ಲಾಕ್​ಡೌನ್ ಮಾಡಿದ್ರೆ SSLC ಪರೀಕ್ಷೆ ನಡೆಯುತ್ತಾ.. ಸುರೇಶ್​ ಕುಮಾರ್ ಏನಂದ್ರು?

|

Updated on: Jun 25, 2020 | 12:48 PM

ಬೆಂಗಳೂರು: ಅತ್ತ SSLC ಪರೀಕ್ಷೆಯ ಟೆನ್ಶನ್​. ಇತ್ತ ಲಾಕ್​ಡೌನ್​ ಜಾರಿಯಾಗುತ್ತಾ ಅನ್ನೋ ಚಿಂತೆ. ಈ ಎರಡು ಟೆನ್ಶನ್​ಗಳ ಮಧ್ಯೆ ರಾಜ್ಯದ ವಿದ್ಯಾರ್ಥಿಗಳು ಹಾಗೂ ಜನರು ಸಿಕ್ಕಿ ಹಾಕಿಕೊಂಡಿದ್ದಾರೆ. ಇದೇ ವೇಳೆಯಲ್ಲಿ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಸರ್ಕಾರ ಒಂದು ವೇಳೆ ಲಾಕ್​ಡೌನ್ ಮಾಡಿದ್ರೂ SSLC ಪರೀಕ್ಷೆ ನಡೆಯಲಿದೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಲಾಕ್​ಡೌನ್​ ಜಾರಿಯಾಗುವ ಸಾಧ್ಯತೆ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ‘ವಿದ್ಯಾರ್ಥಿಯ ಹಾಲ್​ಟಿಕೆಟ್ ಪಾಸ್​ಪೋರ್ಟ್ ಇದ್ದಂತೆ’ ಇದರ ಜೊತೆಗೆ ಪರೀಕ್ಷೆಗೆ ಅಡ್ಡಿಯಾಗದಂತೆ ಸೂಕ್ತ ಸಾರಿಗೆ […]

ಲಾಕ್​ಡೌನ್ ಮಾಡಿದ್ರೆ SSLC ಪರೀಕ್ಷೆ ನಡೆಯುತ್ತಾ.. ಸುರೇಶ್​ ಕುಮಾರ್ ಏನಂದ್ರು?
Follow us on

ಬೆಂಗಳೂರು: ಅತ್ತ SSLC ಪರೀಕ್ಷೆಯ ಟೆನ್ಶನ್​. ಇತ್ತ ಲಾಕ್​ಡೌನ್​ ಜಾರಿಯಾಗುತ್ತಾ ಅನ್ನೋ ಚಿಂತೆ. ಈ ಎರಡು ಟೆನ್ಶನ್​ಗಳ ಮಧ್ಯೆ ರಾಜ್ಯದ ವಿದ್ಯಾರ್ಥಿಗಳು ಹಾಗೂ ಜನರು ಸಿಕ್ಕಿ ಹಾಕಿಕೊಂಡಿದ್ದಾರೆ. ಇದೇ ವೇಳೆಯಲ್ಲಿ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಸರ್ಕಾರ ಒಂದು ವೇಳೆ ಲಾಕ್​ಡೌನ್ ಮಾಡಿದ್ರೂ SSLC ಪರೀಕ್ಷೆ ನಡೆಯಲಿದೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಲಾಕ್​ಡೌನ್​ ಜಾರಿಯಾಗುವ ಸಾಧ್ಯತೆ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

‘ವಿದ್ಯಾರ್ಥಿಯ ಹಾಲ್​ಟಿಕೆಟ್ ಪಾಸ್​ಪೋರ್ಟ್ ಇದ್ದಂತೆ’
ಇದರ ಜೊತೆಗೆ ಪರೀಕ್ಷೆಗೆ ಅಡ್ಡಿಯಾಗದಂತೆ ಸೂಕ್ತ ಸಾರಿಗೆ ವ್ಯವಸ್ಥೆಯೂ ಕೂಡ ಕಲ್ಪಿಸಲಾಗುವುದು ಎಂದು ಟಿವಿ 9ಗೆ ತಿಳಿಸಿದ್ದಾರೆ. KSRTC ಸೇರಿದಂತೆ ಇತರೆ ಸಾರಿಗೆ ವ್ಯವಸ್ಥೆಯನ್ನ ಏರ್ಪಡಿಸಲಾಗುತ್ತದೆ ಎಂದು ಹೇಳಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಹತ್ತಿರ ಇರುವ ಹಾಲ್​ಟಿಕೆಟ್ ಒಂದು ಪಾಸ್​ಪೋರ್ಟ್ ಇದ್ದಂತೆ. ಎಲ್ಲಾ ವಿದ್ಯಾರ್ಥಿಗಳಿಗೂ ಪರೀಕ್ಷೆ ಬಹಳ ಮುಖ್ಯ. ಹಾಗಾಗಿ ಪರೀಕ್ಷೆ ತಪ್ಪಿಸದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದ್ದಾರೆ.

Published On - 12:25 pm, Thu, 25 June 20