AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid 19 Vaccine: ಕರೋನಾ ಮರು ಸೋಂಕಿನ ತೀವ್ರತೆಯನ್ನು ಕಡಿಮೆಗೊಳಿಸುವ ಫೈಜರ್, ಮಾಡರ್ನಾ: ಅಮೇರಿಕ ಅಧ್ಯಯನ ವರದಿ

ಎಂಆರ್​ಎನ್​ಎ- ಮೂಲದ(ಫೈಜರ್, ಮಾಡರ್ನಾ) ಲಸಿಕೆಯನ್ನು ಪಡೆದಿರುವ ವ್ಯಕ್ತಿಗಳಲ್ಲಿ ಪುನಃ ಕರೋನಾ ಸೋಂಕು ಕಾಣಿಸಿಕೊಂಡರೂ ಸಹ ಅದರ ತೀವ್ರತೆಯು ಲಸಿಕೆ ಪಡೆಯದವರಿಗಿಂತ ಬಹಳ ಕಡಿಮೆಯಿರುತ್ತದೆ ಹಾಗೂ ಸೌಮ್ಯ ಲಕ್ಷಣಗಳನ್ನಷ್ಟೇ ಹೊಂದಿರುತ್ತದೆ ಎನ್ನುತ್ತದೆ ಅಮೇರಿಕಾದ ಹೊಸ ಅಧ್ಯಯನ ವರದಿ.

Covid 19 Vaccine: ಕರೋನಾ ಮರು ಸೋಂಕಿನ ತೀವ್ರತೆಯನ್ನು ಕಡಿಮೆಗೊಳಿಸುವ ಫೈಜರ್, ಮಾಡರ್ನಾ: ಅಮೇರಿಕ ಅಧ್ಯಯನ ವರದಿ
ಮಾಡೆರ್ನಾ ಲಸಿಕೆ
Follow us
TV9 Web
| Updated By: Digi Tech Desk

Updated on:Jul 02, 2021 | 3:24 PM

ಎಂಆರ್​ಎನ್​ಎ ಲಸಿಕೆ ಪಡೆದವರ ಮೇಲೆ ಅಮೇರಿಕಾದಲ್ಲಿ ನಡೆಸಲಾದ ಅಧ್ಯಯನವೊಂದು ಲಸಿಕೆ ಪಡೆದ ವ್ಯಕ್ತಿಗಳು ಮರಳಿ ಸೋಂಕಿಗೆ ತುತ್ತಾದರೆ ಅದರ ಪರಿಣಾಮವು ತಾತ್ಕಾಲಿಕವಾಗಿರುತ್ತದೆ ಹಾಗೂ ಸೌಮ್ಯ ಲಕ್ಷಣಗಳನ್ನಷ್ಟೇ ಹೊಂದಿರುತ್ತದೆ. ಹಾಗೆಯೇ ಲಸಿಕೆ ಪಡೆಯದ ವ್ಯಕ್ತಿಗಳಿಗೆ ಹೋಲಿಸಿದಾಗ ಸೋಂಕಿನ ತೀವ್ರತೆಯು ಬಹಳ ಕಡಿಮೆ ಮಟ್ಟದಲ್ಲಿರುತ್ತದೆ ಎಂದು ತಿಳಿಸಿದೆ. ಕರೋನಾ ಲಸಿಕೆ ಪಡೆದವರಿಗೆ 90 ಪ್ರತಿಶತ ಮತ್ತೆ ಸೋಂಕು ತಗುಲುವುದಿಲ್ಲ. ಒಂದು ವೇಳೆ ತಗುಲಿದರೂ ಅದು ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಅರಿಜೋನಾ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ರೊಫೆಸರ್ ಆದ ಹಾಗೂ ಸಂಶೋಧನೆ ನಡೆಸಿದ ಜೆಫ್ ಬರ್ಗೀಸ್ ತಿಳಿಸಿದ್ದಾರೆ.

ಜೂನ್ 30ರಂದು ದಿ ನ್ಯೂ ಇಂಗ್ಲೆಂಡ್ ಜರ್ನಲ್​ನಲ್ಲಿ ಪ್ರಕಟವಾಗಿರುವ ಈ ಅಧ್ಯಯನವು ಎಂಆರ್​ಎನ್​ಎ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾದ ಫೈಜರ್ ಹಾಗೂ ಮಾಡರ್ನಾ ಲಸಿಕೆಯ ಕುರಿತಾಗಿ   ನಡೆಸಲಾಗಿದೆ. ಎಂಆರ್​ಎನ್​ಎ(ಮೆಸೆಂಜರ್- ಆರ್​ಎನ್​ಎ) ಲಸಿಕೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾದರಿಯ ಲಸಿಕೆಗಳಿಗಿಂತ ಭಿನ್ನವಾಗಿದೆ. ವರ್ತಮಾನದ ಬೆಳವಣಿಗೆಗಳಾದ ಕರೋನಾ ಸೋಂಕು ತಗಲುವಿಕೆ ಮತ್ತು ಚೇತರಿಕೆಯನ್ನು ಗಮನದಲ್ಲಿಟ್ಟುಕೊಂಡು ಎಂಆರ್​ಎನ್​ಎ ಲಸಿಕೆಯ ಪರಿಣಾಮದ ಕುರಿತಂತೆ ಅಧ್ಯಯನವನ್ನು ನಡೆಸಲಾಗಿದೆ.

ಕರೋನಾ ಸೋಂಕಿಗೆ ನೀಡುವ ಯಾವುದೇ ಲಸಿಕೆಯು ಸೋಂಕಿಗೆ ಹೆಚ್ಚು ಪರಿಣಾಮಕಾರಿಯಾಗಿ ತಡೆಯೊಡ್ಡಬಲ್ಲದೇ ಹೊರತು ನೂರು ಪ್ರತಿಶತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು ಎಂಬುವುದನ್ನು ಹೇಳುವುದಿಕ್ಕಾಗದು ಹಾಗೂ ಲಸಿಕೆ ಪಡೆದ ನಂತರವೂ ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಅಧ್ಯಯನ ತಿಳಿಸಿದೆ.

ಸಂಶೋಧನೆ ಹೇಗೆ ನಡೆಸಲಾಗಿದೆ? 3,975 ಆರೋಗ್ಯ ಕಾರ್ಯಕರ್ತರು, ಮೊದಲ ಡೋಸ್ ಲಸಿಕೆ ಪಡೆದವರು ಹಾಗೂ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. 2020ರ ಡಿಸೆಂಬೆರ್ 14ರಿಂದ 2021ರ ಏಪ್ರಿಲ್ 10ರ ನಡುವಿನ ಅವಧಿಯಲ್ಲಿ ಪ್ರತೀ ವಾರವೂ ಆರ್​ಟಿ-ಪಿಸಿಆರ್ ಟೆಸ್ಟ್ ಮೂಲಕ ಸೋಂಕು ಪತ್ತೆ ನಡೆಸಲಾಗುತ್ತಿತ್ತು.

ಅಧ್ಯಯನ ತಿಳಿಸಿದ್ದೇನು?  3,975 ಜನರಲ್ಲಿ 204 ಜನರಿಗೆ ಕೋವಿಡ್ ಪಾಸಿಟಿವ್ ವರದಿ ಬಂತು. ಅದರಲ್ಲಿ 5 ಜನ ಎರಡೂ ಡೋಸ್ ಲಸಿಕೆ ಪಡೆದವರು. 11 ಜನ ಒಂದು ಡೋಸ್ ಲಸಿಕೆ ಪಡೆದವರು ಹಾಗೂ 156 ಜನ ಲಸಿಕೆ ಪಡೆಯದವರು. ಅಧ್ಯಯನವು ಬೆಳಕು ಚೆಲ್ಲಿದ ಇನ್ನೊಂದು ಕುತೂಹಲಕರ ಮಾಹಿತಿಯೆಂದರೆ ಎರಡು ಡೋಸ್ ಎಂಆರ್​ಎನ್​ಎ ಕೋವಿಡ್- 19 ವ್ಯಾಕ್ಸೀನ್ ಪಡೆದವರಲ್ಲಿ ಲಸಿಕೆಯು 91 ಪ್ರತಿಶತ ಮತ್ತು ಒಂದು ಡೋಸ್ ವ್ಯಾಕ್ಸೀನ್ ಪಡೆದವರಲ್ಲಿ 81 ಪ್ರತಿಶತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.

ಲಸಿಕೆ ಪಡೆದವರು ಸೋಂಕಿಗೆ ತುತ್ತಾದರೂ ಸಹ ಜ್ವರ ಮೊದಲಾದ ಲಕ್ಷಣಗಳನ್ನು ಹೊಂದುವ ಸಾಧ್ಯತೆ 58 ಪ್ರತಿಶತ ಕಡಿಮೆ. ಸಾಮಾನ್ಯ ಸೋಂಕಿತ ವ್ಯಕ್ತಿಗಳಿಗಿಂತ ವೇಗವಾಗಿ ಗುಣಮುಖರಾಗುವ ಸಾಮರ್ಥ್ಯವನ್ನೂ ಲಸಿಕೆ ಪಡೆದವರು ಹೊಂದಿರುತ್ತಾರೆ. ಕಠಿಣ ಸಂದರ್ಭದಲ್ಲೂ 2.3 ದಿನದಲ್ಲಿ ಅವರು ಚೇತರಿಸಿಕೊಳ್ಳುತ್ತಾರೆ ಎಂದು ಅಧ್ಯಯನ ತಿಳಿಸಿದೆ. ಪ್ರಸ್ತುತ ಪರಿಣಾಮ ಬೀರುತ್ತಿರುವ ಕೋವಿಡ್ ಎರಡನೇ ಅಲೆಯಲ್ಲೂ ಈ ಲಸಿಕೆಗಳು ಹೆಚ್ಚು ಪರಿಣಾಮ ಬೀರಿವೆ. ಉದ್ಯೋಗ ಮಾಡುವ ವಯಸ್ಕ ಸಮುದಾಯಕ್ಕೆ ಈ ಲಸಿಕೆಗಳಿಂದ ಹೆಚ್ಚು ಪ್ರಯೋಜನವಾಗಿದೆ . ಅವರಿಗೆ ಎರಡನೇ ಬಾರಿ ಸೋಂಕು ವ್ಯಾಪಿಸಿದರೂ ಗುಣಮುಖರಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಅಧ್ಯಯನವು ಸಾದರಪಡಿಸಿದೆ.

ಸಂಶೋಧಕ ಜೆಫ್ ಬರ್ಗೀಸ್ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಲಸಿಕೆಯು ಕರೋನಾ ರೂಪಾಂತರವಾದಾಗಲೂ ಅತ್ಯುತ್ತಮ ಪರಿಣಾಮ ಬೀರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಅಧ್ಯಯನ ನಡೆಸಿದ ಮಾದರಿಯ ಕುರಿತು ತಿಳಿಸಿದ ಅವರು, ಲಸಿಕೆ ಪಡೆದವರು ಹಾಗೂ ಲಸಿಕೆ ಪಡೆಯದವರಲ್ಲಿ ಸೊಂಕು ತಗುಲುವ ಪ್ರಮಾಣ ಹಾಗೂ ಸೋಂಕು ತಗುಲಿದವರು ಗುಣಮುಖರಾಗುವ ಪ್ರಮಾಣವನ್ನು ತುಲನೆ ಮಾಡಿ ಅಧ್ಯಯನದ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯಕ್ಕೆ ತಾರತಮ್ಯ ಆಗಿಲ್ಲ; ದೆಹಲಿಗೆ ತೆರಳಿ ಲಸಿಕೆ ಹೆಚ್ಚಿಗೆ ನೀಡುವಂತೆ ಮನವಿ ಮಾಡ್ತೀನಿ: ಆರೋಗ್ಯ ಸಚಿವ ಸುಧಾಕರ್

ಇದನ್ನೂ ಓದಿ: ಕೊವಾವ್ಯಾಕ್ಸ್​ ಲಸಿಕೆಯ ಮಕ್ಕಳ ಮೇಲಿನ ಪ್ರಯೋಗಕ್ಕೆ ಒಪ್ಪಿಗೆ ನೀಡದ ಕೇಂದ್ರ ತಜ್ಞರ ಸಮಿತಿ; ಸೀರಮ್​ ಸಂಸ್ಥೆಗೆ ಸಿಗದ ಅನುಮತಿ

(US Study Says Pfizer and Moderna Covid vaccines reduces severity in re-infected people)

Published On - 3:20 pm, Fri, 2 July 21

Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್