ಫೀಲ್ಡಿಗಿಳಿದ ಸರಗಳ್ಳರು… ಸರಸರನೆ 19 ಕಡೆ ಸರಗಳ್ಳತನ ಮಾಡಿದರು! ಇದಕ್ಕೆ ಕಾರಣವಾಗಿದ್ದು ಏನು ಗೊತ್ತಾ?

Chain snatching: ರಾಜ್ಯದ ಮುಖ್ಯಮಂತ್ರಿ  ನಿನ್ನೆ ಗ್ರಾಮಾಂತರ ಜಿಲ್ಲೆಯಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.  ಆ ವೇಳೆ ಪೊಲೀಸರು ಸಿಎಂ  ಬಂದೋಬಸ್ತ್ ನಲ್ಲಿ ಮಗ್ನರಾಗಿದ್ದರು. ಈ ನಡುವೆ ಕೈಚಳಕ ತೋರಿಸಿದ ಸರಗಳ್ಳರು ಬೆಂಗಳೂರು ಸುತ್ತ-ಮುತ್ತಲಿನ ಹೊರಭಾಗದಲ್ಲಿ ಒಂದೇ ದಿನ ಬರೋಬ್ಬರಿ ಒಂಭತ್ತು ಕಡೆ ಸರಗಳ್ಳತನ ಮಾಡಿದ್ದಾರೆ.

ಫೀಲ್ಡಿಗಿಳಿದ ಸರಗಳ್ಳರು... ಸರಸರನೆ 19 ಕಡೆ ಸರಗಳ್ಳತನ ಮಾಡಿದರು! ಇದಕ್ಕೆ ಕಾರಣವಾಗಿದ್ದು ಏನು ಗೊತ್ತಾ?
ಮೊನ್ನೆ ಫೀಲ್ಡಿಗಿಳಿದು 19 ಕಡೆ ಸರಗಳ್ಳತನ ಮಾಡಿದ್ದ ಖದೀಮರ ಪೈಕಿ ಇಬ್ಬರು ಅರೆಸ್ಟ್ ಆದ್ರು: ಸರಗಳ್ಳರ ಮೋಡಸ್​ ಆಪರೆಂಡಿ ಹೀಗಿತ್ತು!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 01, 2021 | 3:29 PM

ಬೆಂಗಳೂರು: ಇದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಪೊಲೀಸರ ತುರ್ತು ಗಮನಕ್ಕೆ. ಕೊರೊನಾ ಭೂತದ ಕಾಟ ಕಡಿಮೆಯಾಗುತ್ತಿದ್ದಂತೆ ಸರಗಳ್ಳ ಭೂತಗಳು ರಾಜಧಾನಿಯಲ್ಲಿ ಫೀಲ್ಡಿಗಿಳಿದಿದ್ದಾರೆ. ನಿನ್ನೆ ಒಂದೇ ದಿನ 19 ಕಡೆ ಸರಗಳ್ಳತನ ಮಾಡಿದ್ದಾರೆ. ಒಂದು ಕೆಜಿಗೂ ಅಧಿಕ ಚಿನ್ನಾಭರಣ ಕಸಿದು ಪರಾರಿಯಾಗಿದ್ದಾರೆ. ಆದರೆ ಇದಕ್ಕೆ ಹೇತುವಾದ ಘಟನೆಗಳು ಮಾತ್ರ ಕುತೂಹಲಕಾರಿಯಾಗಿದೆ. 

ಕೊರೊನಾ ಕಾಲದಲ್ಲಿ ಅಪರಾಧ ಪ್ರಕರಣಗಳು ತಗ್ಗಿವೆ. ಸೈಬರ್​ ಕ್ರೈಂ ಜಾಸ್ತಿಯಾಗಿದೆಯಷ್ಟೇ ಅಷ್ಟೇ ಎಂದು ಬೆಂಗಳೂರು ಪೊಲೀಸರು ಮೈಮರೆತಂತೆ ಇರುವಾಗ ಸರಗಳ್ಳರು ನಾವಿದ್ದೇವೆ ಫೀಲ್ಡ್​​ನಲ್ಲಿ ಎಂದು ಸಾರಿದ್ದಾರೆ. ಒಂದಲ್ಲ, ಎರಡಲ್ಲ… 19 ಕಡೆಗಳಲ್ಲಿ ಮಹಿಳೆಯರ ಕುತ್ತಿಗೆಗೆ ಕೈಹಾಕಿ ಮಾಂಗಲ್ಯ ಸರಗಳನ್ನು ಜಗ್ಗಿಕೊಂಡು ಹೋಗಿದ್ದಾರೆ ಖದೀಮರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿನ್ನೆ 19 ಕಡೆ ಸರಗಳ್ಳತನಗಳು ಆಗಿದ್ದು,  ಬೆಂಗಳೂರು ನಗರದಲ್ಲಿ ಅಲರ್ಟ್ ಆಗಿರುವಂತೆ ಎಲ್ಲಾ ಠಾಣೆಗಳಿಗೂ ಇದೀಗ ಸಂದೇಶ ರವಾನೆಯಾಗಿದೆ.

ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಅವರು ಸದ್ಯಕ್ಕೆ ಈ ಸೂಚನೆ ಹೊರಡಿಸಿದ್ದು, ಎಲ್ಲಾ ಠಾಣಾ ಸಿಬ್ಬಂದಿ ಅಲರ್ಟ್ ಆಗಿರುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ, ಚೆಕ್‌ಪೋಸ್ಟ್‌ಗಳಲ್ಲಿಯೂ ಅಲರ್ಟ್ ಆಗಿರುವಂತೆ ತಮ್ಮ ಪೊಲೀಸರಿಗೆ ತಿಳಿಸಿದ್ದಾರೆ.

ರಾಜಧಾನಿಯಲ್ಲಿ ಇನ್ನೂ ಲಾಕ್​ಡೌ್​ನ್​ ಜಾರಿಯಲ್ಲಿದೆ.  ಸಂಜೆ ಐದು ಗಂಟೆ ಬಳಿಕ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಮಾಡಿಸಬೇಕು. ಯಾವುದೇ ಚೈನ್ ಸ್ನಾಚಿಂಗ್ ಪ್ರಕರಣ ಆಗದಂತೆ ಎಚ್ಚರವಹಿಸುವಂತೆ ಅವರು ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ.

ಇದಕ್ಕೆ ಕಾರಣವಾಗಿದ್ದು ಏನು ಗೊತ್ತಾ?

ರಾಜ್ಯದ ಮುಖ್ಯಮಂತ್ರಿ  ನಿನ್ನೆ ಗ್ರಾಮಾಂತರ ಜಿಲ್ಲೆಯಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.  ಆ ವೇಳೆ ಪೊಲೀಸರು ಸಿಎಂ  ಬಂದೋಬಸ್ತ್ ನಲ್ಲಿ ಮಗ್ನರಾಗಿದ್ದರು. ಈ ನಡುವೆ ಕೈಚಳಕ ತೋರಿಸಿದ ಸರಗಳ್ಳರು ಬೆಂಗಳೂರು ಸುತ್ತ-ಮುತ್ತಲಿನ ಹೊರಭಾಗದಲ್ಲಿ ಒಂದೇ ದಿನ ಬರೋಬ್ಬರಿ ಒಂಭತ್ತು ಕಡೆ ಸರಗಳ್ಳತನ ಮಾಡಿದ್ದಾರೆ.

ಬ್ಲಾಕ್ ಪಲ್ಸರ್ ಬೈಕ್​ನಲ್ಲಿ ಬಂದ ಸರಗಳ್ಳರು, ರಾಜಾರೋಷವಾಗಿ ಸರಣಿ ಸರಗಳ್ಳತನ ನಡೆಸಿ ಅಟ್ಟಹಾಸಗೈದಿದ್ದಾರೆ.  ಸರ್ಜಾಪುರ, ಅನುಗೊಂಡನಹಳ್ಳಿ, ಸೂಲಿಬೆಲೆ, ತಿರುಮಲಶೆಟ್ಟಿಹಳ್ಳಿ, ಹೊಸಕೋಟೆ, ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನಗಳನ್ನು ನಡೆಸಿದ್ದಾರೆ.

ಬ್ಲಾಕ್ ಫಲ್ಸರ್ ಗಳಲ್ಲಿ ಬಂದಿದ್ದ  ಒಂದೇ ಗ್ಯಾಂಗ್ ನಿಂದ ಎಲ್ಲಾ ಕಡೆ ಸರಗಳ್ಳತನವಾಗಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸರಿಂದ ಸರಗಳ್ಳರಿಗಾಗಿ ತಕ್ಷಣ ತಲಾಶ್ ನಡೆದಿದೆ. ಬೆಂಗಳೂರು ನಗರ ಪೊಲೀಸರೊಂದಿಗೆ ಸಿಸಿಟಿವಿ ಕ್ಯಾಮಾರ ದೃಶ್ಯಾವಳಿ ಶೇರ್ ಮಾಡಿ ಸರಗಳ್ಳರಿಗಾಗಿ ತಲಾಶ್ ಕಾರ್ಯ ಆರಂಭಿಸಿದ್ದಾರೆ.

ನಿನ್ನೆ ಗ್ರಾಮಾಂತರ ಜಿಲ್ಲೆಯಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಹೊಸಕೋಟೆ ಬಳಿ ಜನಪದರು ರಂಗಮಂದಿರ ಉದ್ಘಾಟನೆ ಹಾಗೂ ಕೆರೆ ವೀಕ್ಷಣೆ ಮಾಡಿದರು. ಬಳಿಕ ನೆಲಮಂಗಲದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

(19 chain snatching cases reported in bengaluru rural be aert says bangalore south dcp harish pande)

Published On - 3:28 pm, Thu, 1 July 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್