ಮೊಬೈಲ್ ಮಿಸ್ಸಿಂಗ್, ವಿವಾಹಿತ ಮಹಿಳೆಯ ಅನುಮಾನಾಸ್ಪದ ಸಾವು, ನೇಣು ಬೀಗಿದ ಸ್ಥಿತಿಯಲ್ಲಿ ಶವ ಪತ್ತೆ

| Updated By: ಸಾಧು ಶ್ರೀನಾಥ್​

Updated on: Dec 23, 2023 | 12:33 PM

ಪಿಯುಸಿ ಮತ್ತು ಟೇಲರಿಂಗ್ ಮಾಡಿಕೊಂಡು ಧೈರ್ಯದಿಂದ ಬದುಕು ಕಟ್ಟಿಕೊಳ್ಳಬೇಕೆಂದು ಕವನ ಹೋರಾಟ ಮಾಡುತ್ತಿದ್ದಳು. ರಿಪ್ಪನಪೇಟೆ ಸಮೀಪದಲ್ಲೇ ಕೊಳವಳ್ಳಿ ಗ್ರಾಮದಲ್ಲಿ ತವರು ಮನೆ ಇದೆ. ಆದ್ರೆ ಸ್ವಾಭಿಮಾನಿ ಕವನ ಮಾತ್ರ ಗಂಡ ಕೈಕೊಟ್ಟು ಎರಡು ವರ್ಷ ಆದ್ರೂ ತವರು ಮನೆಗೆ ಹೊರೆ ಆಗಬಾರದೆಂದು ಅಲ್ಲಿಗೆ ಹೋಗಿರಲಿಲ್ಲ.

ಮೊಬೈಲ್ ಮಿಸ್ಸಿಂಗ್, ವಿವಾಹಿತ ಮಹಿಳೆಯ ಅನುಮಾನಾಸ್ಪದ ಸಾವು, ನೇಣು ಬೀಗಿದ ಸ್ಥಿತಿಯಲ್ಲಿ ಶವ ಪತ್ತೆ
ಮೊಬೈಲ್ ಮಿಸ್ಸಿಂಗ್, ವಿವಾಹಿತೆಯ ಅನುಮಾನಾಸ್ಪದ ಸಾವು
Follow us on

ಮದುವೆಯಾಗಿ ಐದು ವರ್ಷ ಆಗಿತ್ತು. ಆರಂಭದಲ್ಲಿ ಸಂಸಾರ ಚೆನ್ನಾಗಿಯೇ ಇತ್ತು. ಬಳಿಕ ಇಬ್ಬರಲ್ಲಿಯೂ ಭಿನ್ನಾಭಿಪ್ರಾಯ ಶುರುವಾಗಿತ್ತು. ಕಳೆದ ಎರಡು ವರ್ಷದಿಂದ ಗಂಡನ ಮನೆ ಬಿಟ್ಟು ಪತ್ನಿಯು ಪ್ರತ್ಯೇಕವಾಗಿ ವಾಸವಾಗಿದ್ದಳು. ಈ ನಡುವೆ ಪತ್ನಿಯು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಒಂಟಿಯಾಗಿ ಬದುಕು ಕಟ್ಟಿಕೊಳ್ಳಲು ಹೋರಾಡುತ್ತಿದ್ದ ಮಹಿಳೆಯ ನಿಗೂಢ ಸಾವು ಕುರಿತು ಒಂದು ವರದಿ ಇಲ್ಲಿದೆ. ಮದುವೆಯಾಗಿ ಐದು ವರ್ಷ ಆಗಿದೆ. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರದ್ದೂ ಬೇರೆ ಬೇರೆ ಜಾತಿ. ಕವನಳದ್ದು ಈಡಿಗ ಜಾತಿ ಆದ್ರೆ ಯುವಕ ರುದ್ರೇಶ್ ಲಿಂಗಾಯತ ಜಂಗಮ ಸಮಾಜ. ಖಾಸಗಿ ಬಸ್ ನಲ್ಲಿ ಕಂಡೆಕ್ಟರ್ ಆಗಿ ರುದ್ರೇಶ್ ಕೆಲಸ ಮಾಡಿಕೊಂಡಿದ್ದನು. ರುದ್ರೇಶ್ ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ಗ್ರಾಮದ ನಿವಾಸಿ. ಕವನ ಹೊಸನಗರ ತಾಲೂಕಿನ ರಿಪ್ಪನಪೇಟೆ ನಿವಾಸಿ ಆಗಿದ್ದಾಳೆ.

ಮದುವೆಯಾಗಿ ಒಂದು ಹೆಣ್ಣು ಮಗು ಇದೆ. ಈ ನಡುವೆ ಪತಿ ಪತ್ನಿ ನಡುವೆ ಮನಸ್ತಾಪ ಜಗಳ ಶುರುವಾಗಿತ್ತು. ಪತಿ ಕುಡಿದು ಬಂದು ಪದೇ ಪದೇ ಪತ್ನಿಯ ಜೊತೆ ಗಲಾಟೆ ಮಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸೇರಿ ಇಬ್ಬರೂ ರಿಪ್ಪನಪೇಟೆಯಲ್ಲಿ ವಾಸವಾಗಿದ್ದರು. ಅತ್ತೆ ಮಾವ ಯಾವುದೇ ರಗಳೆ ಇಲ್ಲದೇ ಇಬ್ಬರೂ ಸಂಸಾರ ಮಾಡಿಕೊಂಡಿದ್ದರು. ಇದರ ಬಳಿಕವೂ ಕಳೆದ ಎರಡು ವರ್ಷದ ಹಿಂದೆ ಪತಿ ಗಲಾಟೆ ಮಾಡಿಕೊಂಡು ಹೋಗಿದ್ದಾನೆ.ಆತ ವಾಪಸ್ ಬರಲೇ ಬಂದಿಲ್ಲ.

ಈ ಹಿನ್ನೆಲೆಯಲ್ಲಿ ಕವನಾ ಒಬ್ಬಳೇ ಮನೆಯಲ್ಲಿ ವಾಸವಾಗಿದ್ದಳು. ಮಗಳನ್ನು ತವರು ಮನೆಗೆ ಕಳುಹಿಸಿದ್ದಳು. ರಿಪ್ಪನಪೇಟೆ ಪಟ್ಟಣದ ಸೂಪರ್ ಮಾರ್ಕೇಟ್ ನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಆದ್ರೆ ಮೊನ್ನೆ ರಾತ್ರಿ ಊಟಕ್ಕೆಂದು ಕಬಾಬ್ ಮತ್ತು ಅನ್ನ ಸಾಂಬರ ಮಾಡಿಕೊಂಡಿದ್ದ ಕವನ ಊಟ ಮಾಡಿಯೇ ಇಲ್ಲ. ಅವಳ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ನಿನ್ನೆ ಮಧ್ಯಾಹ್ನ ಸ್ನೇಹಿತೆಯೊಬ್ಬರು ಮನೆ ಹತ್ತಿರ ಹೋಗಿ ನೋಡಿದಾಗ ಮನೆ ಬಾಗಿಲು ಓಪನ್ ಆಗಿತ್ತು. ಒಳಗೆ ನೋಡಿದ್ರೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಕವನ ಸ್ನೇಹಿತೆ ತಕ್ಷಣ ಕುಟುಂಬಸ್ಥರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ಅವಳ ಮೊಬೈಲ್ ಮಿಸ್ಸಿಂಗ್ ಆಗಿದೆ. ಕವನ ಚೆನ್ನಾಗಿಯೇ ಇದ್ದಳು. ಯಾವುದೇ ಸಮಸ್ಯೆ ಇರಲಿಲ್ಲ. ಈ ನಡುವೆ ಹಠಾತ್ ಆಗಿ ಅವಳು ಮೃತಪಟ್ಟಿರುವುದು ಕುಟುಂಬಸ್ಥರಿಗೆ ಆತಂಕ ಮೂಡಿಸಿದೆ.

ಪಿಯುಸಿ ಮತ್ತು ಟೇಲರಿಂಗ್ ಮಾಡಿಕೊಂಡು ಧೈರ್ಯದಿಂದ ಬದುಕು ಕಟ್ಟಿಕೊಳ್ಳಬೇಕೆಂದು ಕವನ ಹೋರಾಟ ಮಾಡುತ್ತಿದ್ದಳು. ರಿಪ್ಪನಪೇಟೆ ಸಮೀಪದಲ್ಲೇ ಕೊಳವಳ್ಳಿ ಗ್ರಾಮದಲ್ಲಿ ತವರು ಮನೆ ಇದೆ. ಆದ್ರೆ ಸ್ವಾಭಿಮಾನಿ ಕವನ ಮಾತ್ರ ಗಂಡ ಕೈಕೊಟ್ಟು ಎರಡು ವರ್ಷ ಆದ್ರೂ ತವರು ಮನೆಗೆ ಹೊರೆ ಆಗಬಾರದೆಂದು ಅಲ್ಲಿಗೆ ಹೋಗಿರಲಿಲ್ಲ.

ಇದನ್ನೂ ಓದಿ: ಕೊಳ್ಳೆಗಾಲ ಒಂಟಿ ಮಹಿಳೆ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್, ಕೊಲೆ ಹಿಂದಿನ ದಿನ ಮಗಳನ್ನು ಬಾಲಮಂದಿರಕ್ಕೆ ಸೇರಿಸಿದ್ದ ತಾಯಿ, ಯಾಕೆ?

ಸೂಪರ್ ಮಾರ್ಕೇಟ್ ನಲ್ಲಿ ಕೆಲಸ ಮಾಡಿಕೊಂಡು ತನ್ನ ಬದುಕು ಕಟ್ಟಿಕೊಳ್ಳುತ್ತಿದ್ದಳು. ಈ ನಡುವೆ ಮುದ್ದಾದ ಮಗಳ ಭವಿಷ್ಯಕ್ಕಾಗಿ ಕವನಾ ಹೋರಾಟ ನಡೆಸಿದ್ದರು. ಆದ್ರೆ ಮೊನ್ನೆ ರಾತ್ರಿ ಖುಷಿ ಖುಷಿಯಾಗಿ ಮನೆಗೆ ಹೋಗಿದ್ದ ಕವನಾ ನೇಣು ಬಿಗಿದ ಸ್ಥಿತಿಯಲ್ಲಿ ಅವಳ ಶವ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಕೊಳ್ಳುವ ಯಾವುದೇ ಒತ್ತಡ ಅವಳಿಗೆ ಇರಲಿಲ್ಲ.

ಈ ನಡುವೆ ಕವನ ಮೃತಪಟ್ಟಿರುವುದು ಕುಟುಂಬಸ್ಥರಿಗೆ ದೊಡ್ಡ ಶಾಕ್ ಆಗಿದೆ. ಸದ್ಯ ರಿಪ್ಪನಪೇಟೆ ಪೊಲೀಸರು ಅನುಮಾನಸ್ಪದ ಸಾವು ಕೇಸ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ. ನೋವಿನಲ್ಲಿ ಕುಟುಂಬಸ್ಥರು ಕವನ ಅಂತ್ಯಕ್ರಿಯೆ ಮಾಡಿದ್ದಾರೆ. ಪುಟ್ಟ ಎರಡು ವರ್ಷದ ಮಗು ಈಗ ತಾಯಿ ಇಲ್ಲದ ತಬ್ಬಲಿಯಾಗಿದೆ. ಈ ಘಟನೆಗೂ ಪ್ರತ್ಯೇಕವಾಗಿ ಇದ್ದ ಪತಿಗೂ ಏನಾದ್ರೂ ಲಿಂಕ್ ಇದೆಯಾ ಅಂತಾ ಪೊಲೀಸರು ತನಿಖೆಗೆ ನಡೆಸುತ್ತಿದ್ದಾರೆ.

ಪ್ರೀತಿಸಿ ಮದುವೆಯಾದ ಪತ್ನಿಗೆ ಪತಿ ಕೈಕೊಟ್ಟಿದ್ದ. ಕವನ ಒಂಟಿಯಾಗಿ ತನ್ನ ಬದುಕು ಕಟ್ಟಿಕೊಂಡಿದ್ದಳು. ಈ ನಡುವೆ ಕವನಾಳ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟಿ ಹಾಕಿದೆ. ಕವನಾಳ ಸಾವಿನ ರಹಸ್ಯವನ್ನು ರಿಪ್ಪನಪೇಟೆಯ ಪೊಲೀಸರು ತನಿಖೆಯಿಂದ ಬಯಲು ಮಾಡಬೇಕಿದೆ

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:33 pm, Sat, 23 December 23