ಐಪಿಎಸ್ ಡಿ ರೂಪಾ ಫೇಸ್​ಬುಕ್ ಪೋಸ್ಟ್​ಗಳನ್ನು ಟ್ರೋಲ್ ಮಾಡಲು ಏಜೆನ್ಸಿಗೆ ಗುತ್ತಿಗೆ? ಐಎಎಸ್ ರೋಹಿಣಿ ಸಿಂಧೂರಿ ವಿರುದ್ಧ ಆರೋಪ

ಐಪಿಎಸ್ ಅಧಿಕಾರಿ ಡಿ.ರೂಪಾ ಫೇಸ್​ಬುಕ್ ಪೋಸ್ಟ್​ಗಳಿಗೆ ಕೆಟ್ಟದಾಗಿ ಟ್ರೋಲ್ ಮಾಡಲು ಎಂದೇ ಏಜೆನ್ಸಿಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲದೇ ಕೆಟ್ಟದಾಗಿ ಕಮೆಂಟ್​ಗಳನ್ನೂ ಹಾಕಿಸಲಾಗುತ್ತಿದೆ. ಹೀಗಾಗಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಯಾವುದೇ ಪೋಸ್ಟ್ ಹಾಕದಂತೆ ಡಿ. ರೂಪಾ ಅವರಿಗೆ ಹೆಸರು ಬಹಿರಂಗಪಡಿಸಲು ಇಚ್ಛಿಸಿದ ವ್ಯಕ್ತಿ ಮೆಸೇಜ್ ಮೂಲಕ ಮನವಿ ಮಾಡಿದ್ದಾನೆ.

ಐಪಿಎಸ್ ಡಿ ರೂಪಾ ಫೇಸ್​ಬುಕ್ ಪೋಸ್ಟ್​ಗಳನ್ನು ಟ್ರೋಲ್ ಮಾಡಲು ಏಜೆನ್ಸಿಗೆ ಗುತ್ತಿಗೆ? ಐಎಎಸ್ ರೋಹಿಣಿ ಸಿಂಧೂರಿ ವಿರುದ್ಧ ಆರೋಪ
ಐಪಿಎಸ್ ಅಧಿಕಾರಿ ಡಿ.ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ
TV9kannada Web Team

| Edited By: guruganesh bhat

Jul 04, 2021 | 4:01 PM


ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ನಡುವಿನ ಘರ್ಷಣೆ ಮತ್ತೆ ಮುನ್ನೆಲೆಗೆ ಬಂದಿದೆ. ಐಪಿಎಸ್ ಡಿ. ರೂಪಾ ಅವರ ಫೇಸ್​ಬುಕ್​ನ ಪೋಸ್ಟ್​ಗಳಿಗೆ ಕೆಟ್ಟದಾಗಿ ಟ್ರೋಲ್​ ಮಾಡಿಸುವ ಆರೋಪ ಕೇಳಿಬಂದಿದ್ದು, ರೋಹಿಣಿ ಸಿಂಧೂರಿ ಅವರ ಪತಿ ಪಿಆರ್​ಒ ಏಜೆನ್ಸಿ ಮೂಲಕ ಟ್ರೋಲ್ ಮಾಡಿಸುತ್ತಿದ್ದಾರೆ ಎಂದು ಹೆಸರು ಬಹಿರಂಗಪಡಿಸದ ವ್ಯಕ್ತಿಯೊಬ್ಬರು ಅರೋಪ ಮಾಡಿದ್ದಾರೆ. ಡಿ.ರೂಪಾ ಅವರಿಗೆ ಈ ಕುರಿತು ವಾಟ್ಸ್​ಆ್ಯಪ್​ನಲ್ಲಿ ಮಾಹಿತಿ ನೀಡಿರುವ ವ್ಯಕ್ತಿ ತನ್ನ ಹೆಸರನ್ನು ಬಹಿರಂಗಪಡಿಸದಂತೆ ಕೋರಿಕೊಂಡಿದ್ದಾನೆ. ಅಲ್ಲದೇ, ಈ ಮುನ್ನ ತಾನು ಆ ಪಿಆರ್ ಏಜೆನ್ಸಿಯಲ್ಲಿ ಕೆಲಸ ಮಾಡಿದ್ದಾಗಿಯೂ ಹೇಳಿಕೊಂಡಿದ್ದಾನೆ.

ಐಪಿಎಸ್ ಅಧಿಕಾರಿ ಡಿ.ರೂಪಾ ಫೇಸ್​ಬುಕ್ ಪೋಸ್ಟ್​ಗಳಿಗೆ ಕೆಟ್ಟದಾಗಿ ಟ್ರೋಲ್ ಮಾಡಲು ಎಂದೇ ಏಜೆನ್ಸಿಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲದೇ ಕೆಟ್ಟದಾಗಿ ಕಮೆಂಟ್​ಗಳನ್ನೂ ಹಾಕಿಸಲಾಗುತ್ತಿದೆ. ಹೀಗಾಗಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಯಾವುದೇ ಪೋಸ್ಟ್ ಹಾಕದಂತೆ ಡಿ. ರೂಪಾ ಅವರಿಗೆ ಹೆಸರು ಬಹಿರಂಗಪಡಿಸಲು ಇಚ್ಛಿಸಿದ ವ್ಯಕ್ತಿ ಮೆಸೇಜ್ ಮೂಲಕ ಮನವಿ ಮಾಡಿದ್ದಾನೆ. ಐಪಿಎಸ್ ಡಿ.ರೂಪಾ ಆ ವ್ಯಕ್ತಿಯ ಜತೆ ನಡೆಸಿದ ವಾಟ್ಸ್​ಆ್ಯಪ್ ಚಾಟ್​ನ ಸ್ಕ್ರೀನ್​ಶಾಟ್​ಗಳನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

ಡಿ.ರೂಪಾ ಅವರು ಫೇಸ್​ಬುಕ್​ನಲ್ಲಿ ಬರೆದ ಇಂತಿದೆ

ಈ ಸಂಭಾಷಣೆ 25 ನೇ ಜೂನ್ ನಡೆದದ್ದು. ಸಂಭಾಷಣೆ ಸ್ವಯಂ ವೇದ್ಯ. ನನಗೆ ಹೆಚ್ಚಾಗಿ ತಿಳಿಯದ ಈ ವ್ಯಕ್ತಿ ಹೇಳಿದ್ದು ನಿಜ ಇದ್ದರೆ, ಅಂದರೆ, ನಾನು ಹಾಕುವ ನನ್ನ ಅಭಿಪ್ರಾಯಕ್ಕೆ paid trolls ಗಳು ನಕಾರಾತ್ಮಕವಾಗಿ,. ಅನಾಗರಿಕ ರೀತಿಯಲ್ಲಿ ಪ್ರತಿಕ್ರಿಯಿಸಿದರ ಹಿಂದೆ ಅಂಥವರ ವಿಕೃತ ಮನೋಭಾವ ಎದ್ದು ತೋರುತ್ತದೆ. ಸತ್ಯ ಹೇಳೋಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಡ. ಹಾಗೆ, paid trolls ಗಳು ಒಬ್ಬ ಅಧಿಕಾರಿಯ ಪರ ಕೆಲಸ ಮಾಡುತ್ತಾ, ಇನ್ನೊಬ್ಬ ಅಧಿಕಾರಿಯ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ” ಹೊಸ ಸಾಮಾನ್ಯ?”. New normal’? Sad. ಆದರೆ, ಆ ಪೇಯ್ಡ್/ ಬಾಡಿಗೆ ಟ್ರೊಲ್ ಗಳಿಗೆ ಗೊತ್ತಿಲ್ಲವೆ… ನಾಯಿ ಬೊಗಳಿದರೆ ಅಂಬಾರಿ ಹೋಗೋದು ನಿಲ್ಲಲ್ಲ. ಹಾಗೇ ಈ ವ್ಯಕ್ತಿ ಹೇಳಿದ ವಿಷಯ ಸತ್ಯವೇ, ತನಿಖೆ ಆಗಲಿ..

ಈ ಮುನ್ನವು ರೋಹಿಣಿ ಸಿಂಧೂರಿ ವಿರುದ್ಧ ಹಲವು ಬಾರಿ ಡಿ ರೂಪಾ ಅಸಮಧಾನ ತೋಡಿಕೊಂಡಿದ್ದರು. ಕೊರೊನಾ ಕಾಲದಲ್ಲಿ ಈಜುಕೊಳ ಕಟ್ಟಿದ್ದು ನೈತಿಕ ಅಧಃಪತನ: ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಟ್ವೀಟ್ ಮಾಡಿ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು ಎಂದು ಇಲ್ಲಿ ಉಲ್ಲೇಖಿಸಬಹುದು.

ಇದನ್ನೂ ಓದಿ:

ರೋಹಿಣಿ ಸಿಂಧೂರಿ ಬಾಯಲ್ಲಿ ಮಾತ್ರ ಭೂ ಮಾಫಿಯಾ ವಿರುದ್ಧ ಜೋರಾಗಿ ಮಾತನಾಡಿದ್ದರು; ಐಪಿಎಸ್ ಅಧಿಕಾರಿ ಡಿ ರೂಪಾ ಬೇಸರ

ಕೊರೊನಾ ಕಾಲದಲ್ಲಿ ಈಜುಕೊಳ ಕಟ್ಟಿದ್ದು ನೈತಿಕ ಅಧಃಪತನ: ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಟ್ವೀಟ್

(IPS D Roopa verses IAS Rohini Sindhuri about troll against D Roopa facebook post)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada