ಜೋಗ ಜಲಪಾತ ವೀಕ್ಷಣೆಗೆ KSRTCಯಿಂದ ವೀಕೆಂಡ್ ಪ್ಯಾಕೇಜ್: ದರ ಎಷ್ಟು? ಸೇವೆ ಎಲ್ಲಿಂದ?; ಇಲ್ಲಿದೆ ಮಾಹಿತಿ

ಮಳೆಗಾಲದ ಮೈತುಂಬಿ ಹರಿಯುವ ಜೋಗ ಜಲಪಾತ ಹಾಗೂ ಶಿವಮೊಗ್ಗ ಸುತ್ತಮುತ್ತಲಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಅನುಕೂಲವಾಗುವಂತೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಶಿವಮೊಗ್ಗ ವಿಭಾಗದಿಂದ ವಿಶೇಷ ವಾರಾಂತ್ಯದ (Weekend) ಪ್ಯಾಕೇಜ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಪ್ಯಾಕೇಜ್ ಪ್ರವಾಸದ ದರ, ಸಮಯ ಹಾಗೂ ಮಾರ್ಗದ ಸಂಪೂರ್ಣ ವಿವರಗಳು ಇಲ್ಲಿವೆ.

ಜೋಗ ಜಲಪಾತ ವೀಕ್ಷಣೆಗೆ KSRTCಯಿಂದ ವೀಕೆಂಡ್ ಪ್ಯಾಕೇಜ್: ದರ ಎಷ್ಟು? ಸೇವೆ ಎಲ್ಲಿಂದ?; ಇಲ್ಲಿದೆ ಮಾಹಿತಿ
ಜೋಗ ಜಲಪಾತ

Updated on: Aug 07, 2026 | 5:38 PM

ಮುಖ್ಯಾಂಶಗಳು

  • ಮಲೆನಾಡು ಪ್ರವಾಸಿಗರಿಗೆ KSRTCಯಿಂದ ಗುಡ್​​ನ್ಯೂಸ್​​
  • ಜೋಗ ಜಲಪಾತ ವೀಕ್ಷಣೆಗೆ ವೀಕೆಂಡ್ ಟ್ರಿಪ್​​ ಪ್ಯಾಕೇಜ್
  • ಮಾರ್ಗ ಯಾವುದು? ಬಸ್​​ ಟಿಕೆಟ್​​ ದರ ಎಷ್ಟು?

ಶಿವಮೊಗ್ಗ, ಆಗಸ್ಟ್​​ 07: ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಶರಾವತಿ ನದಿಯಿಂದ ಸೃಷ್ಟಿಯಾಗಿ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿ ಭಾಗದಲ್ಲಿ ಧುಮ್ಮಿಕ್ಕುವ ವಿಶ್ವ ವಿಖ್ಯಾತ ಜೋಗ ಜಲಪಾತ, ಜುಲೈನಿಂದ ಅಕ್ಟೋಬರ್ ಅವಧಿಯಲ್ಲಿ ಮೈಂದುಂಬಿ ಹರಿಯುತ್ತದೆ. ಹೀಗಾಗಿ ಸುಮಾರು 830 ಅಡಿ (253 ಮೀಟರ್) ಎತ್ತರ ಹೊಂದಿರುವ ಈ ಫಾಲ್ಸ್​ ನೋಡಲು ಮಳೆಗಾಲದಲ್ಲಿ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಇದೇ ಕಾರಣಕ್ಕೆ ಪ್ರವಾಸಿಗರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಶಿವಮೊಗ್ಗ ವಿಭಾಗವು ವಿಶೇಷ ವೀಕೆಂಡ್ ಪ್ಯಾಕೇಜ್ ಬಸ್ ಸೇವೆ ಆರಂಭಿಸಿದೆ.

ಮಾರ್ಗ ಯಾವುದು?

ಬೆಳಿಗ್ಗೆ 8 ಗಂಟೆಗೆ ಶಿವಮೊಗ್ಗ ಮುಖ್ಯ ಬಸ್ ನಿಲ್ದಾಣದಿಂದ ಹೊರಡುವ ಬಸ್, ಸಿಗಂದೂರು, ವರದಾಮೂಲ, ಇಕ್ಕೇರಿ ಹಾಗೂ ಕೇಳದಿ ಮಾರ್ಗವಾಗಿ ಮಧ್ಯಾಹ್ನ 2 ಗಂಟೆಗೆ ಜೋಗ ಜಲಪಾತ ತಲುಪಲಿದೆ. ಜೋಗ ಜಲಪಾತದಿಂದ ಸಂಜೆ 5 ಗಂಟೆಗೆ ಹೊರಡುವ ಬಸ್, ರಾತ್ರಿ 7.30ಕ್ಕೆ ಶಿವಮೊಗ್ಗ ಬಸ್ ನಿಲ್ದಾಣ ತಲುಪಲಿ

ಇದನ್ನೂ ಓದಿ: ಕರ್ನಾಟಕದಲ್ಲಿ ಅಡಿಕೆ ಉತ್ಪಾದನೆ, ಉತ್ಪಾದಕತೆ ಭಾರೀ ಕುಸಿತ! ಕಾರಣವೇನು?

ಟಿಕೆಟ್​​ ದರ ಎಷ್ಟು?

ಈ ವಿಶೇಷ ಪ್ಯಾಕೇಜ್‌ಗೆ ವಯಸ್ಕರಿಗೆ 450 ರೂ. ಹಾಗೂ ಮಕ್ಕಳಿಗೆ 250 ರೂ. ದರ ನಿಗದಿಪಡಿಸಲಾಗಿದೆ. ಪ್ರಯಾಣಿಕರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂಗಡ ಬುಕ್ಕಿಂಗ್ ಮಾಡಬಹುದು. ಈ ವಿಶೇಷ ಸೇವೆ ಈ ವಾರಾಂತ್ಯದಿಂದ ಆರಂಭವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಾರಾಧಿಕಾರಿ (DTO) ದಿನೇಶ್ ಚನ್ನಗಿರಿ ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:22 pm, Fri, 7 August 26

Loading...
Unable to load recommendations.
Follow Us