ಲಾಕ್​ಡೌನ್ ನಡುವೆ ದೆಹಲಿಯಿಂದ ಬೆಂಗಳೂರಿಗೆ ಬಂತು ಮತ್ತೊಂದು ರೈಲು

|

Updated on: May 16, 2020 | 8:16 AM

ಬೆಂಗಳೂರು: ಕೊರೊನಾ ಲಾಕ್​ಡೌನ್ ನಡುವೆ ರೈಲು ಸಂಚಾರ ಆರಂಭಗೊಂಡ ಬಳಿಕ ಬೆಂಗಳೂರಿಗೆ 2ನೇ ವಿಶೇಷ ರೈಲು ಆಗಮಿಸಿದೆ. ಗುರುವಾರ ರಾತ್ರಿ ನವದೆಹಲಿಯಿಂದ ಬೆಂಗಳೂರಿನ ಕಡೆ ಹೊರಟಿದ್ದ ರೈಲು, ಇಂದು ಬೆಳಗ್ಗೆ 7 ಗಂಟೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ತಲುಪಿದೆ. ಸುಮಾರು 1,100 ಪ್ರಯಾಣಿಕರು ರೈಲಿನಲ್ಲಿ ಆಗಮಿಸಿದ್ದಾರೆ. ಬಿಬಿಎಂಪಿ‌‌ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ, ರೈಲ್ವೆ ನಿಲ್ದಾಣದಲ್ಲಿರುವ ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುತ್ತಿದೆ.ದೆಹಲಿಯಿಂದ ರೈಲಿನಲ್ಲಿ ಆಗಮಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಕ್ವಾರಂಟೈನ್‌ ಮಾಡಬೇಕಿದೆ. ಪ್ರಯಾಣಿಕರು […]

ಲಾಕ್​ಡೌನ್ ನಡುವೆ ದೆಹಲಿಯಿಂದ ಬೆಂಗಳೂರಿಗೆ ಬಂತು ಮತ್ತೊಂದು ರೈಲು
Follow us on

ಬೆಂಗಳೂರು: ಕೊರೊನಾ ಲಾಕ್​ಡೌನ್ ನಡುವೆ ರೈಲು ಸಂಚಾರ ಆರಂಭಗೊಂಡ ಬಳಿಕ ಬೆಂಗಳೂರಿಗೆ 2ನೇ ವಿಶೇಷ ರೈಲು ಆಗಮಿಸಿದೆ. ಗುರುವಾರ ರಾತ್ರಿ ನವದೆಹಲಿಯಿಂದ ಬೆಂಗಳೂರಿನ ಕಡೆ ಹೊರಟಿದ್ದ ರೈಲು, ಇಂದು ಬೆಳಗ್ಗೆ 7 ಗಂಟೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ತಲುಪಿದೆ. ಸುಮಾರು 1,100 ಪ್ರಯಾಣಿಕರು ರೈಲಿನಲ್ಲಿ ಆಗಮಿಸಿದ್ದಾರೆ.

ಬಿಬಿಎಂಪಿ‌‌ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ, ರೈಲ್ವೆ ನಿಲ್ದಾಣದಲ್ಲಿರುವ ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುತ್ತಿದೆ.ದೆಹಲಿಯಿಂದ ರೈಲಿನಲ್ಲಿ ಆಗಮಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಕ್ವಾರಂಟೈನ್‌ ಮಾಡಬೇಕಿದೆ. ಪ್ರಯಾಣಿಕರು ಇಚ್ಛಿಸುವ ಬೆಂಗಳೂರಿನ ವಿವಿಧ ಸ್ಟಾರ್ ಹೋಟೆಲ್, ಹಾಸ್ಟೆಲ್ ಮತ್ತು ಪಿಜಿಗಳಲ್ಲಿ ಕ್ವಾರಂಟೈನ್​ಗೆ ಬಿಬಿಎಂಪಿ ವ್ಯವಸ್ಥೆ ಮಾಡಿದೆ.

ಹಾಗಾಗಿ ನಾಲ್ಕು ಬಿಎಂಟಿಸಿ ಬಸ್​ಗಳನ್ನ ಹಂತಹಂತವಾಗಿ ನಿಯೋಜನೆ‌‌ ಮಾಡಲಾಗಿದ್ದು, ಪ್ರತಿಯೊಬ್ಬರನ್ನೂ ಥರ್ಮಲ್‌ ಸ್ಕ್ರೀನಿಂಗ್ ಮಾಡಿ ಬಸ್​ನಲ್ಲಿ ಕಳುಹಿಸುತ್ತಿದ್ದಾರೆ. ಪ್ರಯಾಣಿಕರ ಕುಟುಂಬಸ್ಥರು ಮತ್ತು ಯಾರನ್ನೂ ಸಹ ರೈಲ್ವೆ ನಿಲ್ದಾಣದ ಒಳಗೆ ಬಿಡದೆ ಬ್ಯಾರಿಕೇಡ್ ಹಾಕಿ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಗೊಂದಲ ಮತ್ತು ಗಲಾಟೆ ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

Published On - 8:16 am, Sat, 16 May 20