ದಾಂಡೇಲಿಯ ಗ್ರಾಮವೊಂದರಲ್ಲಿ ಮೊಸಳೆ ವಿಹಾರ.. ಭಯಭೀತರಾದ ಗ್ರಾಮಸ್ಥರು
ಕಾಳಿ ನದಿಯಿಂದ ಗ್ರಾಮಕ್ಕೆ ಬಂದಿದ್ದ ಮೊಸಳೆ ರಸ್ತೆಯುದ್ದಕ್ಕೂ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಗ್ರಾಮದಲ್ಲಿ ಸಂಚಾರ ನಡೆಸಿತು.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೋಗಿಲಬನ ಗ್ರಾಮಕ್ಕೆ ಒಂದು ಬೃಹತ್ ಗಾತ್ರದ ಮೊಸಳೆ ಎಂಟ್ರಿ ಕೊಟ್ಟಿದೆ. ಇಂದು (ಗುರುವಾರ) ಬೆಳಗ್ಗೆ ರಸ್ತೆಯಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತ ಗ್ರಾಮದಲ್ಲಿ ಕಾಣಿಸಿಕೊಂಡ ಬೃಹತ್ ಮೊಸಳೆಯನ್ನು ನೋಡಿ ಜನ ಗಾಬರಿಯಾದರು. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನು ರಕ್ಷಿಸಿ ಜನರ ಆತಂಕವನ್ನು ದೂರ ಮಾಡಿದ್ದಾರೆ.
ಕಾಳಿ ನದಿಯಿಂದ ಗ್ರಾಮಕ್ಕೆ ಬಂದಿದ್ದ ಮೊಸಳೆ ರಸ್ತೆಯುದ್ದಕ್ಕೂ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಗ್ರಾಮದಲ್ಲಿ ಸಂಚಾರ ನಡೆಸಿತು. ಸದ್ಯ ಅದೃಷ್ಟವಶಾತ್ ಮೊಸಳೆ ಯಾರ ಮೇಲೆಯೂ ದಾಳಿ ನಡೆಸಿಲ್ಲ. ಯಾವುದೇ ಅನಾಹುತಗಳು ಸಂಭವಿಸಿಲ್ಲ. ಮೊಸಳೆ ಕಂಡ ಆತಂಕ ಚಕಿತರಾದ ಜನ ಭಯದಿಂದಲೇ ವಿಡಿಯೋ, ಸೆಲ್ಫಿ ಕ್ಲಿಕ್ಕಿಸಿದ್ದಾರೆ.
ಇನ್ನು ಮೊಸಳೆಯ ಓಡಾಟ ನೋಡಿ ಕೆಲ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಸಿಬ್ಬಂದಿ ಮೊಸಳೆಯನ್ನು ರಕ್ಷಿಸಿ ನದಿಗೆ ವಾಪಸ್ ಬಿಟ್ಟಿದ್ದಾರೆ. ಇನ್ನು ದಾಂಡೇಲಿಯಲ್ಲಿ ಮೊಸಳೆ ಪಾರ್ಕ್ ಕೂಡ ಇದೆ.
#WATCH Karnataka | A crocodile found strolling through Kogilban village in Dandeli. Later, forest officials rescued the crocodile & released it into the river. pic.twitter.com/2DDk7JuOB8
— ANI (@ANI) July 1, 2021
ಇದನ್ನೂ ಓದಿ: ಗುಜರಾತ್ನ ನರ್ಮದಾ ನದಿಯಲ್ಲಿ ಮೊಸಳೆಗಳಿಗೆ ಆಹಾರವಾದ ವ್ಯಕ್ತಿಯ ಶವ: ವಿಡಿಯೋ ವೈರಲ್
Published On - 2:29 pm, Thu, 1 July 21