ಮನುಷ್ಯರಿಂದ ನಾಯಿ, ಬೆಕ್ಕುಗಳಿಗೆ ಕೊರೊನಾ ಹರಡುವ ಸಾಧ್ಯತೆ! ಆದರೆ, ಅವುಗಳಿಂದ ಬೇರೆಯವರಿಗೆ ದಾಟುವುದು ಅನುಮಾನ: ಡಚ್ ಅಧ್ಯಯನ

ಐದರಲ್ಲಿ ಒಂದು ಸಾಕುಪ್ರಾಣಿಗೆ ಮನುಷ್ಯರಿಂದ ಸೋಂಕು ದಾಟುವ ಸಾಧ್ಯತೆ ಇದೆ. ಆದರೆ, ಅದೃಷ್ಟವಶಾತ್​ ಪ್ರಾಣಿಗಳಲ್ಲಿ ಅದು ತೀವ್ರವಾಗಿ ಬಾಧಿಸುವುದು ಇಲ್ಲಿಯ ತನಕ ಕಂಡುಬಂದಿಲ್ಲ. ಅಂತೆಯೇ, ಪ್ರಾಣಿಗಳಿಂದ ವಾಪಾಸ್ಸು ಮನುಷ್ಯರಿಗೆ ಸೋಂಕು ಹರಡುವುದು ಕೂಡಾ ಪತ್ತೆಯಾಗಿಲ್ಲ.

ಮನುಷ್ಯರಿಂದ ನಾಯಿ, ಬೆಕ್ಕುಗಳಿಗೆ ಕೊರೊನಾ ಹರಡುವ ಸಾಧ್ಯತೆ! ಆದರೆ, ಅವುಗಳಿಂದ ಬೇರೆಯವರಿಗೆ ದಾಟುವುದು ಅನುಮಾನ: ಡಚ್ ಅಧ್ಯಯನ
ಪ್ರಾಣಿಗಳಿಗೂ ಹರಡಬಹುದು ಕೊರೊನಾ (ಸಾಂಕೇತಿಕ ಚಿತ್ರ)
Follow us
TV9 Web
| Updated By: Skanda

Updated on:Jul 02, 2021 | 1:40 PM

ಕೊರೊನಾ ಆರಂಭವಾಗಿ, ಜಗತ್ತಿನೆಲ್ಲೆಡೆ ವ್ಯಾಪಿಸಿ ಸುಮಾರು ಒಂದೂವರೆ ವರ್ಷವಾಗಿದೆ. ಒಂದೊಂದು ಕಡೆಯಲ್ಲಿ ಒಂದೊಂದು ತೆರನಾಗಿ ರೂಪಾಂತರಗೊಳ್ಳುತ್ತಿರುವ ಈ ವೈರಾಣುವಿನ ಸ್ವರೂಪದಲ್ಲಿ ಸಾಕಷ್ಟು ಬದಲಾವಣೆಗಳೂ ಆಗಿವೆ. ಆದರೆ, ಇಲ್ಲಿಯ ತನಕ ಕೆಲ ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಕೊರೊನಾ ಕಾಣಿಸಿಕೊಂಡಿದೆ ಎಂಬ ಬಗ್ಗೆ ವರದಿಯಾಗಿತ್ತಾದರೂ ಸಾಕು ಪ್ರಾಣಿಗಳಿಗೆ ವೈರಾಣು ತಗಲುವ ಬಗ್ಗೆ ಹೆಚ್ಚು ಆತಂಕವೇನು ಸೃಷ್ಟಿಯಾಗಿರಲಿಲ್ಲ. ಇದೀಗ ಡಚ್​ ತಜ್ಞರೊಬ್ಬರು ಸಿದ್ಧಪಡಿಸಿದ ವರದಿಯನ್ನು ನೋಡಿದರೆ ಕೊರೊನಾ ಸೋಂಕಿತರು ಸಾಕು ಪ್ರಾಣಿಗಳಿಂದ ದೂರ ಇರುವುದು ಒಳಿತು ಎಂಬ ಎಚ್ಚರಿಕೆಯ ಸಂದೇಶ ಕಾಣಿಸುತ್ತಿದೆ. ಅಚ್ಚರಿಯ ಸಂಖ್ಯೆಯಲ್ಲಿ ನಾಯಿ, ಬೆಕ್ಕುಗಳು ಕೊರೊನಾ ಸೋಂಕಿಗೆ ತುತ್ತಾಗಿರುವ ಸಾಧ್ಯತೆಯನ್ನು ಅಧ್ಯಯನದಲ್ಲಿ ವ್ಯಕ್ತಪಡಿಸಲಾಗಿದ್ದು, ಇದು ಹೊಸ ಆತಂಕಕ್ಕೂ ಕಾರಣವಾಗಿದೆ.

ನೆದರ್​ಲ್ಯಾಂಡ್​ನ ಯುಟ್ರೆಕ್ಟ್​ ವಿಶ್ವವಿದ್ಯಾನಿಲಯದ ಡಾ.ಎಲ್ಸ್​ ಬ್ರೋನ್ಸ್​ ಹೇಳುವಂತೆ, ಐದರಲ್ಲಿ ಒಂದು ಸಾಕುಪ್ರಾಣಿಗೆ ಮನುಷ್ಯರಿಂದ ಸೋಂಕು ದಾಟುವ ಸಾಧ್ಯತೆ ಇದೆ. ಆದರೆ, ಅದೃಷ್ಟವಶಾತ್​ ಪ್ರಾಣಿಗಳಲ್ಲಿ ಅದು ತೀವ್ರವಾಗಿ ಬಾಧಿಸುವುದು ಇಲ್ಲಿಯ ತನಕ ಕಂಡುಬಂದಿಲ್ಲ. ಅಂತೆಯೇ, ಪ್ರಾಣಿಗಳಿಂದ ವಾಪಾಸ್ಸು ಮನುಷ್ಯರಿಗೆ ಸೋಂಕು ಹರಡುವುದು ಕೂಡಾ ಪತ್ತೆಯಾಗಿಲ್ಲ.

ಯುರೋಪಿಯನ್​ ಕಾಂಗ್ರೆಸ್​ ಮೈಕ್ರೋಬಯಲಾಜಿ ಮತ್ತು ಇನ್​ಫೆಕ್ಷಿಯಸ್​ ಡಿಸೀಸ್​ನಲ್ಲಿ ಡಾ.ಎಲ್ಸ್​ ಬ್ರೋನ್ಸ್​ ತಮ್ಮ ಅಧ್ಯಯನದ ವರದಿಯನ್ನು ಬಹಿರಂಗಪಡಿಸಿದ್ದಾರೆ. ಸುಮಾರು 196 ಕೊರೊನಾ ಸೋಂಕಿತರ ಮನೆಗಳಿಂದ ನಡೆಸಲಾದ ಈ ಅಧ್ಯಯನದಲ್ಲಿ 156 ನಾಯಿಗಳು ಹಾಗೂ 154 ಬೆಕ್ಕುಗಳು ಕೊರೊನಾ ಸೋಂಕಿಗೆ ತುತ್ತಾಗಿರುವುದು ಕಂಡುಬಂದಿದೆ. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಇವುಗಳಲ್ಲಿ ಶೇ.17ರಷ್ಟು ಪ್ರಾಣಿಗಳು ಅಂದರೆ 31 ಬೆಕ್ಕು ಹಾಗೂ 23 ನಾಯಿಗಳ ದೇಹದಲ್ಲಿ ಕೊರೊನಾ ವೈರಾಣುವಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ಸೃಷ್ಟಿಯಾಗಿರುವುದೂ ಕಂಡುಬಂದಿದೆ.

ಆ ಪೈಕಿ ಅಧ್ಯಯನ ನಡೆಸುವ ಸಂದರ್ಭಲ್ಲಿ ಶೇ.4.2ರಷ್ಟು ಪ್ರಾಣಿಗಳಲ್ಲಿ ಅಂದರೆ 6 ಬೆಕ್ಕು ಹಾಗೂ 7 ನಾಯಿಗಳಲ್ಲಿ ಸಕ್ರಿಯ ಕೊರೊನಾ ಸೋಂಕು ಇರುವುದು ಪಿಸಿಆರ್​ ಟೆಸ್ಟ್​​ನಿಂದ ದೃಢಪಟ್ಟಿದೆ. ನಂತರದಲ್ಲಿ ಆ ಪ್ರಾಣಿಗಳೂ ಬೇಗನೆ ಗುಣಮುಖವಾಗಿದೆ. ಜತೆಗೆ, ಅದೇ ಮನೆಯಲ್ಲಿದ್ದ ಬೇರೆ ಪ್ರಾಣಿಗಳಿಗೆ ಹರಡಿಯೂ ಇಲ್ಲವೆಂಬುದು ತಿಳಿದುಬಂದಿದೆ. ಆದರೆ, ಗಮನಾರ್ಹ ವಿಚಾರವೆಂದರೆ ಮಿಂಕ್ಸ್​ಗಳಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು ಮಾತ್ರ ಅವುಗಳಿಂದ ಪುನಃ ಮನುಷ್ಯರಿಗೆ ಹಬ್ಬಿದೆ.

ಡಾ.ಬ್ರೋನ್ಸ್​ ಅವರ ಪ್ರಕಾರ ಮನೆಯ ಸದಸ್ಯರು ಸಾಕು ಪ್ರಾಣಿಗಳೊಂದಿಗೆ ತೀರಾ ನಿಕಟ ಸಂಪರ್ಕ ಹೊಂದಿರುವುದರಿಂದ, ಕೆಲವರು ಅವುಗಳೊಟ್ಟಿಗೇ ಮಲಗುವುದರಿಂದ ಸೋಂಕು ಪ್ರಾಣಿಗಳಿಗೆ ದಾಟಿರಬಹುದು ಎಂದು ಅಂದಾಜಿಸಲಾಗಿದೆ. ಅಂದರೆ, ಸೋಂಕಿತರಾದ ಮೇಲೂ ಪ್ರಾಣಿಗಳೊಟ್ಟಿಗೆ ತೀರಾ ಬೆರೆಯುವುದಕ್ಕಿಂತ ಅವುಗಳ ಹಿತದೃಷ್ಟಿಯಿಂದಲಾದರೂ ಕೊಂಚ ದೂರ ಉಳಿಯುವುದು ಉತ್ತಮ ಎನ್ನಲಾಗಿದೆ.

ಇದನ್ನೂ ಓದಿ: WHO on Delta Variant: ಜಗತ್ತಿನಲ್ಲಿ ಪಾರುಪತ್ಯ ಸಾಧಿಸಲಿದೆ ಡೆಲ್ಟಾ ತಳಿ; ಕೊರೊನಾ ಮಾದರಿಗಳ ಪೈಕಿ ಎಲ್ಲಕ್ಕಿಂತ ತೀವ್ರವಾಗಿ ಬಾಧಿಸಲಿದೆ 

ಕೊರೊನಾ ವೈರಾಣು ರೂಪಾಂತರ ಡೆಲ್ಟಾಕ್ಕೆ ನಿಲ್ಲುವುದಿಲ್ಲ; ಲ್ಯಾಂಬ್ಡಾ, ಕಪ್ಪಾ ಸೇರಿದಂತೆ ಒಟ್ಟು 4 ಮಾದರಿಗಳು ಈಗಾಗಲೇ ಪತ್ತೆ

Published On - 12:11 pm, Fri, 2 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ