಧ್ಯವೇ? ಆರೋಗ್ಯದಲ್ಲಿ ಮತ್ತು ಆಹಾರದಲ್ಲಿ ಕಾಳಜಿ ವಹಿಸಿದರೆ ಬಿಳಿ ಕೂದಲು ಹುಟ್ಟದಂತೆ ನಿಯಂತ್ರಿಸಬಹುದು. ಯಾವುದೇ ರೋಗಕ್ಕೆ ಚಿಕಿತ್ಸೆ ಪಡೆಯಲು ವೈದ್ಯರನ್ನು ಸಂಪರ್ಕಿಸಿ. ಆದಷ್ಟು ರೋಗಗಳು ಬಾರದಂತೆ ಎಚ್ಚರವಹಿಸಿ. ಹಸಿರಿನ ಅಂಶವುಳ್ಳ ಆಹಾರ ಪದಾರ್ಥ ಅಂದರೆ ನವಿಲುಕೋಸು, ಮೂಲಂಗಿಯಂತಹ ತರಕಾರಿಗಳು ಜತೆಗೆ ಸೊಪ್ಪಿನಿಂದ ತಯಾರಿಸಿದ ಆಹಾರ ಪದಾರ್ಥವನ್ನು ಆಹಾರ ಸೇವನೆಯಲ್ಲಿ ಅಳವಡಿಕೊಳ್ಳಿ.

ಇದನ್ನೂ ಓದಿ: Health Tips: ಬೊಜ್ಜು ಕರಗಿಸಲು ಮೆಂತ್ಯ ಉಪಯೋಗಿಸಿ; ಆರೋಗ್ಯಕರ ಜೀವನಕ್ಕೆ ಮನೆಯಲ್ಲೇ ಮದ್ದು

Published On - 7:09 am, Fri, 21 May 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ