ಯಶವಂತಪುರ – ಶಿವಮೊಗ್ಗ ನಡುವೆ ಆಗಸ್ಟ್​ 10 ರಿಂದ ಹೊಸ ರೈಲು ಸಂಚಾರ; ವೇಳಾಪಟ್ಟಿ ಇಲ್ಲಿದೆ

| Updated By: Skanda

Updated on: Aug 04, 2021 | 7:38 AM

ಬೆಂಗಳೂರಿನ ಯಶವಂತಪುರದಿಂದ ಹೊರಡುವ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿ ನಿಲ್ದಾಣಗಳಲ್ಲಿ ನಿಲುಗಡೆಗೊಂಡು ಶಿವಮೊಗ್ಗ ಟೌನ್​ ತಲುಪಲಿದೆ. ಶಿವಮೊಗ್ಗದಿಂದ ಮರಳಿ ಯಶವಂತಪುರಕ್ಕೆ ಹೋಗುವಾಗಲೂ ಅದೇ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೊಳ್ಳಲಿದೆ.

ಯಶವಂತಪುರ - ಶಿವಮೊಗ್ಗ ನಡುವೆ ಆಗಸ್ಟ್​ 10 ರಿಂದ ಹೊಸ ರೈಲು ಸಂಚಾರ; ವೇಳಾಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನೈರುತ್ಯ ರೈಲ್ವೆ ಬೆಂಗಳೂರು ವಿಭಾಗವು ಯಶವಂತಪುರ-ಶಿವಮೊಗ್ಗ ನಡುವೆ ಆಗಸ್ಟ್​ 10ರಿಂದ ಮತ್ತೊಂದು ರೈಲನ್ನು ಓಡಿಸಲು ನಿರ್ಧರಿಸಿದೆ. ಆಗಸ್ಟ್​ 10ನೇ ತಾರೀಖಿನಿಂದ ಪ್ರತಿನಿತ್ಯವೂ ಈ ಎಕ್ಸ್​ಪ್ರೆಸ್​ ರೈಲು ಯಶವಂತಪುರ-ಶಿವಮೊಗ್ಗ (Yeshwanthpur Shivamogga Daily Express Train) ನಡುವೆ ಸಂಚಾರ ನಡೆಸಲಿದೆ. ಈ ಕುರಿತು ರೈಲ್ವೇ ಇಲಾಖೆ ಟ್ವೀಟ್​ ಮಾಡಿದ್ದು, ರೈಲಿನ ವೇಳಾಪಟ್ಟಿಯನ್ನು (Railway Timings) ಪ್ರಕಟಿಸಿದೆ. ರೈಲು ನಂಬರ್ 07357/07358 ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ನಡುವೆ ಪ್ರತಿನಿತ್ಯ ಸಂಚಾರ ನಡೆಸಲಿದ್ದು, ಆಗಸ್ಟ್ 10 ರಿಂದ ಕಾರ್ಯಾರಂಭ ಮಾಡುವ ಸದರಿ ರೈಲು ಮುಂದಿನ ಆದೇಶದ ತನಕ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಬೆಂಗಳೂರಿನ ಯಶವಂತಪುರದಿಂದ ಹೊರಡುವ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿ ನಿಲ್ದಾಣಗಳಲ್ಲಿ ನಿಲುಗಡೆಗೊಂಡು ಶಿವಮೊಗ್ಗ ಟೌನ್​ ತಲುಪಲಿದೆ. ಶಿವಮೊಗ್ಗದಿಂದ ಮರಳಿ ಯಶವಂತಪುರಕ್ಕೆ ಹೋಗುವಾಗಲೂ ಅದೇ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೊಳ್ಳಲಿದೆ. ಯಶವಂತಪುರ ರೈಲ್ವೇ ನಿಲ್ದಾಣದಿಂದ ಬೆಳಗ್ಗೆ 9.15ಕ್ಕೆ ಹೊರಡುವ ರೈಲು, ಮಧ್ಯಾಹ್ನ 2.30 ಕ್ಕೆ ಶಿವಮೊಗ್ಗ ಟೌನ್​ ನಿಲ್ದಾಣವನ್ನು ತಲುಪಲಿದೆ. ಪುನಃ ಮಧ್ಯಾಹ್ನ 3.30ಕ್ಕೆ ಶಿವಮೊಗ್ಗದಿಂದ ಹೊರಟು ರಾತ್ರಿ 9.00ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.

ಯಶವಂತಪುರದಿಂದ ಶಿವಮೊಗ್ಗಕ್ಕೆ ಬರುವಾಗ ಮತ್ತು ಮರಳುವಾಗ ಯಾವ ಯಾವ ನಿಲ್ದಾಣಗಳಲ್ಲಿ ಎಷ್ಟು ಹೊತ್ತು ರೈಲು ನಿಲ್ಲಲಿದೆ ಎಂಬ ಮಾಹಿತಿ ಇಲ್ಲಿದೆ:

ಶಿವಮೊಗ್ಗ – ಯಶವಂತಪುರ ಎಕ್ಸ್​ಪ್ರೆಸ್​ ರೈಲು ವೇಳಾಪಟ್ಟಿ

ರೈಲು ಪ್ರಯಾಣಿಕರ ಗಮನಕ್ಕೆ: ನೈರುತ್ಯ ರೈಲ್ವೆ ತನ್ನ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಮಾಸಿಕ ನಿಯತಕಾಲಿಕ ಟಿಕೆಟ್ ಸೇವೆಯನ್ನು ಮತ್ತೆ ಆರಂಭಿಸಲು ಹಾಗೂ ಲಾಕ್‌ಡೌನ್‌ಗೆ ಮುನ್ನ ನೀಡಲಾಗಿದ್ದು ಅಸ್ತಿತ್ವದಲ್ಲಿರುವ ನಿಯತಕಾಲಿಕ ಟಿಕೆಟ್‌ಗಳನ್ನು ಮರು ಊರ್ಜಿತಗೊಳಿಸಲು ನಿರ್ಧಾರ ತೆಗೆದುಕೊಂಡಿದೆ. ಈ ಕುರಿತು ಅಗತ್ಯ ಸೂಚನೆಗಳನ್ನು ಶೀಘ್ರದಲ್ಲೇ ಹೊರಡಿಸುವುದಾಗಿ ಹೇಳಿದೆ.

ನೈರುತ್ಯ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅರಸೀಕೆರೆ-ಹುಬ್ಬಳ್ಳಿ-ಅರಸೀಕೆರೆ ದೈನಿಕ ಪ್ಯಾಸೆಂಜರ್ ರೈಲು ಓಡಾಟವನ್ನು ಮತ್ತೆ ಆರಂಭಿಸಲಿದೆ. ರೈಲು ಸಂಖ್ಯೆ 07367/ 07368 ಅರಸೀಕೆರೆ-ಎಸ್ಎಸ್ಎಸ್ ಹುಬ್ಬಳ್ಳಿ-ಅರಸೀಕೆರೆ ನಡುವೆ ಆಗಸ್ಟ್‌ 12ರಿಂದ ಓಡಾಟ ಆರಂಭಿಸಲಿದೆ.

ಹುಬ್ಬಳ್ಳಿ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸಲಾಗಿದೆ. ಹುಬ್ಬಳ್ಳಿ-ಬಳ್ಳಾರಿ-ಹುಬ್ಬಳ್ಳಿ ರೈಲು ಸಂಖ್ಯೆ 07337/ 07338 ರೈಲಿಗೆ ಇಂದಿನಿಂದ (ಆಗಸ್ಟ್ 4) ಜಾರಿಗೆ ಬರುವಂತೆ 5 ಹೆಚ್ಚುವರಿ ಬೋಗಿಗಳನ್ನು ಜೋಡಿಸುತ್ತಿದೆ. ಪ್ರಸ್ತುತ ಸಂಚಾರ ನಡೆಸುತ್ತಿರುವ ರೈಲು 8 ಬೋಗಿಗಳನ್ನು ಹೊಂದಿದ್ದು, 5 ಹೆಚ್ಚುವರಿ ಬೋಗಿಗಳನ್ನು ಅಳವಡಿಕೆ ಮಾಡಿದ ನಂತರ 13 ಬೋಗಿಗಳು ಆಗಲಿವೆ. 5 ಹೆಚ್ಚುವರಿ ದ್ವಿತೀಯ ದರ್ಜೆಯ ಬೋಗಿಗಳನ್ನು ಶಾಶ್ವತವಾಗಿ ಅಳವಡಿಸಲಾಗುತ್ತಿದ್ದು, ಇದರಿಂದಾಗಿ ರೈಲಿನಲ್ಲಿ 11 ದ್ವಿತೀಯ ದರ್ಜೆ ಮತ್ತು 2 ಲಗೇಜ್-ಬ್ರೇಕ್ ವ್ಯಾನ್ ಅಥವಾ ದಿವ್ಯಾಂಗ ಸ್ನೇಹಿ ಕಂಪಾರ್ಟ್ಮೆಂಟ್ ಬೋಗಿಗಳು ಇರಲಿವೆ.

ಇದನ್ನೂ ಓದಿ:
IRCTC Tourism ಆಗಸ್ಟ್ 29ರಿಂದ ಮಧುರೈನಿಂದ ಸಂಚರಿಸಲಿದೆ ಭಾರತ್ ದರ್ಶನ್ ವಿಶೇಷ ರೈಲು; ಇಲ್ಲಿವೆ ವಿವರಗಳು 

ವಿಸ್ಟಾಡೋಮ್ ಕೋಚ್ ಹೊಂದಿರುವ ರೈಲಿಗೆ ಚಾಲನೆ ನೀಡಿದ ದಕ್ಷಿಣ ಕನ್ನಡ ಸಂಸದ ನಳಿನ್​ ಕುಮಾರ್​

(Yeshwanthpur Shivamogga Daily Express Train From August 10 here is the timings and other details)