ದಾವಣಗೆರೆ ಅವಲಕ್ಕಿ ಚುರುಮುರಿ: ಸರಳ ವಿಧಾನದ ಜತೆ ಮಾಡಿ ಸವಿಯಿರಿ

TV9 Web
| Updated By: preethi shettigar

Updated on: Jul 02, 2021 | 7:39 AM

ಮಳೆಗಾಲದಲ್ಲಿ ಸಂಜೆ ಹೊತ್ತಿಗೆ ರುಚಿಕರವಾಗಿ ಏನಾದರು ತಿಂಡಿಯನ್ನು ಸವಿಯಬೇಕು ಎನ್ನುವುದು ಹಲವರ ಮನದಾಸೆಯಾಗಿರುತ್ತದೆ. ಆದರೆ ತುಂಬಾ ಸಮಯವನ್ನು ಇದಕ್ಕಾಗಿ ಮೀಸಲಿಡಲು ಜನರು ಹಿಂದೇಟು ಹಾಕುತ್ತಾರೆ. ಹೀಗಾಗಿ ಚಿಂತಿಸುವುದು ಬೇಡ. ಸರಳ ವಿಧಾನದ ಜತೆ ದಾವಣಗೆರೆ ಅವಲಕ್ಕಿ ಚುರುಮುರಿ ಮಾಡಿ ಸವಿಯಿರಿ.

ದಾವಣಗೆರೆ ಅವಲಕ್ಕಿ ಚುರುಮುರಿ ಮಾಡಲು ಬೇಕಾಗುವ ಸಾಮಾಗ್ರಿಗಳು ಜೀರಿಗೆ, ಕರಿ ಬೇವು, ಹಸಿ ಮೆಣಸಿನಕಾಯಿ, ಕೊಬ್ಬರಿ, ಕಡಲೆ, ಅಜ್ವಾನ, ಉಪ್ಪು, ಅರಿಶಿಣ, ಸಾಸಿವೆ, ಅಡುಗೆ ಎಣ್ಣೆ, ಒಣ ಮೆಣಸಿನಕಾಯಿ, ಸಕ್ಕರೆ, ಅವಲಕ್ಕಿ.

ದಾವಣಗೆರೆ ಅವಲಕ್ಕಿ ಚುರುಮುರಿ ಮಾಡುವ ವಿಧಾನ
ಮೊದಲು ಒಲೆ ಮೇಲೆ ಪಾತ್ರೆ ಇಟ್ಟು ಅಡುಗೆ ಎಣ್ಣೆ ಹಾಕಿಕೊಳ್ಳಿ, ಅದು ಕಾದ ಮೇಲೆ ಸಾಸಿವೆ, ಜೀರಿಗೆ, ಕಡಲೆ, ಹಸಿ ಮೆಣಸಿನಕಾಯಿ, ಕರಿ ಬೇವು, ಒಣ ಮೆಣಸಿನಕಾಯಿ, ಕೊಬ್ಬರಿ, ಅಜ್ವಾನ, ಉಪ್ಪು, ಅರಿಶಿಣ, ಸಕ್ಕರೆ ಹಾಕಿ ಕಲಸಿಕೊಳ್ಳಿ. ಬಳಿಕ ಅವಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿದರೆ ರುಚಿಕರವಾದ ದಾವಣಗೆರೆ ಅವಲಕ್ಕಿ ಚುರುಮುರಿ ಸವಿಯಲು ಸಿದ್ಧ.

ಇದನ್ನೂ ಓದಿ:
ಹೋಲ್ ಚಿಕನ್ ರೋಸ್ಟ್; ಸರಳ ವಿಧಾನದ ಜತೆ ಮನೆಯಲ್ಲೇ ಮಾಡಿ ಸವಿಯಿರಿ

ಮಟನ್ ದೊನ್ನೆ ಬಿರಿಯಾನಿ; ಮನೆಯಲ್ಲೇ ಸರಳ ವಿಧಾನದ ಜತೆ ಮಾಡಿ ಸವಿಯಿರಿ