ಶಿವಮೊಗ್ಗ: ತಾಲೂಕಿನ ಹುಣಸೋಡಿನಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 9ನೇ ಆರೋಪಿ ಪೃಥ್ವಿರಾಜ್ ಸಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಶೇಷ ಪೊಲೀಸ್ ತಂಡ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ನಿವಾಸಿಯಾದ ಪೃಥ್ವಿರಾಜ್ ಸಾಯಿಯನ್ನು ಬಂಧಿಸಿದೆ.
ಆಂಧ್ರ ಪ್ರದೇಶದ ರಾಯದುರ್ಗದಿಂದ ಸ್ಪೋಟಕ ವಸ್ತುಗಳನ್ನು ಪೃಥ್ವಿರಾಜ್ ಸಾಯಿ, ತಂದೆ ಶ್ರೀರಾಮಲು ಮತ್ತು ಸಹೋದರ ಮಂಜುನಾಥ್ ಸಾಯಿ ಶಿವಮೊಗ್ಗಕ್ಕೆ ರವಾನೆ ಮಾಡುತ್ತಿದ್ದರು. ಈಗಾಗಲೇ ಶ್ರೀರಾಮಲು ಮತ್ತು ಮಂಜುನಾಥ್ ಸಾಯಿಯನ್ನು ಬಂಧಿಸಲಾಗಿತ್ತು. ವಿಶೇಷ ಪೊಲೀಸ್ ತಂಡ ಇಂದು (ಫೆಬ್ರವರಿ 11) 9ನೇ ಆರೋಪಿಯಾದ ಪೃಥ್ವಿರಾಜ್ ಸಾಯಿಯನ್ನು ಬಂಧಿಸಿದೆ.
ಹುಣಸೋಡಿನಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಸೆರೆ ಹಿಡಿಯಲು ಸುಮಾರು 6 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಇಲ್ಲಿವರೆಗೆ ಈ ಪ್ರಕರಣ ಸಂಬಂಧ ಒಟ್ಟು 9 ಆರೋಪಿಗಳು ಬಂಧಿತಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: ಸ್ಪೋಟದಲ್ಲಿ ತೀರಿ ಹೋದವರು ಕಾರ್ಮಿಕರಲ್ಲ.. ಸಮಾಜ ದ್ರೋಹಿಗಳು; ಇವರಿಗೆ ಪರಿಹಾರ ನೀಡಬೇಡಿ -ಆಯನೂರು ಮಂಜುನಾಥ್