ಕೊನೆಗೂ SSLC, ದ್ವಿತೀಯ PUC ತರಗತಿ ಆರಂಭಕ್ಕೆ ಮುಹೂರ್ತ ಫಿಕ್ಸ್​!

|

Updated on: Dec 19, 2020 | 2:09 PM

SSLC, ದ್ವಿತೀಯ PUCಗೆ ತರಗತಿ ಆರಂಭವಾಗಲಿದೆ. ಜ.1ರಿಂದ 6 ರಿಂದ 9ನೇ ತರಗತಿಗೆ ವಿದ್ಯಾಗಮ ಆರಂಭವಾಗಲಿದೆ ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಹೇಳಿದರು. ಡಿ.28 ಅಥವಾ ಜ.1ರಿಂದ ಶಾಲೆ ಆರಂಭಕ್ಕೆ ಸಿಎಂ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಕೊನೆಗೂ SSLC, ದ್ವಿತೀಯ PUC ತರಗತಿ ಆರಂಭಕ್ಕೆ ಮುಹೂರ್ತ ಫಿಕ್ಸ್​!
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Follow us on

ಬೆಂಗಳೂರು: SSLC, ದ್ವಿತೀಯ PUCಗೆ ತರಗತಿ ಆರಂಭವಾಗಲಿದೆ. ಜ.1ರಿಂದ 6 ರಿಂದ 9ನೇ ತರಗತಿಗೆ ವಿದ್ಯಾಗಮ ಆರಂಭವಾಗಲಿದೆ ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಹೇಳಿದರು. ಡಿ.28 ಅಥವಾ ಜ.1ರಿಂದ ಶಾಲೆ ಆರಂಭಕ್ಕೆ ಸಿಎಂ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಶಾಲೆ ಆರಂಭ ಸಂಬಂಧ ಸಿಎಂ ನೇತೃತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಿತು.

ತರಗತಿಗಳ ಟೈಮ್ ಟೇಬಲ್ ಬಗ್ಗೆ ಇಂದು ಸಂಜೆ ನಿರ್ಧಾರ
ಜೊತೆಗೆ, SSLC, ದ್ವಿತೀಯ PUCಗೆ ತರಗತಿ ಆರಂಭದ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಬೋರ್ಡ್ ಎಕ್ಸಾಂ ಇರುವುದರಿಂದ ದ್ವಿತೀಯ ಪಿಯುಸಿ, SSLC ತರಗತಿ ಪ್ರಾರಂಭ ಮಾಡಲು ಸಲಹೆ ಕೊಟ್ಟಿದ್ದಾರೆ. ಹೀಗಾಗಿ, SSLC, ದ್ವಿತೀಯ ಪಿಯುಸಿಗೆ ತರಗತಿ ಆರಂಭವಾಗಲಿದೆ. ತರಗತಿಗಳನ್ನು ಪ್ರಾರಂಭ ಮಾಡುವುದಕ್ಕೆ ನಿರ್ಧರಿಸಿದ್ದೇವೆ. ಯಾವ ರೀತಿ ತರಗತಿ, ಎಷ್ಟು ಅವಧಿ ಎಂದು ನಿರ್ಧಾರ ಮಾಡಲಾಗುವುದು ಎಂದು ಸುರೇಶ್​ ಕುಮಾರ್​ ಹೇಳಿದರು. ತರಗತಿಗಳ ಟೈಮ್ ಟೇಬಲ್ ಇಂದು ನಿರ್ಧಾರ ಮಾಡಲಾಗುವುದು. ಎಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬೇಕು, ಎಷ್ಟು ಕ್ಲಾಸ್ ಮಾಡಬೇಕು ಎಂಬ ಬಗ್ಗೆ ಇಂದು ಸಂಜೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸುರೇಶ್​ ಕುಮಾರ್​ ಹೇಳಿದರು.

‘ಖಾಸಗಿ ಶಾಲೆಗಳೂ ಕೂಡ ವಿದ್ಯಾಗಮ ಮಾಡಬೇಕು’
ಜ.1ರಿಂದ 6 ರಿಂದ 9ನೇ ತರಗತಿಗೆ ವಿದ್ಯಾಗಮ ಆರಂಭವಾಗುವುದು. ಶಾಲಾ ಆವರಣಗಳಲ್ಲಿ ಮಾತ್ರ 3 ದಿನ ವಿದ್ಯಾಗಮಕ್ಕೆ ವ್ಯವಸ್ಥೆ ಮಾಡಲಾಗುವುದು. ಆದರೆ, ವಿದ್ಯಾಗಮಕ್ಕೆ ಬರಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಶೀತ, ನೆಗಡಿ ಇಲ್ಲ ಎಂದು ಪತ್ರ ನೀಡಬೇಕು. ಜೊತೆಗೆ, ವಿದ್ಯಾಗಮಕ್ಕೆ ಬಳಸುವ ಕೊಠಡಿಗಳನ್ನ ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಎಲ್ಲ ಸರ್ಕಾರಿ ಶಾಲೆಗಳ ಕೊಠಡಿಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಖಾಸಗಿ ಶಾಲೆಗಳೂ ಕೂಡ ವಿದ್ಯಾಗಮ ಮಾಡಬೇಕು. ಶಿಕ್ಷಣ ಕಲಿಕೆಗೆ ಖಾಸಗಿ ಶಾಲೆಗಳೂ ಕ್ರಮ ಕೈಗೊಳ್ಳಬೇಕು ಎಂದು ಸುರೇಶ್​ ಕುಮಾರ್​ ಹೇಳಿದರು.

ಪೋಷಕರು ತರಗತಿಗೆ ಕಳಿಸಲೇಬೇಕೆಂದು ಒತ್ತಾಯ ಇಲ್ಲ. ಪರೀಕ್ಷೆ ಬಗ್ಗೆ ತೀರ್ಮಾನ ಮಾಡಿ ಪಠ್ಯಕ್ರಮ ಪರಿಷ್ಕರಣೆ ಮಾಡಲಾಗುವುದು. ಪರಿಸ್ಥಿತಿ ನೋಡಿಕೊಂಡು ಉಳಿದ ತರಗತಿಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಮಧ್ಯಾಹ್ನದ ಬಿಸಿಯೂಟ ಕೊಡುವುದು ಸಾಧ್ಯವಿಲ್ಲ. ಹೀಗಾಗಿ ಮನೆಗಳಿಗೆ ಫುಡ್ ಕಿಟ್​ಗಳನ್ನು ನೀಡುತ್ತೇವೆ ಎಂದು ಸುರೇಶ್​ ಕುಮಾರ್​ ಹೇಳಿದರು.

‘ಪಾಸ್, ಫೇಲ್ ಬಗ್ಗೆ ತೀರ್ಮಾನಿಸುತ್ತೇವೆ’
ಶಾಲೆಗಳ ಆವರಣದಲ್ಲಿ ತರಗತಿ ಮಾಡುತ್ತೇವೆ. 15 ವಿದ್ಯಾರ್ಥಿಗಳು ಮಾತ್ರ ಒಂದು ತರಗತಿಯಲ್ಲಿ ಕೂರಿಸುತ್ತೇವೆ. 6-9ರವರೆಗೆ ವಿದ್ಯಾಗಮ ಮಾಡಿ ಪರಿಸ್ಥಿತಿ ನೋಡಿ ತೀರ್ಮಾನ ಕೈಗೊಳ್ಳುತ್ತೇವೆ. ಉಳಿದ ತರಗತಿಗಳ ಪಾಸ್, ಫೇಲ್ ಬಗ್ಗೆ ತೀರ್ಮಾನಿಸುತ್ತೇವೆ. ಮಕ್ಕಳಿಗೆ ಯಾವುದೇ ಅಪಾಯ ಆಗದಿರುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಥರ್ಮಲ್ ಸ್ಕ್ರೀನಿಂಗ್, ಮಕ್ಕಳಿಗೆ ಸೋಪ್ ವ್ಯವಸ್ಥೆ ಇರುತ್ತೆ ಎಂದು ಸಹ ಹೇಳಿದರು.

ಕೊರೊನಾ ಕೋಟ್ಯಧಿಪತಿ! ಭಾರತದಲ್ಲಿ ಕೊವಿಡ್​ನ ಕೋಟಿ ಹೆಜ್ಜೆಗಳು​.. ಆತಂಕಕ್ಕಿಂತ ಅಚ್ಚರಿಯೇ ಜಾಸ್ತಿ!

Published On - 1:43 pm, Sat, 19 December 20