ಶಿವಮೊಗ್ಗದ ಒಡಲಲ್ಲೇ ಶ್ರೀಗಂಧದ ದಂಧೆ, ಗೋದಾಮಿನಲ್ಲಿ ಅಡಗಿಸಿದ್ದ 910 ಕೆಜಿ ಜಪ್ತಿ

| Updated By: Pavitra Bhat Jigalemane

Updated on: Dec 16, 2021 | 6:18 PM

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಖಾಕಿ ಪಡೆ ಭರ್ಜರಿ ಬೇಟೆಯಾಡಿದೆ. ಶ್ರೀಗಂಧ ದಂಧೆಕೋರನ ಬುಡವನ್ನೇ ನಡುಗಿಸಿ, ಕೋಟಿ ಕೋಟಿ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗದ ಒಡಲಲ್ಲೇ ಶ್ರೀಗಂಧದ ದಂಧೆ, ಗೋದಾಮಿನಲ್ಲಿ ಅಡಗಿಸಿದ್ದ 910 ಕೆಜಿ ಜಪ್ತಿ
Shivamogga Sandalwood raid
Follow us on

ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು. ದಟ್ಟವಾಗಿರುವ ಪಶ್ಚಿಮಘಟ್ಟದಲ್ಲಿ ಅಪರೂಪದ ಸಸ್ಯಕಾಶಿ ಇಲ್ಲಿದೆ. ಇದರ ನಡುವೆ ಚಂದನವನ ಕೂಡಾ ಇಲ್ಲಿದೆ. ಹೀಗೆ ಪಶ್ಚಿಮಘಟ್ಟದ ಈ ಚಂದನವನಕ್ಕೆ ಖದೀಮರು ಕೈಹಾಕಿದ್ದರು. ಕೋಟಿ ಕೋಟಿ ಮೌಲ್ಯದ ಶ್ರೀಗಂಧದ ತುಂಡುಗಳನ್ನ ಅಕ್ರಮವಾಗಿ ಸಂಗ್ರಹಿಸಿದ್ರು. ಇದೀಗ, ಪೊಲೀಸ್ರು ಆ ಕೋಟೆಯನ್ನೇ ಬೇಟೆಯಾಡಿದ್ದಾರೆ.ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಖಾಕಿ ಪಡೆ ಭರ್ಜರಿ ಬೇಟೆಯಾಡಿದೆ. ಶ್ರೀಗಂಧ ದಂಧೆಕೋರನ ಬುಡವನ್ನೇ ನಡುಗಿಸಿ, ಕೋಟಿ ಕೋಟಿ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಶ್ರೀಗಂಧ ಅಡಗಿಸಿಟ್ಟಿದ್ದ ರೀತಿ ಕಂಡು ಪೊಲೀಸ್ರೇ ಶಾಕ್ ಆಗಿದ್ದಾರೆ. ಶಿವಮೊಗ್ಗ ನಗರದ ಗೋದಾಮಿನಲ್ಲಿ ಅನಾಮತ್ತು 910 ಕೆಜಿ ಶ್ರೀಗಂಧವನ್ನ ಅಕ್ರಮವಾಗಿ ಸಂಗ್ರಹಿಸಿದ್ರು. ಇಷ್ಟೊಂದು ಗಂಧವನ್ನ ಸಂಗ್ರಹಿಸಿದ್ದ ಆ ಮರಿವೀರಪ್ಪನ್ ಹೆಸ್ರು ಅಪ್ಸರ್.

ಶ್ರೀಗಂಧ ದಂಧೆಕೋರನ ಗೋದಾಮಿನ ಮೇಲೆ ದಾಳಿ
ಅರಣ್ಯ ಮತ್ತು ಪೊಲೀಸ್ ಇಲಾಖೆ ಇತಿಹಾಸದಲ್ಲಿ, ಅತೀ ದೊಡ್ಡ ಜಂಟಿ ಕಾರ್ಯಾಚರಣೆ ನಡೆದಿದೆ. ಸುಮಾರು 910 ಕೆಜಿ ಶ್ರೀಗಂಧವನ್ನು ಜಪ್ತಿ ಮಾಡಿ ದಾಖಲೆ ಬರೆದಿದ್ದಾರೆ. ಟಿಪ್ಪು ನಗರದ ಏಳನೇ ಕ್ರಾಸ್ ನಲ್ಲಿ ಗೋದಾಮಿನಲ್ಲಿ ಅಪ್ಸರ್ 910 ಕೇಜಿ ಶ್ರೀಗಂಧವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ. ಇದೀಗ, ತುಂಗಾ ನಗರ ಪೊಲೀಸ್ರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿ ಬಿದಿದ್ದಾನೆ.

ಅಪ್ಸರ್ನ ಈ ಅಕ್ರಮ ಕೋಟೆ ನೋಡಿದ್ರೆ, ಯಾರೊಬ್ಬರಿಗೂ ಡೌಟ್ ಬರ್ತಿರಲಿಲ್ಲ. ಗೋದಾಮು ಹೊರಗಿನಿಂದ ಶ್ರೀಗಂಧ ಇದೆಯೋ, ಇಲ್ಲವೋ ಎಂಬಂತಿತ್ತು. ಅಧಿಕಾರಿಗಳು ಒಳಗೆ ನುಗ್ಗುತ್ತಿದ್ದಂತೆ, ಚೀಲ, ಬಾಕ್ಸ್ಗಳಲ್ಲಿ ಸಂಗ್ರಹಿಸಿಟ್ಟ ರಾಶಿ ರಾಶಿ ಗಂಧದ ತುಂಡುಗಳು ಸಿಕ್ಕವು. ವಿಷ್ಯ ಏನಂದ್ರೆ, ಶ್ರೀಗಂಧದ ಮರಗಳನ್ನ ಕದಿಯುತ್ತಿದ್ದ ಕಳ್ಳರಿಂದ ಅಪ್ಸರ್ ಮಾಲನ್ನು ಸಂಗ್ರಹಿಸ್ತಿದ್ನಂತೆ. ಚೋರರೆಲ್ಲ ಈ ಅಪ್ಸರ್ಗೆ ಕದ್ದ ಶ್ರೀಗಂಧವನ್ನ ಕೊಡ್ತಿದ್ರಂತೆ. ಆದ್ರೆ, ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೂ ಈತ ಮಾಮೂಲಿ ಕೊಡ್ತಿದ್ದೇ ಅನ್ನೋ ವಿಷ್ಯವನ್ನ ಬಾಯ್ಬಿಟ್ಟಿರೋದು, ಹತ್ತಾರು ಪ್ರಶ್ನೆ ಹುಟ್ಟುಹಾಕಿದೆ.

ಇನ್ನು, ಮಲೆನಾಡಿನಲ್ಲಿ ಶ್ರೀಗಂಧದ ಸ್ಮಗ್ಲಿಂಗ್ ನಡೀತಿದ್ರು ಅಧಿಕಾರಿಗಳು ಸೈಲೆಂಟ್ ಆಗಿದ್ರು. ಆದ್ರೀಗ, ತುಂಗಾ ನಗರ ಪೊಲೀಸರ ಕಾರ್ಯಾಚರಣೆಗೆ, ಪ್ರಶಂಸೆ ವ್ಯಕ್ತವಾಗಿದೆ. ಏನೇ ಹೇಳಿ, ಮಲೆನಾಡ ಮಹಾಮನೆಯಲ್ಲಿ ಕಳ್ಳರು, ಶ್ರೀಗಂಧ ಮರಗಳ ಬುಡವನ್ನೇ ಕತ್ತರಿಸ್ತಿದ್ದಾರೆ. ಸದ್ಯ ಬಲೆಗೆ ಬಿದ್ದಿರುವ ಈ ಮರಿ ವೀರಪ್ಪನ್ಗೆ, ದೊಡ್ಡ ದೊಡ್ಡ ದಂಧೆಕೋರರ ಲಿಂಕ್ ಇರುವ ಸಾಧ್ಯತೆ ಇದೆ. ಹೀಗಾಗಿ, ಆರೋಪಿ ಇತಿಹಾಸವನ್ನ ಖಾಕಿ ಪಡೆ ಕೆದಕುತ್ತಿದೆ.

ವರದಿ: ಬಸವರಾಜ್ ಯರಗಣವಿ, ಟಿವಿ9 ಶಿವಮೊಗ್ಗ

ಇದನ್ನೂ ಓದಿ: Pearl Millet Benefits: ಸಜ್ಜೆ ರೊಟ್ಟಿ ಮಾಡುವ ವಿಧಾನದ ಜತೆಗೆ ಆರೋಗ್ಯಕರ ಗುಣಗಳ ಕುರಿತು ಇಲ್ಲಿದೆ ಮಾಹಿತಿ

Published On - 7:40 am, Thu, 16 December 21