ಕೊಡಗಿನಲ್ಲಿ ನೆಟ್ವರ್ಕ್ ಸಮಸ್ಯೆಯ ಪರಿಹಾರಕ್ಕಾಗಿ 20 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸಿದ ಶಿಕ್ಷಕ

ಸೋಮವಾರಪೇಟೆ ತಾಲ್ಲೂಕಿನ ಮಳ್ಳೂರು ಗ್ರಾಮದ ಶಿಕ್ಷಕ ಸಿ.ಎಸ್ ಸತೀಶ್ ನೆಟ್ವರ್ಕ್​ಗಾಗಿಯೇ 20 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸಿಕೊಂಡಿದ್ದಾರೆ. ಬಿದಿರು, ಮತ್ತು ಇನ್ನಿತರ ಜಾತಿಯ ಮರಗಳನ್ನು ಬಳಸಿ ಆಕರ್ಷಕ ಅಟ್ಟಣಿಗೆ ನಿರ್ಮಾಣ ಮಾಡಿದ್ದು, ಅಟ್ಟಣಿಗೆಯಲ್ಲಿ ಆನ್​ಲೈನ್ ಕ್ಲಾಸ್ ನಡೆಸಲು ಬೇಕಾದ, ಸ್ಟ್ಯಾಂಡ್, ಕಪ್ಪು ಬೋರ್ಡ್​ಗಳನ್ನು ಅಳವಡಿಸಿಕೊಂಡಿದ್ದಾರೆ.

ಕೊಡಗಿನಲ್ಲಿ ನೆಟ್ವರ್ಕ್ ಸಮಸ್ಯೆಯ ಪರಿಹಾರಕ್ಕಾಗಿ 20 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸಿದ ಶಿಕ್ಷಕ
20 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸಿದ ಶಿಕ್ಷಕ
Follow us
TV9 Web
| Updated By: preethi shettigar

Updated on: Jul 04, 2021 | 3:52 PM

ಕೊಡಗು: ಬೆಟ್ಟ ಗುಡ್ಡಗಳಿಂದಲೇ ಕೂಡಿರುವ ಕೊಡಗು ಜಿಲ್ಲೆಯಲ್ಲಿ ಮೊಬೈಲ್ ನೆಟ್ವರ್ಕ್ ಇನ್ನು ಕೂಡ ಕನಸಿನ‌ಮಾತೇ ಆಗಿದೆ. ಕೇವಲ ಪಟ್ಟಣ ಪ್ರದೇಶಗಳಲ್ಲಿ ಮಾತ್ರ ನೆಟ್ವರ್ಕ್ ಸಿಗುತ್ತದೆ ಬಿಟ್ಟರೆ, ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್​ ಸಿಗುವುದೇ ಇಲ್ಲ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೆಟ್ವರ್ಕ್ ಇಲ್ಲದೆ ಪರದಾಡುವಂತಾಗಿದೆ. ಅದರಲ್ಲೂ ಕೊರೊನಾ ಪ್ರಾರಂಭವಾದ ದಿನದಿಂದ ಆನ್​ಲೈನ್​ ತರಗತಿ ಪ್ರಾರಂಭವಾಗಿದ್ದು, ಮಕ್ಕಳು ಪಾಠ ಕೇಳುವುದಕ್ಕಾಗಿ ಮರ ಹತ್ತಿರುವುದು ಮತ್ತು ಪಾಠದಿಂದ ವಂಚಿತರಾಗಿರುವ ಬಗ್ಗೆ ನಾವು ಓದಿದ್ದೇವೆ. ಎಷ್ಟೋ ಗ್ರಾಮಗಳಲ್ಲಿ ಆನ್​ಲೈನ್ ಕ್ಲಾಸ್​ಗಳೇ ನಡೆಯುತ್ತಿಲ್ಲ. ಶಿಕ್ಷಕರು ಕೂಡ ಕೈಚೆಲ್ಲಿ ಕುಳಿತಿದ್ದಾರೆ. ಆದರೆ ಕೊಡಗು ಜಿಲ್ಲೆಯಲ್ಲಿನ ಶಿಕ್ಷಕರೊಬ್ಬರು ನೆಟ್ವರ್ಕ್​ಗಾಗಿ ಹೊಸದಾರಿ ಕಂಡುಕೊಂಡಿದ್ದು, ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.

ಸೋಮವಾರಪೇಟೆ ತಾಲ್ಲೂಕಿನ ಮಳ್ಳೂರು ಗ್ರಾಮದ ಶಿಕ್ಷಕ ಸಿ.ಎಸ್ ಸತೀಶ್ ನೆಟ್ವರ್ಕ್​ಗಾಗಿಯೇ 20 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸಿಕೊಂಡಿದ್ದಾರೆ. ಬಿದಿರು, ಮತ್ತು ಇನ್ನಿತರ ಜಾತಿಯ ಮರಗಳನ್ನು ಬಳಸಿ ಆಕರ್ಷಕ ಅಟ್ಟಣಿಗೆ ನಿರ್ಮಾಣ ಮಾಡಿದ್ದು, ಅಟ್ಟಣಿಗೆಯಲ್ಲಿ ಆನ್​ಲೈನ್ ಕ್ಲಾಸ್ ನಡೆಸಲು ಬೇಕಾದ, ಸ್ಟ್ಯಾಂಡ್, ಕಪ್ಪು ಬೋರ್ಡ್​ಗಳನ್ನು ಅಳವಡಿಸಿಕೊಂಡಿದ್ದಾರೆ. ಮಕ್ಕಳಿಗೆ ಪಾಠದ ಜೊತೆ ಯೋಗಾಸನ, ಕಥೆ, ಕವನ, ಸಾಂಸ್ಕೃತಿಕ ಚಟುವಟಿಕೆಗಳನ್ನೂ ಹೇಳಿಕೊಡುತ್ತಿದ್ದಾರೆ.

37 ವರ್ಷದ ಸತೀಶ್ ಮುಲ್ಲೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದು, 20 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸಲು 2 ತಿಂಗಳು ತೆಗೆದುಕೊಂಡಿದ್ದಾರೆ. ಈ ಅಟ್ಟಣಿಗೆ ತಯಾರಿಸಲು 10000ರೂಪಾಯಿ ಖರ್ಚಾಗಿದೆ. ಈ ಅಟ್ಟಣಿಗೆಯಲ್ಲಿ ವಿದ್ಯುತ್​ ವ್ಯವಸ್ಥೆ ಕೂಡ ಇದೆ. ಅಟ್ಟಣಿಗೆಗೆ ಅಗತ್ಯವಿರುವ ಬಿದಿರು, ಹುಲ್ಲು, ಗೋಣಿ ಚೀಲಗಳನ್ನು ಸ್ನೇಹಿತರು ನೀಡಿ ಸಹಾಯ ನೀಡಿದ್ದಾರೆ ಎಂದು ಶಿಕ್ಷಕ ಸತೀಶ್ ತಿಳಿಸಿದ್ದಾರೆ.

ನಮ್ಮ ಶಿಕ್ಷಕರ ಈ ಅದ್ಭುತ ಕಾರ್ಯದಿಂದ ನಾವು ಒಂದೇ ಒಂದು ಕ್ಲಾಸ್​ ಅನ್ನು ಕೂಡ ತಪ್ಪಿಸಿಕೊಂಡಿಲ್ಲ. ನಿಜಕ್ಕೂ ಇದು ನಮ್ಮ ಕಲಿಕೆಗೆ ಸಹಾಯವಾಗುತ್ತಿದೆ ಎಂದು ನಾಲ್ಕನೆ ತರಗತಿ ವಿದ್ಯಾರ್ಥಿ ಪುನ್ಯಾ ಹೇಳಿದ್ದಾರೆ.

ಬಹಳಷ್ಟು ಶಿಕ್ಷಕರು ನೆಟ್ವರ್ಕ್ ಸಮಸ್ಯೆ ಇದೆ ಎನ್ನುವ ಕಾರಣಕ್ಕೆ ಆನ್​ಲೈನ್ ತರಗತಿಗಳನ್ನೇ ಮಾಡುವುದಿಲ್ಲ. ಆದರೆ ಸತೀಶ್ ಅವರು ಈ ಹೊಸ ಪ್ರಯತ್ನದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಸತೀಶ್ ಅವರ ಅಟ್ಟಣಿಗೆ ಕ್ಲಾಸ್ ಇದೀಗ ಜಿಲ್ಲೆಯಲ್ಲಿ‌ ಮನೆ ಮಾತಾಗಿದೆ.

ಇದನ್ನೂ ಓದಿ: ಆನ್​ಲೈನ್​​ ಕ್ಲಾಸ್​ ಸಂಕಟಗಳು: ಮೊಬೈಲ್ ಒಡೆದಿದೆ, ಅಪ್ಪನ ಬಳಿ ದುಡ್ಡಿಲ್ಲ, ಅಣ್ಣ ಫೋನ್ ಕೊಡಲ್ಲ- ಟೀಚರ್​ ತೆರೆದಿಟ್ಟ ಕಟು ವಾಸ್ತವ

ಶಿಕ್ಷಣ ಇಲಾಖೆ ಆದೇಶವಿಲ್ಲದೆ ಪ್ರಥಮ ಪಿಯು ದಾಖಲಾತಿ ಮಾಡುವಂತಿಲ್ಲ; ಆನ್​ಲೈನ್​ ತರಗತಿ ನಡೆಸುವಂತಿಲ್ಲ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ