ಅಡಿಕೆ ಬೆಳೆ ಹಾನಿ ತಡೆಗೆ 10 ಕೋಟಿ ಬಿಡುಗಡೆ; ಅಡಿಕೆ ಬೆಳೆಗಾರರೊಂದಿಗೆ ಸರ್ಕಾರ ಇದೆ ಎಂದ ಸಿಎಂ ಬೊಮ್ಮಾಯಿ

| Updated By: Rakesh Nayak Manchi

Updated on: Nov 28, 2022 | 12:20 PM

ಕೀಟಗಳ ಸಮಸ್ಯೆಯಿಂದ ಅಡಿಕೆ ಕೃಷಿ ರಕ್ಷಿಸಲು ರಾಜ್ಯ ಸರ್ಕಾರ 10 ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳಿದ ಮುಖ್ಯಮಂತ್ರಿ ಬೊಮ್ಮಾಯಿ, ಅಡಿಕೆ ಬೆಳೆಗಾರರು ಧೈರ್ಯ ಕಳೆದುಕೊಳ್ಳದಂತೆ ಮನವಿ ಮಾಡಿದರು.

ಅಡಿಕೆ ಬೆಳೆ ಹಾನಿ ತಡೆಗೆ 10 ಕೋಟಿ ಬಿಡುಗಡೆ; ಅಡಿಕೆ ಬೆಳೆಗಾರರೊಂದಿಗೆ ಸರ್ಕಾರ ಇದೆ ಎಂದ ಸಿಎಂ ಬೊಮ್ಮಾಯಿ
ಅಡಿಕೆ ಬೆಳೆ ಹಾನಿ ತಡೆಯಲು 10 ಕೋಟಿ ಬಿಡುಗಡೆ, ಅಡಿಕೆ ಬೆಳೆಗಾರರೊಂದಿಗೆ ಸರ್ಕಾರ ಇದೆ ಎಂದ ಸಿಎಂ ಬೊಮ್ಮಾಯಿ
Follow us on

ಶಿವಮೊಗ್ಗ: ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆ ಇತ್ತೀಚಿನ ದಿನಗಳಲ್ಲಿ ಅಡಿಕೆ ಧಾರಣೆಯಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿದೆ. ಇದು ಅಡಿಕೆ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಸಾವಿರಾರು ರೈತ ಕುಟುಂಬಗಳು ಬೆಳೆದ ಅಡಿಕೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಈ ನಡುವೆ ಅಡಿಕೆಗಳಿಗೆ ರೋಗ ಬಾಧೆ ಹೆಚ್ಚಾಗಿದ್ದರಿಂದ ಅಡಿಕೆ ಬೆಳೆಗಾರರನ್ನು ಇನ್ನಷ್ಟು ಕುಗ್ಗಿಸಿದೆ. ನಿನ್ನೆ (ನ.27) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ (Thirthahalli) ತಾಲೂಕು ಕ್ರೀಡಾಂಗಣದಲ್ಲಿ 618 ಕೋಟಿ ರೂ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai), ಅಡಿಕೆ ಬೆಳೆ (Arecanut crop)ಗಳನ್ನು ವೀಕ್ಷಿಸಿದರು. ಈ ವೇಳೆ ಮಾತನಾಡಿದ ಅವರು, ಅಡಿಕೆ ಬೆಳೆಗಾರರು ಧೈರ್ಯ ಕಳೆದುಕೊಳ್ಳುವುದು ಬೇಡ. ನಿಮ್ಮೊಂದಿಗೆ ಸರ್ಕಾರ ಇದೆ. ಬಗರ್ ಹುಕುಂ ಪ್ರದೇಶದಲ್ಲಿ ಅಡಕೆ ಬೆಳೆದಿರುವ ರೈತರಿಗೂ ಸರ್ಕಾರ ಸಹಾಯ ಮಾಡಲಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ಭರವಸೆ ನೀಡಿದರು.

ಕ್ರಿಮಿಕೀಟಗಳಿಂದ ಅಡಿಕೆ ಬೆಳೆ ಹಾನಿಯಾಗದಂತೆ ತಡೆಯಲು ರಾಜ್ಯ ಸರ್ಕಾರ 10 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಹೇಳಿದ ಸಿಎಂ ಬೊಮ್ಮಾಯಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಇತರ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿಧಿಯನ್ನು ಬಳಸಲಾಗುವುದು, ಕೀಟ ಸಮಸ್ಯೆಗಳ ಅಧ್ಯಯನಕ್ಕೆ ತಜ್ಞರ ತಂಡವನ್ನು ರಚಿಸಲಾಗಿದೆ ಎಂದರು.

ಇದನ್ನೂ ಓದಿ: 500 ಶ್ರವಣದೋಷವುಳ್ಳ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್: ಸಚಿವ ಕೆ ಸುಧಾಕರ್

ಚಿಕ್ಕಮಗಳೂರಿನಲ್ಲಿ ಈಗಾಗಲೇ ಕೇಂದ್ರ ಸರಕಾರದ ತಜ್ಞರ ತಂಡವು ಕೀಟಗಳ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿದೆ. ಶಿಲೀಂಧ್ರದ ಕೀಟವು ಒಂದು ಮರದಿಂದ ಇನ್ನೊಂದು ಮರಕ್ಕೆ ಹರಡುವುದರಿಂದ, ಕೀಟನಾಶಕವನ್ನು ಪೀಡಿತ ಮರಗಳಿಗೆ ಸಿಂಪಡಿಸಲಾಗುತ್ತದೆ. ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ವಿಜ್ಞಾನಿಗಳು ನೀಡಿದ ಶಿಫಾರಸುಗಳನ್ನು ಸರ್ಕಾರ ಅನುಸರಿಸುತ್ತದೆ ಎಂದು ಅವರು ಹೇಳಿದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:18 pm, Mon, 28 November 22