ನಾಯಿ ಸ್ನಾನ ಮಾಡಿಸಲು ಹೋಗಿ ಮಸಣ ಸೇರಿದ ಅಣ್ಣ-ತಂಗಿ

|

Updated on: Dec 26, 2020 | 8:03 PM

ಅಣ್ಣ ಪ್ರೇಮಕುಮಾರ್, ತಂಗಿ ಜೆನ್ನಿಫರ್ ಮೃತಪಟ್ಟವರು. ಇವರು ಬೆಟ್ಟಹಲಸೂರಿನಲ್ಲಿ ಕಲ್ಲು ಕ್ವಾರಿಯಲ್ಲಿ ನಾಯಿ ತೊಳೆಯಲು ತೆರಳಿದ್ದರು. ಈ ವೇಳೆ ತಂಗಿ ನೀರಿಗೆ ಬಿದ್ದಿದ್ದಳು. ತಂಗಿಯನ್ನು ರಕ್ಷಣೆ ಮಾಡಲು ತೆರಳಿದ ಅಣ್ಣನೂ ನೀರುಪಾಲಾಗಿದ್ದಾನೆ.

ನಾಯಿ ಸ್ನಾನ ಮಾಡಿಸಲು ಹೋಗಿ ಮಸಣ ಸೇರಿದ ಅಣ್ಣ-ತಂಗಿ
ಮೃತ ಅಣ್ಣ-ತಂಗಿ
Follow us on

ಬೆಂಗಳೂರು: ಸಾವು ಎಲ್ಲಿ ಯಾವಾಗ ಬರುತ್ತದೆ ಎಂದು ಹೇಳೋದು ತುಂಬಾನೇ ಕಷ್ಟ. ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರಿನಲ್ಲೂ ಇದೇ ರೀತಿ ಆಗಿದೆ. ನಾಯಿ ಸ್ನಾನ ಮಾಡಿಸಲು ಹೋದ ಅಣ್ಣ ತಂಗಿ ಈಗ ಮಸಣ ಸೇರಿದ್ದಾರೆ.

ಅಣ್ಣ ಪ್ರೇಮಕುಮಾರ್, ತಂಗಿ ಜೆನ್ನಿಫರ್ ಮೃತಪಟ್ಟವರು. ಇವರು ಬೆಟ್ಟಹಲಸೂರಿನಲ್ಲಿ ಕಲ್ಲು ಕ್ವಾರಿಯಲ್ಲಿ ನಾಯಿ ತೊಳೆಯಲು ತೆರಳಿದ್ದರು. ಈ ವೇಳೆ ತಂಗಿ ನೀರಿಗೆ ಬಿದ್ದಿದ್ದಳು. ತಂಗಿಯನ್ನು ರಕ್ಷಣೆ ಮಾಡಲು ತೆರಳಿದ ಅಣ್ಣನೂ ನೀರುಪಾಲಾಗಿದ್ದಾನೆ. ಚಿಕ್ಕಜಾಲ ಠಾಣೆ ಪೊಲೀಸರಿಂದ ಶವಗಳಿಗಾಗಿ ಹುಡುಕಾಟ ನಡೆಯುತ್ತಿದೆ.

ಬಾಗಲಕೋಟೆ: ಬಸ್​ಗೆ ಡಿಕ್ಕಿ ಹೊಡೆದ ಬೈಕ್​: ಸವಾರ ಸ್ಥಳದಲ್ಲೇ ಸಾವು