NLSIU: ನ್ಯಾಷನಲ್ ಲಾ ಸ್ಕೂಲ್ನಲ್ಲಿ ಕರ್ನಾಟಕ ವಿದ್ಯಾರ್ಥಿಗಳಿಗೆ ಶೇ. 25ರಷ್ಟು ಮೀಸಲಾತಿ ಎತ್ತಿಹಿಡಿದ ಸುಪ್ರೀಂ ಕೋರ್ಟ್
ಜ್ಞಾನಭಾರತಿ ಬಳಿಯಿರುವ ನ್ಯಾಷನಲ್ ಲಾ ಸ್ಕೂಲ್ನಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಎಂದು ಪರಿಗಣಿಸಿ ಕರ್ನಾಟಕ ವಿದ್ಯಾರ್ಥಿಗಳಿಗೆ ಶೇ. 25ರಷ್ಟು ಮೀಸಲಾತಿ ನೀಡುಬೇಕು ಎಂಬ ವಾದವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ನವದೆಹಲಿ/ ಬೆಂಗಳೂರು: ಜ್ಞಾನಭಾರತಿ ಬಳಿಯಿರುವ ನ್ಯಾಷನಲ್ ಲಾ ಸ್ಕೂಲ್ನಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಎಂದು ಪರಿಗಣಿಸಿ ಕರ್ನಾಟಕ ವಿದ್ಯಾರ್ಥಿಗಳಿಗೆ ಶೇ. 25ರಷ್ಟು ಮೀಸಲಾತಿ ನೀಡುಬೇಕು ಎಂಬ ವಾದವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಸ್ಥಳೀಯರಾದ ಕರ್ನಾಟಕ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ ಒತ್ತು ಸಿಕ್ಕಿದಂತಾಗಿದೆ.
2021-22 ನೇ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯನ್ ಯೂನಿವರ್ಸಿಟಿ (National Law School of India University -NLSIU Bengaluru) ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ. 25ರಷ್ಟು ಮೀಸಲಾತಿ ನಿಗದಿಪಡಿಸಿ, ಲಾ ಸ್ಕೂಲ್ ಈಗಾಗಲೇ ಹೊರಡಿಸಿರುವ ಅಧಿಸೂಚನೆಯನ್ನು ತಡೆಹಿಡಿಯುವುದಿಲ್ಲ ಎಂದು ಜಸ್ಟೀಸ್ ನಾಗೇಶ್ವರರಾವ್ ಮತ್ತು ಜಸ್ಟೀಸ್ ರವೀಂದ್ರ ಭಟ್ ಅವರ ನ್ಯಾಯಪೀಠ ಇಂದು ಆದೇಶ ನೀಡಿದೆ.
ಈ ತೀರ್ಪಿನಿಂದಾಗಿ ಜುಲೈ 23 ಶುಕ್ರವಾರದಂದು ಸಾಮಾನ್ಯ ಪ್ರವೇಶ ಪರೀಕ್ಷೆ (Common Law Admission Test -CLAT) ಈ ಹಿಂದೆ ನಿಗದಿಪಡಿಸಿರುವಂತೆ ನಡೆಯಲಿದೆ ಎಂದೂ ನ್ಯಾಯ ಪೀಠ ಸ್ಪಷ್ಟಪಡಿಸಿದೆ.
ಏನಿದು ವ್ಯಾಜ್ಯ:
ಈ ಹಿಂದೆ ಕರ್ನಾಟಕ ಸರ್ಕಾರವು ಸ್ಥಳೀಯ ಕನ್ನಡಿಗರಿಗೆ ಆದ್ಯತೆಯ ಮೇರೆಗೆ ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ನಲ್ಲಿ ಕಾನೂನು ವಿದ್ಯಾಭ್ಯಾಸಕ್ಕಾಗಿ ಶೇ. 25ರಷ್ಟು ಸೀಟುಗಳನ್ನು ನೀಡಬೇಕು ಎಂದು ತಿದ್ದುಪಡಿ ಕಾಯಿದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಿತ್ತು. ಆದರೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರದ ತಿದ್ದುಪಡಿ ಕಾಯಿದೆಯನ್ನು ಕಳೆದ ವರ್ಷ (ಅಕ್ಟೋಬರ್ 2020) ಅನೂರ್ಜಿತಗೊಳಿಸಿತ್ತು.
ಇದರಿಂದ ಕಾನೂನು ವ್ಯಾಸಂಗ ಮಾಡಲು ಇಚ್ಛಿಸುವ ಸ್ಥಳೀಯ ವಿದ್ಯಾರ್ಥಿಗಳಿಗೆ ಅನ್ಯಾವಾಗುತ್ತದೆ. ಕನ್ನಡಿಗರಿಗೆ ಮೀಸಲಾತಿ ನೀಡಲೇಬೇಕು ಎಂದು ಮನವಿ ಮಾಡಿಕೊಂಡ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆಹೋಗಿತ್ತು. ಅರ್ಜಿ ಆಲಿಸಿದ ಸುಪ್ರೀಂ ಪೀಠವು ಇಂದು ಕರ್ನಾಟಕ ಹೈಕೋರ್ಟ್ ಆದೇಶವನ್ನು ಪಕ್ಕಕ್ಕಿಟ್ಟು, ಈ ಹಿಂದಿನಂತೆ ಸ್ಥಳೀಯರಿಗೆ ಶೇ. 25 ರಷ್ಟು ಮೀಸಲಾತಿ ಇರಲಿ ಎಂದು ಸೂಚಿಸಿದೆ.
ಕರ್ನಾಟಕದಲ್ಲಿ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಯಾರು 10 ವರ್ಷ ಕಾಲ ವ್ಯಾಸಂಗ ಮಾಡಿರುತ್ತಾರೋ ಅಂತಹವರನ್ನು ‘ಕರ್ನಾಟಕ ವಿದ್ಯಾರ್ಥಿ’ (Karnataka Student) ಎಂದು ಪರಿಗಣಿಸಲಾಗುತ್ತದೆ.
ಇನ್ನು ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್ನಲ್ಲಿ B.A, LL.B(Hons) ಮತ್ತು LLM ಶಿಕ್ಷಣಕ್ಕೆ ಅನುಕ್ರಮವಾಗಿ 120 ಮತ್ತು 50 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ನಿಗದಿಪಡಿಸಲಾಗಿದೆ.
National Law School of India University introduces 25% horizontal reservation for Karnataka students for academic year 2021-22. CLAT candidates asked to update their reservation tab accordingly.
Karnataka HC had last year quashed the 25% reservation in NLSIU for Kar’ka students. pic.twitter.com/k1OhthzmcD
— Live Law (@LiveLawIndia) July 1, 2021
ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್ NLSIU Inclusion and Expansion Plan 2021-2024 ಯೋಜನೆಯಡಿ ಈ ಹಿಂದೆಯೇ ಕರ್ನಾಟಕ ವಿದ್ಯಾರ್ಥಿಗಳಿಗೆ ಮೇಲಿನ 120 ಮತ್ತು 50 ಸೀಟುಗಳ ಪೈಕಿ ಶೇ. 25ರಷ್ಟನ್ನು ಮೀಸಲು ನಿಗದಿಪಡಿಸಿತ್ತು. ಆದರೆ ಇದರ ವಿರುದ್ಧ ಕರ್ನಾಟಕ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
(Supreme Court Refuses To Stay NLSIU 25 per cent Reservation For Karnataka Students In 2021-22 Admissions)
Published On - 1:08 pm, Fri, 2 July 21