ಗದಗ: ಆಂಬುಲೆನ್ಸ್ನಲ್ಲಿ ವೆಂಟಿಲೇಟರ್ ಕೊರತೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಮೃತಪಟ್ಟಿದ್ದಾನೆ. 20 ವರ್ಷದ ಸಿದ್ದಪ್ಪ ಗುಡ್ಡಣ್ಣ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಗದಗ ತಾಲೂಕಿನ ಶೀತಾಲಹರಿ ಗ್ರಾಮದ ನಿವಾಸಿ. ಜಿಲ್ಲೆಯಲ್ಲಿ ಒಂದೇ ವೆಂಟಿಲೇಟರ್ ಹೊಂದಿರುವ ಆಂಬುಲೆನ್ಸ್ ಇದೆ ಆದ್ರೆ ಅದು ಕೂಡ ಕೆಟ್ಟು ನಿಂತಿದೆ.
ಮುಳಗುಂದ ಸರ್ಕಾರಿ ಆಸ್ಪತ್ರೆಯಲ್ಲೂ ಆಂಬುಲೆನ್ಸ್ ಸಿಕ್ಕಿಲ್ಲ. ಹೀಗಾಗಿ ಖಾಸಗಿ ವಾಹನದಲ್ಲಿ ಜಿಮ್ಸ್ ಆಸ್ಪತ್ರೆಗೆ ಯುವಕನನ್ನು ಕರೆತರಲಾಗಿದೆ. ಆದರೆ ಸೂಕ್ತ ಸಮಯದಲ್ಲಿ ವೆಂಟಿಲೇಟರ್ ಇರೋ ಆಂಬುಲೆನ್ಸ್ ಸಿಗದೆ ಇರೋದ್ರಿಂದ ಯುವಕ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಈಗಾಗಲೇ ಇದೇ ರೀತಿ ಆಂಬುಲೆನ್ಸ್ನಲ್ಲಿ ವೆಂಟಿಲೇಟರ್ ಕೊರತೆಯಿಂದ ಒಬ್ಬ ಯುವಕ ಮೃತಪಟ್ಟಿದ್ದ. ಜಿಲ್ಲೆಯ ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಸಂಬಂಧಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮುಂದೆ ಇಂಥ ಸಾವು ಮರುಕಳಿಸದಂತೆ ನೋಡಿಕೊಳ್ಳಿ ಅಂತ ಎಚ್ಚರಿಕೆ ನೀಡಿದ್ದಾರೆ.
Published On - 1:33 pm, Thu, 19 December 19