ಉತ್ತಮ ಫುಟ್‌ಪಾತ್ ಹೊಂದುವುದು ಜನರ ಹಕ್ಕು; ಇಲ್ಲದಿದ್ದರೆ ಏಜೆನ್ಸಿ ರಚಿಸಿ ಫುಟ್‌ಪಾತ್ ಒತ್ತುವರಿ ತೆರವು ಮಾಡಿಸ್ತೇವೆ: ಹೈಕೋರ್ಟ್ ಗರಂ
Footpath Encroachment: ಈ ಮಧ್ಯೆ, ‘ಫುಟ್‌ಪಾತ್‌ಗಳಲ್ಲಿ ಒತ್ತುವರಿ ತೆರವು ವಿಚಾರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಅರಿವು ಮೂಡಿಸಲು ಬಿಬಿಎಂಪಿ ಕೂಡಾ ಜಾಹೀರಾತು ನೀಡಿದೆ ಎಂದು ಸರ್ಕಾರಿ ವಕೀಲರು ಹೈಕೋರ್ಟ್ಗೆ ಇಂದು ಮಾಹಿತಿ ಸಲ್ಲಿಸಿದ್ದಾರೆ.
ಬೆಂಗಳೂರು: ಪಿಂಚಣಿದಾರರ ಸ್ವರ್ಗ ಎಂದೇ ಜನಜನಿತವಾದ ರಾಜಧಾನಿ ಬೆಂಗಳೂರಿನಲ್ಲಿ ಫುಟ್‌ಪಾತ್‌ಗಳ ಒತ್ತುವರಿಯಾಗಿ, ಅದು ಪಾದಚಾರಿಗಳಿಗೆ ದಕ್ಕದೆ ಯಾವುದೋ ಕಾಲವಾಗಿದೆ ಎಂಬುದು ಇಂದಿಗೂ ಹಳೆಯ ಬೆಂಗಳೂರಿಗರ ಕೂಗು, ಕೊರಗು. ಸರ್ಕಾರ ಯಾವುದೇ ಬಂದರೂ ಫುಟ್‌ಪಾತ್‌ಗಳ ಒತ್ತುವರಿ ತೆರವು ಇತ್ಯರ್ಥವಾಗುವುದಿಲ್ಲ. ಹಾಗಾಗಿ ಜನ ಗೊಣಗಿಕೊಳ್ಳುತ್ತಲೇ ಅದೇ ರಸ್ತೆಗಳಲ್ಲಿ ಅಸಹಾಯಕರಾಗಿ ಹೆಜ್ಜೆ ಹಾಕುತ್ತಾರೆ ಅನ್ನುತ್ತಾರೆ ಬೆಂಗಳೂರಿನ ಹಿರಿಯ ತಲೆಗಳು. ಹಾಗಂತ ಈ ಫುಟ್‌ಪಾತ್‌ಗಳ ಒತ್ತುವರಿ ಎಂಬ ಭೂತ ಬೆಂಗಳೂರಿಗೆ ಮಾತ್ರ ಸೀಮಿತ ಅಂತಲ್ಲ; ಯಾವುದೇ ನಗರ, ಪಟ್ಟಣಕ್ಕೆ ಹೋದರೂ ಇದು ಸರ್ವೇಸಾಮಾನ್ಯವಾಗಿಬಿಟ್ಟಿದೆ.
ಈ ಮಧ್ಯೆ, ‘ಫುಟ್‌ಪಾತ್‌ಗಳಲ್ಲಿ ಒತ್ತುವರಿ ತೆರವು ವಿಚಾರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಅರಿವು ಮೂಡಿಸಲು ಬಿಬಿಎಂಪಿ ಕೂಡಾ ಜಾಹೀರಾತು ನೀಡಿದೆ ಎಂದು ಸರ್ಕಾರಿ ವಕೀಲರು ಹೈಕೋರ್ಟ್ಗೆ ಇಂದು ಮಾಹಿತಿ ಸಲ್ಲಿಸಿದ್ದಾರೆ.
ಫುಟ್‌ಪಾತ್‌ಗಳನ್ನು ಒತ್ತುವರಿ ಮುಕ್ತಗೊಳಿಸಬೇಕು. ಉತ್ತಮ ಸ್ಥಿತಿಯಲ್ಲಿ ಫುಟ್‌ಪಾತ್ ಹೊಂದುವುದು ಜನರ ಹಕ್ಕು ಎಂದು ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದೆ. ಆದೇಶ ಪಾಲಿಸದಿದ್ದರೆ ಸ್ವತಂತ್ರ ಏಜೆನ್ಸಿ ರಚನೆ ಮಾಡಬೇಕಾಗುತ್ತದೆ. ಫುಟ್‌ಪಾತ್ ಒತ್ತುವರಿ ತೆರವಿಗೆ ಏಜೆನ್ಸಿ ರಚಿಸುವ ಎಚ್ಚರಿಕೆ ನೀಡಿ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 5ಕ್ಕೆ ಮುಂದೂಡಿತು.
(high court asks karnataka government and bbmp to clear footpath encroachment in bangalore)