ಶಿವಮೊಗ್ಗ, ಮಾ.30: ಮಕ್ಕಳಾಗಿಲ್ಲ ಎಂಬ ಕಿರುಕುಳಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ (Shivamogga) ಗಾಡಿಕೊಪ್ಪದ ಮನೆಯೊಂದರಲ್ಲಿ ನಡೆದಿದೆ. ಅಶ್ವಿನಿ(31) ನೇಣಿಗೆ ಶರಣಾದ ಮಹಿಳೆ. ಇವರು ಮದುವೆಯಾಗಿ 5 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಈ ಹಿನ್ನಲೆ ಪತಿ ಅಭಿಷೇಕ್ ಹಾಗೂ ಮನೆಯವರಿಂದ ಕಿರುಕುಳ ಆರೋಪ ಕೇಳಿಬಂದಿದೆ. ಇದರಿಂದ ನೇಣು ಬಿಗಿದುಕೊಂಡು ಮಹಿಳೆ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೋಲಾರ: ಕಾಫಿ ಡೇ ಬಳಿಯ ಹೆದ್ದಾರಿ ಪಕ್ಕದಲ್ಲಿ ಲಾರಿ ನಿಲ್ಲಿಸಿ ಡ್ರೈವರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ತಾಲೂಕಿನ ನರಸಾಪುರ ಕಾಫಿ ಡೇ ಬಳಿ ನಡೆದಿದೆ. ಶ್ರೀನಿವಾಸಪುರದ ಮಂಜುನಾಥ್ ಆತ್ಮಹತ್ಯೆಗೆ ಶರಣಾದ ಡ್ರೈವರ್, ಮೃತ ಮಂಜುನಾಥ್ ಓಡಿಸುತ್ತಿದ್ದ ಲಾರಿ ಮಾಲೀಕ ನೆಲಮಂಗಲದವರಾಗಿದ್ದು, ವೇಮಗಲ್ ಠಾಣೆ ಪೊಲೀಸರು ಆತ್ಮಹತ್ಯೆಗೆ ನಿಖರ ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ:ಮಗುವಿನೊಂದಿಗೆ ನೇತ್ರಾವತಿ ನದಿಗೆ ಹಾರಿದ ತಾಯಿ, ಉಡುಪಿಯಲ್ಲಿ ಮಹಿಳಾ ಪೇದೆ ಆತ್ಮಹತ್ಯೆ
ಕೋಲಾರ: ಕರ್ತವ್ಯದಲ್ಲಿದ್ದಾಗಲೇ ಯೋಧ ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಘಟನೆ ನಿನ್ನೆ(ಮಾ.29) ರಾತ್ರಿ ಜಮ್ಮು-ಕಾಶ್ಮೀರದ ಶಿಲಾನ್ನಲ್ಲಿ ನಡೆದಿದೆ. ಅಮರನಾಥ್ (55) ಹೃದಯಾಘಾತದಿಂದ ಮೃತಪಟ್ಟ ಯೋಧ, ಇವರು
ಕೋಲಾರ ನಗರದ ಗಲ್ ಪೇಟೆ ನಿವಾಸಿಯಾಗಿದ್ದು, ಕಳೆದ 30 ವರ್ಷಗಳಿಂದ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇನ್ನು ಇವರು ಹಲವು ವರ್ಷಗಳ ಹಿಂದೆಯೇ ದೇಹವನ್ನು ವೀರ ಯೋಧರಿಗಾಗಿ ದಾನ ಮಾಡಿದ್ದಾರೆ. ಜೊತೆಗೆ ಕೋಲಾರ ಜಯ ನಗರದಲ್ಲಿ ನಿರ್ಮಾಣ ಮಾಡಲಾದ ಯೋಧರ ಸ್ಮಾರಕಕ್ಕೆ ಕಾರ್ಗಿಲ್ ಯುದ್ದ ಭೂಮಿಯಿಂದ ಮಣ್ಣನ್ನ ತಂದಿದ್ದರು. ಭಾರತಾಂಭೆ ಅಪ್ಪಟ ಅಭಿಮಾನಿಯಾಗಿ, ದೇಶ ಕಾಯುವ ಜೊತೆಗೆ ಹಲವು ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಯೋಧ, ಅಮರನಾಥ್ ಅವರು ಸಾವನ್ನಪ್ಪಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:42 pm, Sat, 30 March 24