ಬೆಂಗಳೂರು: ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಕಳೆದ 6 ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಸಮಸ್ಯೆ ಬಗೆಹರಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಪತ್ರದಲ್ಲಿ ಸೂಚಿಸಿದ್ದಾರೆ.
ರೈತರ ಪಾಲಿಗೆ ಕೃಷಿ ಕಾಯ್ದೆಗಳು ಮಾರಣಶಾಸನವಾಗಿವೆ. ಪ್ರತಿಭಟನೆ ಮಾಡಿದ್ದ 340 ರೈತರು ಹುತಾತ್ಮರಾಗಿದ್ದಾರೆ. ಬೃಹತ್ ಚಳುವಳಿ ನಿರ್ಲಕ್ಷ್ಯ ಮಾಡಿದ ಇತಿಹಾಸವಿಲ್ಲ. ಆದರೆ ಪ್ರಧಾನಿ ಮೋದಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಹೋರಾಟವನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡಿತು. ಕಳೆದ ವರ್ಷ ಎಲ್ಲ ವಲಯಗಳು ವಿಫಲವಾಗಿದ್ದವು. ಆದ್ರೆ ಕೃಷಿ ವಲಯ ಶೇಕಡಾ 16ರಷ್ಟು ಪ್ರಗತಿ ಸಾಧಿಸಿದೆ. ಬೇಳೆಕಾಳುಗಳ ಬೆಲೆ ಶೇಕಡಾ 75ರಷ್ಟು ಹೆಚ್ಚಾಗಿವೆ. ಜನರ ಕೈಯಲ್ಲಿ ದುಡ್ಡಿಲ್ಲ, ಖರೀದಿ ಮಾಡುವ ಶಕ್ತಿಯಿಲ್ಲ. ರೈತರು ಬೆಳೆದ ಬೆಳೆ ಎಲ್ಲಿಗೆ ಹೊಯಿತು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಜೊತೆಗೆ ಇದರಿಂದ ಕಾರ್ಪೊರೇಟ್ ಕಂಪನಿಗಳು ಉದ್ಧಾರವಾಗಿವೆ. ಅಂಬಾನಿ, ಅದಾನಿ ಕಂಪನಿಗಳು ಹಣ ಮಾಡುತ್ತಿವೆ. ಇದು ಎಪಿಎಂಸಿ ತಿದ್ದುಪಡಿ ಕಾಯ್ದೆಯ ಪರಿಣಾಮ. ಹೀಗಾಗಿ ರೈತ ವಿರೋಧಿ ಕಾನೂನು ರದ್ದು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಮಹಿಳೆಯರ ಬೆಂಬಲ; ಕೃಷಿ ಕಾಯ್ದೆ ಹಿಂಪಡೆಯಲು ಒತ್ತಾಯ