ಶಿವಮೊಗ್ಗ ಜನರ ಮೊಗದಲ್ಲಿ ಮೂಡಿದ ಸಂತಸ: ವಿಐಎಸ್​ಎಲ್​​​ ಪುನರಾರಂಭಕ್ಕೆ ಕೇಂದ್ರ ಒಪ್ಪಿಗೆ

ರಾಜ್ಯದ ಪ್ರತಿಷ್ಠೆಯಾಗಿರುವ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ​ಮರು ಕಾರ್ಯಾರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಶಿವಮೊಗ್ಗ ಜನರ ಮೊಗದಲ್ಲಿ ಮೂಡಿದ ಸಂತಸ: ವಿಐಎಸ್​ಎಲ್​​​ ಪುನರಾರಂಭಕ್ಕೆ ಕೇಂದ್ರ ಒಪ್ಪಿಗೆ
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ

Updated on: Aug 02, 2023 | 11:30 AM

ಶಿವಮೊಗ್ಗ: ರಾಜ್ಯದ ಪ್ರತಿಷ್ಠೆಯಾಗಿರುವ, ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿಯಲ್ಲಿನ (Bhadravati) ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ (VISL)​ ಮರು ಕಾರ್ಯಾರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆಗಸ್ಟ್​ 10ರಿಂದ ಬರ್​ಮಿಲ್​ ಪ್ರಾರಂಭವಾಗಲಿದ್ದು, ಶ್ರೀಘದಲ್ಲಿಯೇ ವಿಐಎಸ್​ಎಲ್​​​ ಕಾರ್ಖಾನೆ ಕೆಲಸ ಶರುವಾಗಲಿದೆ.

ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯರವರು ಸ್ಥಾಪಿಸಿದ್ದ ಸಂಸ್ಥೆಗೆ ಮತ್ತೊಮ್ಮೆ ಜೀವಕಳೆ ಬರಲಿದೆ. ಇದೇ ಆಗಸ್ಟ್ 10 ರಿಂದ ಭದ್ರಾವತಿಯ ವಿ.ಎಸ್.ಐ.ಎಲ್ ಪುನರಾರಂಭವಾಗಲಿದ್ದು, ಭದ್ರಾವತಿಯ ಜನತೆಯ ಬಹುದಿನಗಳ ಕನಸು ನನಸಾಗಲಿದೆ. ಮತ್ತೆ ಶುರುವಾಗುತ್ತಿದೆ ಭದ್ರಾವತಿಯ ಸುವರ್ಣಯುಗ. ಮತ್ತೆ ಫಳಫಳಿಸಲಿದೆ ಕಪ್ಪು ಚಿನ್ನ. ವಿಐಎಸ್ಎಲ್ ಮೈಕೊಡವಿ ಮೇಲೇಳುತ್ತಿದೆ ಎಂದು ಸಂಸದ ಬಿವೈ ರಾಘವೇಂದ್ರ ಅವರು ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಉತ್ಪಾದನೆ ಶುರುಮಾಡಲು ಭಾರತೀಯ ಉಕ್ಕು ಪ್ರಾಧಿಕಾರ (SAIL) ಒಪ್ಪಿಕೊಂಡಿದೆ. ಇದೇ ತಿಂಗಳ 10 ಕ್ಕೆ ಬರ್​ಮಿಲ್ ಶುರುವಾಗಿ, ಅದಾದ ಕೆಲದಿನದಲ್ಲೇ ಪೂರ್ಣ ಪುನರಾರಂಭವಾಗಲಿದೆ. ಸವಾಲುಗಳನ್ನೆಲ್ಲ ಎದುರಿಸಿ ಗೆದ್ದ ಹೆಮ್ಮೆ ಶಿವಮೊಗ್ಗ ಜಿಲ್ಲೆ ಹಾಗೂ ಭದ್ರಾವತಿ ನಗರದ ಜನರದ್ದು, ಭರವಸೆ ಕಳೆದುಕೊಳ್ಳದ ನೌಕರ ಸಮುದಾಯದ್ದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Shivamogga Airport: ಶಿವಮೊಗ್ಗ ಬೆಂಗಳೂರು ಮಧ್ಯೆ ಇಂಡಿಗೊ ವಿಮಾನ ಸಂಚಾರಕ್ಕೆ ಕೊನೆಗೂ ಮುಹೂರ್ತ ನಿಗದಿ; ಇಲ್ಲಿದೆ ವಿವರ

ಅಲ್ಲದೇ ವಿಐಎಸ್‌ಎಲ್‌ ಪುನರಾರಂಭಕ್ಕೆ ಕಾರಣವಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾಜಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇನ್ನು ಶಾಸಕ ಬಿವೈ ವಿಜಯೇಂದ್ರ ಟ್ವೀಟ್​ ಮಾಡಿ ಭದ್ರಾವತಿಯ ಐತಿಹಾಸಿಕ VISL ಕಾರ್ಖಾನೆ ಆಗಸ್ಟ್ 10 ರಿಂದ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಕಾರ್ಖಾನೆಯನ್ನೇ ಆಧಾರಿಸಿ ಜೀವನ ನಡೆಸುತ್ತಿದ್ದ ಉದ್ಯೋಗಿಗಳು ಹಾಗೂ ಸಾರ್ವಜನಿಕರ ಹಿತಾಸಕ್ತಿ ಕಾಪಾಡಿದ ನಮ್ಮ ಪ್ರಧಾನಿ ಮೋದಿ ಅವರ ಸರ್ಕಾರಕ್ಕೆ ಶಿವಮೊಗ್ಗ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಧನ್ಯವಾದ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:30 am, Wed, 2 August 23