ಮೊನ್ನೆ ಫೀಲ್ಡಿಗಿಳಿದು 19 ಕಡೆ ಸರಗಳ್ಳತನ ಮಾಡಿದ್ದ ಖದೀಮರ ಪೈಕಿ ಇಬ್ಬರು ಅರೆಸ್ಟ್ ಆದ್ರು: ಸರಗಳ್ಳರ ಮೋಡಸ್​ ಆಪರೆಂಡಿ ಹೀಗಿತ್ತು!

ಬುಧವಾರ ದಿಢೀರನೆ ಪಲ್ಸರ್​ ಬೈಕ್​ಗಳಲ್ಲಿ ಬಂದು, ಸರಣಿ ಸರಗಳ್ಳತನ ಮಾಡಿರುವ ಪ್ರಕರಣಗಳು ವರದಿಯಾಗುತ್ತಿದ್ದಂತೆ ಎಚ್ಚೆತ್ತ ಮಲ್ಲೇಶ್ವರಂ ಠಾಣೆ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದರು. ಸರಗಳವು ಹಿನ್ನೆಲೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ರಾಹಿಂ ಪಾಷ (32) ಹಾಗೂ ಅಜರ್ ಪಾಷ (29)ನನ್ನು ಬಂಧಿಸಿದ್ದರು.

ಮೊನ್ನೆ ಫೀಲ್ಡಿಗಿಳಿದು 19 ಕಡೆ ಸರಗಳ್ಳತನ ಮಾಡಿದ್ದ ಖದೀಮರ ಪೈಕಿ ಇಬ್ಬರು ಅರೆಸ್ಟ್ ಆದ್ರು: ಸರಗಳ್ಳರ ಮೋಡಸ್​ ಆಪರೆಂಡಿ ಹೀಗಿತ್ತು!
ಮೊನ್ನೆ ಫೀಲ್ಡಿಗಿಳಿದು 19 ಕಡೆ ಸರಗಳ್ಳತನ ಮಾಡಿದ್ದ ಖದೀಮರ ಪೈಕಿ ಇಬ್ಬರು ಅರೆಸ್ಟ್ ಆದ್ರು: ಸರಗಳ್ಳರ ಮೋಡಸ್​ ಆಪರೆಂಡಿ ಹೀಗಿತ್ತು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 02, 2021 | 12:59 PM

ಬೆಂಗಳೂರು: ಮೊನ್ನೆ ಬುಧವಾರ ಬೆಂಗಳೂರು ಪೊಲೀಸರು ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಬಂದೋಬಸ್ತ್​​ನಲ್ಲಿ ಬ್ಯುಸಿಯಾಗಿದ್ದಾಗ ಅವರನ್ನು ಯಾಮಾರಿಸಿ ಫೀಲ್ಡಿಗಿಳಿದಿದ್ದ ಸರಗಳ್ಳರು ಪಲ್ಸರ್​​ ಬೈಕ್​ನಲ್ಲಿ ಬಂದು 19 ಕಡೆ ಸರಗಳ್ಳತನ ಮಾಡಿದ್ದರು. ಅವರ ಪೈಕಿ ಇಬ್ಬರನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಇಬ್ರಾಹಿಂ ಪಾಷಾ ಮತ್ತು ಅಜರ್ ಪಾಷಾ ಎಂದು ಗುರುತಿಸಲಾಗಿದೆ.

ಇಬ್ರಾಹಿಂ ಪಾಷಾ ಮತ್ತು ಅಜರ್ ಪಾಷಾನಿಂದ 223 ಗ್ರಾಂ ಚಿನ್ನಾಭರಣ ವಶ ಪಡಿಸಿಕೊಳ್ಳಲಾಗಿದೆ. ಸರಗಳವು, ದರೋಡೆ, ಡಕಾಯಿತಿ ಸೇರಿದಂತೆ ಒಟ್ಟು 16 ಪ್ರಕರಣಗಳಲ್ಲಿ ಇವರಿಬ್ಬರೂ ಭಾಗಿಯಾಗಿದ್ದಾರೆ ಎಂದು ಮಲ್ಲೇಶ್ವರ ಪೊಲೀಸರು ತಿಳಿಸಿದ್ದಾರೆ.

ಸರಗಳ್ಳರ ಮೋಡಸ್​ ಆಪರೆಂಡಿ ಹೀಗಿತ್ತು! ಬುಧವಾರ ದಿಢೀರನೆ ಪಲ್ಸರ್​ ಬೈಕ್​ಗಳಲ್ಲಿ ಬಂದು, ಸರಣಿ ಸರಗಳ್ಳತನ ಮಾಡಿರುವ ಪ್ರಕರಣಗಳು ವರದಿಯಾಗುತ್ತಿದ್ದಂತೆ ಎಚ್ಚೆತ್ತ ಮಲ್ಲೇಶ್ವರಂ ಠಾಣೆ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದರು. ಸರಗಳವು ಹಿನ್ನೆಲೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ರಾಹಿಂ ಪಾಷ (32) ಹಾಗೂ ಅಜರ್ ಪಾಷ (29)ನನ್ನು ಬಂಧಿಸಿದ್ದರು.

ಆರೋಪಿಗಳಿಬ್ಬರೂ ಕಳೆದ ಮಾರ್ಚ್ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಜೈಲಿನಲ್ಲಿ ಪರಸ್ಪರ ಪರಿಚಯರಾಗಿದ್ದ ಆರೋಪಿಗಳು ಜೈಲಿನಿಂದ ಹೊರಬಂದ ನಂತರ ಜೊತೆಯಾಗಿ ಸರಗಳ್ಳತನಕ್ಕೆ ಕೈಹಾಕಿದ್ದರು. ಬೆಳಗ್ಗೆ 5 ರಿಂದ 6.30 ರ ಒಳಗಾಗಿ ಸರಗಳವು ಮಾಡುತ್ತಿದ್ದ ಆರೋಪಿಗಳು ಹಿಂದಿನ ದಿನ ಬೈಕ್ ಕಳವು ಮಾಡಿ ಅದನ್ನು ಕೃತ್ಯಕ್ಕೆ ಬಳಕೆ ಮಾಡುತ್ತಿದ್ದರು ಎಂದು ಪೊಲೀಸರು ಸರಗಳ್ಳರ ಮೋಡಸ್​ ಆಪರೆಂಡಿ (modus operandi) ಬಗ್ಗೆ ಮಾಹಿತಿ ನೀಡಿದ್ದಾರೆ.

ಫೀಲ್ಡಿಗಿಳಿದ ಸರಗಳ್ಳರು… ಸರಸರನೆ 19 ಕಡೆ ಸರಗಳ್ಳತನ ಮಾಡಿದರು! ಇದಕ್ಕೆ ಕಾರಣವಾಗಿದ್ದು ಏನು ಗೊತ್ತಾ? (nineteen chain snatching cases reported in bangalore 2 arrested modus operandi as disclosed by malleswaram police)