
ಬೆಂಗಳೂರು: ನ್ಯೂ ಇಯರ್ ದಿನ ಫುಲ್ ಎಣ್ಣೆ ಪಾರ್ಟಿ ಮಾಡಿ ಅಪ್ಪನಿಗೆ ಗೊತ್ತಾದ್ರೆ ಬೈತಾರೆ ಎಂದು ಬಾಲಕ ಕಿಡ್ನಾಪ್ ಕಥೆ ಕಟ್ಟಿರುವ ಘಟನೆ ಜೀವನ್ ಭೀಮಾ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
16 ವರ್ಷದ ಈ ಬಾಲಕ ಹುಟ್ಟಿನಿಂದಲೇ ಶ್ರೀಮಂತ. ಹೀಗಾಗಿ ಆತನಿಗೆ ಹೇಳಿದನ್ನೆಲ್ಲ ಕೊಡಿಸಿ ಪ್ರೀತಿಯಿಂದ ಸಾಕಿರ್ತಾರೆ. ಈತ, ಮದುವೆ ಸಮಾರಂಭಕ್ಕಾಗಿ ಕೊಚ್ಚಿಯಿಂದ ಬೆಂಗಳೂರಿನ ತಾತನ ಮನೆಗೆ ಬಂದಿರ್ತಾನೆ. ಡಿ.31 ರಂದು ಮನೆಯಲ್ಲಿ ಯಾರು ಇರದಿದ್ದಾಗ ನ್ಯೂ ಇಯರ್ ಅಂತ ಫುಲ್ ಎಣ್ಣೆ ಪಾರ್ಟಿ ಮಾಡಿ ಟೈಟ್ ಆಗಿದ್ದ. ಇದೇ ವೇಳೆಗೆ ಕೊಚ್ಚಿಯಿಂದ ಅಪ್ಪ ಸ್ಯಾಮುಯೆಲ್ ನಿನಾನ್ ಕರೆ ಬರುತ್ತೆ. ಅಪ್ಪನ ಕಾಲ್ ನೋಡಿ ಎಲ್ಲಿ ತಾನು ಕುಡಿದಿರೋದು ಗೊತ್ತಾದ್ರೆ ಬೈತಾರೋ ಎಂಬ ಭಯಕ್ಕೆ ಮದ್ಯದ ಅಮಲಿನಲ್ಲೇ ತಂದೆಯ ಮುಂದೆ ಕಿಡ್ನಾಪ್ ಕಥೆ ಕಟ್ಟಿದ್ದ.
ಹಣಕ್ಕಾಗಿ ಗೃಹಬಂಧನದಲ್ಲಿರಿಸಿ ಕಿರುಕುಳ ಕೊಟ್ಟಿದ್ದಾರೆ ಎಂದು ಬಡಬಡಿಸಿದ್ದ. ಅನ್ಸಾರಿ ಎಂಬ ಪರಿಚಿತನ ಮೇಲೆ ಆರೋಪ ಹೊರಿಸಿದ್ದ. ಒತ್ತಾಯ ಪೂರ್ವಕವಾಗಿ ಜ್ಯೂಸ್ ನಲ್ಲಿ ಕೆಮಿಕಲ್ ಸೇರಿಸಿ ಕುಡಿಸಲಾಗಿದೆ ಎಂದು ಆರೋಪಿಸಿದ್ದ. ಇಷ್ಟೆಲ್ಲಾ ಆಗಿದೆಯಾ ಎಂದು ಕೊಚ್ಚಿಯಲ್ಲಿದ್ದ ಬಾಲಕನ ತಂದೆ ಗಾಬರಿ ಆಗಿದ್ದಾರೆ. ಬಳಿಕ ಬೆಂಗಳೂರಿನಲ್ಲಿರುವ ತನ್ನ ಪರಿಚಯಸ್ಥರಿಗೆ, ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ.
ಬಳಿಕ ಅಪಾರ್ಟ್ಮೆಂಟ್ ಸೆಕ್ಯುರಿಟಿ ಸಹಾಯದಿಂದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ತಂದೆ ಸ್ಯಾಮುಯೆಲ್ ನಿನಾನ್ ಜೀವನ್ ಭಿಮಾ ನಗರ ಠಾಣೆಗೆ ದೂರು ನೀಡಿದ್ರು. ಕೊನೆಗೆ ವೈದ್ಯಕೀಯ ತಪಾಸಣೆ ವೇಳೆ ಬಾಲಕನ ಕಳ್ಳಾಟ ಬಯಲಾಗಿದೆ. ಅಪ್ಪ ಬೈತಾರೆ ಅಂತ ಇಷ್ಟೆಲ್ಲಾ ಡ್ರಾಮಾ ಮಾಡಿರುವುದಾಗಿ ಪೊಲೀಸರ ಮುಂದೆ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ.
ಕೋಟೆ ನಾಡಿನಲ್ಲಿ ಭೀಕರ ಘಟನೆ, ಹಳೇ ವೈಷಮ್ಯಕ್ಕೆ ಮಹಿಳೆಯನ್ನು ಕೊಚ್ಚಿ, ಕೊಚ್ಚಿ ಬರ್ಬರ ಹತ್ಯೆ