ಗ್ರಾಮ ಪಂಚಾಯತಿ ಮಟ್ಟದ ನೌಕರರ ಕಾಯಮಾತಿ ಇಲ್ಲ, ಕೊವಿಡ್​ನಿಂದ ಮೃತಪಟ್ಟರೆ 30 ಲಕ್ಷ ಪರಿಹಾರ; ಸಚಿವ ಈಶ್ವರಪ್ಪ

ಜಲಜೀವನ್ ಮಿಷನ್ ನಡಿ 7 ಬೃಹತ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 4 ಕೋಟಿ 40 ಲಕ್ಷ ಮಾನವದಿನ ಪೂರೈಸಿದ್ದೇವೆ. 9 ಲಕ್ಷದ 10 ಸಾವಿರ ಕಾಮಗಾರಿ ಪ್ರಾರಂಭವಾಗಿದೆ. ಮಳೆ ನೀರು ಹಿಡಿದಿಡುವ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಅನುಷ್ಠಾನ ಮಾಡಿದೆ ಎಂದು ಈಶ್ವರಪ್ಪ ತಿಳಿಸಿದರು.

ಗ್ರಾಮ ಪಂಚಾಯತಿ ಮಟ್ಟದ ನೌಕರರ ಕಾಯಮಾತಿ ಇಲ್ಲ, ಕೊವಿಡ್​ನಿಂದ ಮೃತಪಟ್ಟರೆ 30 ಲಕ್ಷ ಪರಿಹಾರ; ಸಚಿವ ಈಶ್ವರಪ್ಪ
ಕೆ.ಎಸ್ .ಈಶ್ವರಪ್ಪ
Follow us
TV9 Web
| Updated By: Digi Tech Desk

Updated on:Jul 01, 2021 | 1:45 PM

ಬೆಂಗಳೂರು: ಗ್ರಾಮ ಪಂಚಾಯತಿ ಮಟ್ಟದ ನೌಕರರ ಕಾಯಮಾತಿ ಇಲ್ಲ. ಅಂತವರು ಕೊರೊನಾ ಸೋಂಕಿನಿಂದ ಮೃತಪಟ್ಟರೆ ಪರಿಹಾರ ನೀಡುತ್ತೇವೆ. 186 ಸಾವಿನ ಪ್ರಕರಣ ವರದಿಯಾಗಿದೆ. ತಲಾ 30 ಲಕ್ಷದಂತೆ ಅವರಿಗೆ ಪರಿಹಾರ ನೀಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಖಾಯಂ ಆಗದಿರುವ ನೌಕರರಿಗೆ ನೆರವು ಸಿಗಲಿದೆ. ಖಾಯಂ ಆದವರಿಗೂ ಪರಿಹಾರ ದೊರೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಲಜೀವನ್ ಮಿಷನ್ ನಡಿ 7 ಬೃಹತ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 4 ಕೋಟಿ 40 ಲಕ್ಷ ಮಾನವದಿನ ಪೂರೈಸಿದ್ದೇವೆ. 9 ಲಕ್ಷದ 10 ಸಾವಿರ ಕಾಮಗಾರಿ ಪ್ರಾರಂಭವಾಗಿದೆ. ಮಳೆ ನೀರು ಹಿಡಿದಿಡುವ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಅನುಷ್ಠಾನ ಮಾಡಿದೆ ಎಂದು ಈಶ್ವರಪ್ಪ ತಿಳಿಸಿದರು.

ಪ್ರತಿಯೊಂದು ಮನೆಗೆ ನಳದ ಸಂಪರ್ಕ ನೀಡಲಾಗುತ್ತದೆ. ಪ್ರತಿದಿನ 55 ಲೀಟರ್ ನೀರು ಪೂರೈಸಲಿದ್ದೇವೆ. ಇಲ್ಲಿಯವರೆಗೆ ಪೈಪ್ ಲೈನ್ ಹಾಕಲಾಗಿತ್ತು. ಮನೆಗಳಿಗೆ ನಳದ ಸಂಪರ್ಕ ಆಗಿರಲಿಲ್ಲ. ಈಗ ಸಂಪರ್ಕ ಕೊಡುವ ಕೆಲಸ ಮುಂದುವರಿಯಲಿದೆ. ನಳ ಸಂಪರ್ಕಕ್ಕೆ ಯಾವುದೇ ರೇಟ್ ಫಿಕ್ಸ್ ಮಾಡಿಲ್ಲ. ಆದರೆ ಗ್ರಾಮ ಪಂಚಾಯತಿಗಳೇ ರೇಟ್ ನಿರ್ಧರಿಸಲಿವೆ ಎಂದರು.

ಕಾಂಗ್ರೆಸ್ ಪಕ್ಷದ ಜೀವವೇ ಮುಗಿದು ಹೋಗಿದೆ ಎಂದ ಈಶ್ವರಪ್ಪ ರಾಜ್ಯದಲ್ಲಿ ಕುಟು ಕುಟು ಅಂತ ಕಾಂಗ್ರೆಸ್ ಓಡಾಡುತ್ತಿದೆ ಎಂದು ಹೇಳಿಕೆ ನೀಡಿದ ಈಶ್ವರಪ್ಪ, ಮುಳುಗುತ್ತಿರುವ ಕಾಂಗ್ರೆಸ್ ಉಳಿಸಲು ಯಾರಿಂದಲೂ ಆಗಲ್ಲ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ. ಸಾಮಾಜಿಕ ನ್ಯಾಯ ಎನ್ನುತ್ತ ಜನ ವಿರೋಧಿ ಕೆಲಸ ಮಾಡಿದ್ದಾರೆ. ಅದಕ್ಕಾಗಿಯೇ ಜನರು ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಟ್ಟೆಯಲ್ಲಿ ಆನೆ ಬಿದ್ದಿದೆ. ಅದನ್ನು ಎತ್ತಿಹಾಕಲೂ ಅವರಿಗೆ ಆಗುತ್ತಿಲ್ಲ. ಅಪ್ಪ ಅಮ್ಮ ಇಲ್ಲದ ಪಾರ್ಟಿ, ರಾಷ್ಟ್ರದಲ್ಲಿ ನಾಯಕತ್ವವೇ ಇಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ

ಆ್ಯಂಟಿ ಕೊರೊನಾ ಟ್ಯಾಗ್ ಧರಿಸಿರುವ ಸಿದ್ದರಾಮಯ್ಯ; ಕೊರೊನಾ ಲಸಿಕೆ ಬಗ್ಗೆ ವಿಪಕ್ಷ ನಾಯಕನ ಪಾಠ

ಸ್ಪುಟ್ನಿಕ್​ ಲೈಟ್​ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗಕ್ಕೆ ಅನುಮತಿ ನಿರಾಕರಿಸಿದ ಡಿಸಿಜಿಐ; ಸಿಂಗಲ್​ ಡೋಸ್​ ವ್ಯಾಕ್ಸಿನ್​ ಬಳಕೆ ಸದ್ಯಕ್ಕಿಲ್ಲ

(30 lakh rupees compensation for Gram Panchayat employees if they dies from Covid and no permanent position says minister KS Eshwarappa)

Published On - 1:13 pm, Thu, 1 July 21

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್