South Western Railway: ಎಕ್ಸ್​ಪ್ರೆಸ್​​ ರೈಲುಗಳ ಸಮಯಲ್ಲಿ ಬದಲಾವಣೆ ಮಾಡಿದ ನೈಋತ್ಯ ರೈಲ್ವೆ

|

Updated on: Jun 26, 2023 | 10:46 PM

ತಾಳಗುಪ್ಪ - ಮೈಸೂರು ಎಕ್ಸ್‌ಪ್ರೆಸ್‌, ಶಿವಮೊಗ್ಗ - ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಮತ್ತು ಮೈಸೂರು - ಶಿವಮೊಗ್ಗ ಅನ್‌ ರಿಸರ್ವಡ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

South Western Railway: ಎಕ್ಸ್​ಪ್ರೆಸ್​​ ರೈಲುಗಳ ಸಮಯಲ್ಲಿ ಬದಲಾವಣೆ ಮಾಡಿದ ನೈಋತ್ಯ ರೈಲ್ವೆ
ಎಕ್ಸ್​​ಪ್ರೆಸ್ ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಿದ ನೈಋತ್ಯ ರೈಲ್ವೆ
Follow us on

ನೈಋತ್ಯ ರೈಲ್ವೆ (South Western Railway) ಇಲಾಖೆಯು ಶಿವಮೊಗ್ಗಕ್ಕೆ ಆಗಮಿಸುವ ಮೂರು ಎಕ್ಸ್​​ಪ್ರೆಸ್ ರೈಲುಗಳು ಸೇರಿದಂತೆ ಒಟ್ಟು 15 ರೈಲುಗಳ ಸಮಯದಲ್ಲಿ (Railway Timing) ಬದಲಾವಣೆ ಮಾಡಿದೆ. ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್‌, ಶಿವಮೊಗ್ಗ-ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಮತ್ತು ಮೈಸೂರು-ಶಿವಮೊಗ್ಗ ಅನ್‌ ರಿಸರ್ವಡ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಜೂ. 28 ರಿಂದ ಈ ಸಮಯ ಜಾರಿಯಾಗಲಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಶಿವಮೊಗ್ಗ ಯಶವಂತಪುರ ಎಕ್ಸ್‌ಪ್ರೆಸ್‌ ರೈಲು

ಶಿವಮೊಗ್ಗ ಯಶವಂತಪುರ ಎಕ್ಸ್‌ಪ್ರೆಸ್‌ ರೈಲು (ರೈಲು ಸಂಖ್ಯೆ 16580) ಶಿವಮೊಗ್ಗ ಟೌನ್​ನಿಂದ ಮಧ್ಯಾಹ್ನ 3.30ಕ್ಕೆ ಹೊರಡುತ್ತಿತ್ತು. ಸದ್ಯ ಸಮಯದಲ್ಲಿ ಬದಲಾವಣೆಯಾದ ಹಿನ್ನೆಲೆ ಜೂ.28ರಿಂದ 5 ನಿಮಿಷ ತಡವಾಗಿ ಹೊರಡಲಿದೆ. ಅಂದರೆ 3.45ಕ್ಕೆ ಹೊರಡಲಿದೆ. ಮಧ್ಯಾಹ್ನ 3.48ಕ್ಕೆ ಭದ್ರಾವತಿಗೆ ತಲುಪುತ್ತಿದ್ದ ರೈಲು ಇನ್ನು ಮುಂದೆ ಸಂಜೆ 4.3ಕ್ಕೆ ತಲುಪಿ 4.5ಕ್ಕೆ ಹೊರಡಲಿದೆ.

ತರಿಕೆರೆಗೆ ಸಂಜೆ 4.8ಕ್ಕೆ ತಲುಪುತ್ತಿದ್ದ ರೈಲು ಇನ್ನುಮುಂದೆ 4.22ಕ್ಕೆ ತಲುಪಿ 4.24ಕ್ಕೆ ನಿರ್ಗಮಿಸಲಿದೆ. ಸಂಜೆ 4.35ಕ್ಕೆ ಬೀರೂರಿಗೆ ತಲುಪುವ ರೈಲು 4.52ಕ್ಕೆ ತಲುಪಿ 4.54ಕ್ಕೆ ಹೊರಡಲಿದೆ. ಸಂಜೆ 4.46ಕ್ಕೆ ಕಡೂರಿಗೆ ತಲುಪುತ್ತಿದ್ದ ರೈಲು ಸಂಜೆ 5.3ಕ್ಕೆ ತಲುಪಿ 5.05ಕ್ಕೆ ನಿರ್ಗಮಿಸಲಿದೆ. ಸಂಜೆ 5.18ಕ್ಕೆ ಅರಸೀಕೆರೆಗೆ ತಲುಪುತ್ತಿದ್ದ ರೈಲು 5.35ಕ್ಕೆ ತಲುಪಿ 5.40ಕ್ಕೆ ನಿರ್ಗಮಿಸಲಿದೆ. ಸಂಜೆ 5.43ಕ್ಕೆ ತಿಪಟೂರಿಗೆ ತಲುಪುತ್ತಿದ್ದ ರೈಲು 6 ಗಂಟೆಗೆ ತಲುಪಿ 6.02ಕ್ಕೆ ಹೊರಡಲಿದೆ. ಸಂಜೆ 6.30ಕ್ಕೆ ತುಮಕೂರಿಗೆ ತಲುಪುವ ರೈಲು 6.40ಕ್ಕೆ ತಲುಪಿ 6.42ಕ್ಕೆ ನಿರ್ಗಮಿಸಲಿದೆ. ರಾತ್ರಿ 8.30ಕ್ಕೆ ಆಗಮಿಸುವ ರೈಲಿನ ಸಮಯದಲ್ಲಿ ಬದಲಾವಣೆ ಆಗಿಲ್ಲ.

ಇದನ್ನೂ ಓದಿ: Ganesh Chaturthi: ಗಣೇಶ ಚತುರ್ಥಿ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ನಿವಾರಿಸಲು ಕೇಂದ್ರ ರೈಲ್ವೆಯಿಂದ 156 ವಿಶೇಷ ರೈಲುಗಳ ವ್ಯವಸ್ಥೆ

ತಾಳಗುಪ್ಪ ಮೈಸೂರು ಎಕ್ಸ್‌ಪ್ರೆಸ್‌ ರೈಲು

16228 ಸಂಖ್ಯೆಯ ತಾಳಗುಪ್ಪ ಮೈಸೂರು ಎಕ್ಸ್‌ಪ್ರೆಸ್‌ ರೈಲು ತಾಳಗುಪ್ಪದಿಂದ ಎಂದಿನಂತೆ ರಾತ್ರಿ 9 ಗಂಟೆಗೆ ಹೊರಡಲಿದೆ. ಆದರೆ ತುಮಕೂರು, ಯಶವಂತಪುರ, ಬೆಂಗಳೂರು ನಿಲ್ದಾಣಗಳನ್ನು ತಲುಪುವ ಮತ್ತು ನಿರ್ಗಮಿಸುವ ಸಮಯದಲ್ಲಿ ಬದಲಾವಣೆಯಾಗಿದೆ.
ರಾತ್ರಿ 3.28ಕ್ಕೆ ತುಮಕೂರು ತಲುಪುತ್ತಿದ್ದ ರೈಲು 3.30ಕ್ಕೆ ಹೊರಡುತ್ತಿತ್ತು. ಬದಲಾದ ಸಮಯದಂತೆ ಜೂನ್ 28ರಿಂದ ರಾತ್ರಿ 2.18ಕ್ಕೆ ತುಮಕೂರು ತಲುಪಿ 2.20ಕ್ಕೆ ನಿರ್ಗಮಿಸಲಿದೆ. ಬೆಳಗ್ಗೆ 4.40ಕ್ಕೆ ಯಶವಂತಪುರ ನಿಲ್ದಾಣ ತಲುಪುತ್ತಿದ್ದ ರೈಲು 4.28ಕ್ಕೆ ತಲುಪಿ 4.30ಕ್ಕೆ ಹೊರಡಲಿದೆ. ಬೆಳಗ್ಗೆ 5 ಗಂಟೆಗೆ ಬೆಂಗಳೂರು ನಿಲ್ದಾಣ ತಲುಪುತ್ತಿದ್ದ ರೈಲು 4.50 ಕ್ಕೆ ತಲುಪಿ 5.05ಕ್ಕೆ ನಿರ್ಗಮಿಸಲಿದೆ.

ಮೈಸೂರು ಶಿವಮೊಗ್ಗ ಅನ್‌ ರಿಸರ್ವಡ್‌ ಎಕ್ಸ್‌ಪ್ರೆಸ್‌ ರೈಲು

ಮೈಸೂರು ಶಿವಮೊಗ್ಗ ಅನ್‌ ರಿಸರ್ವಡ್‌ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ16225) ಸಂಜೆ 4.25ಕ್ಕೆ ಶಿವಮೊಗ್ಗ ನಿಲ್ದಾಣದ ತಲುಪುತ್ತಿತ್ತು. ಬದಲಾದ ಸಮಯದಂತೆ ಜೂನ್ 28 ರಿಂದ ಈ ರೈಲು ಸಂಜೆ 4.40ಕ್ಕೆ ತಲುಪಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:19 pm, Mon, 26 June 23