ರಾಜ್ಯದ ಹೈನುಗಾರರಿಗೆ ಬೆಂಬಲ, ಬೆಂಗಳೂರು ಹೋಟೇಲ್‌ಗಳಲ್ಲಿ ನಂದಿನಿ ಹಾಲು ಮಾತ್ರ ಬಳಸಲು ತೀರ್ಮಾನ

|

Updated on: Apr 10, 2023 | 8:26 AM

ಗುಜರಾತ್ ಮೂಲದ ಡೈರಿ ದೈತ್ಯ ಅಮುಲ್‌ ವಿರುದ್ದ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ ​​ನಂದಿನಿ ಹಾಲನ್ನು ಮಾತ್ರ ಬಳಸಲು ನಿರ್ಧರಿಸಿದೆ.

ರಾಜ್ಯದ ಹೈನುಗಾರರಿಗೆ ಬೆಂಬಲ, ಬೆಂಗಳೂರು ಹೋಟೇಲ್‌ಗಳಲ್ಲಿ ನಂದಿನಿ ಹಾಲು ಮಾತ್ರ ಬಳಸಲು ತೀರ್ಮಾನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಗುಜರಾತ್ ಮೂಲದ ಡೈರಿ ದೈತ್ಯ ‘ಅಮುಲ್‌‘(Amul)ವಿರುದ್ದ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ ​​”ರಾಜ್ಯದ ಡೈರಿ ರೈತರನ್ನು ಬೆಂಬಲಿಸಲು” ನಂದಿನಿ ಹಾಲನ್ನು ಮಾತ್ರ ಬಳಸಲು ನಿರ್ಧರಿಸಿದೆ. ಹೌದು ಬೆಂಗಳೂರು ಡೈರಿ ಮಾರುಕಟ್ಟೆಗೆ ಅಮುಲ್ ಮುನ್ನುಗ್ಗುವ ಘೋಷಣೆಯ ಕುರಿತು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ವಾಗ್ಯುದ್ಧದಲ್ಲಿ ತೊಡಗಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್(Bruhat Bengaluru Hotels Association) ಅಮುಲ್ ಹೆಸರನ್ನು ಹೆಸರಿಸದೆ, ಕನ್ನಡಿಗರು ನಂದಿನಿ ಹಾಲಿನ ಉತ್ಪನ್ನಗಳನ್ನು ಮಾತ್ರ ಪ್ರಚಾರ ಮಾಡಬೇಕು. “ನಮ್ಮ ರೈತರು ಉತ್ಪಾದಿಸುವ ಕರ್ನಾಟಕದ ನಂದಿನಿ ಹಾಲಿನ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ ಮತ್ತು ಅದನ್ನು ಪ್ರೋತ್ಸಾಹಿಸಬೇಕು. ನಮ್ಮ ನಗರದಲ್ಲಿ ಶುಚಿಯಾದ ಮತ್ತು ರುಚಿಕರವಾದ ಕಾಫಿ ತಿಂಡಿಗಳ ಬೆನ್ನೆಲುಬಾಗಿ ನಿಂತಿದೆ. ನಾವು ಅದನ್ನ ಬಹಳ ಹೆಮ್ಮೆಯಿಂದ ಪ್ರೋತ್ಸಾಹಿಸುತ್ತೇವೆ ಎಂದಿದ್ದಾರೆ.

ಈ ಹಿಂದೆ ರಾಜ್ಯದ ಅಸಾಧಾರಣ ಡೈರಿ ಬ್ರ್ಯಾಂಡ್ ನಂದಿನಿಯನ್ನ ಕೊಲ್ಲಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಶುಕ್ರವಾರ(ಏ.7) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ” ಕನ್ನಡಿಗರು ಅಮುಲ್ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು” ಎಂದು ಹೇಳಿದ್ದರು. ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ ಮತ್ತು ಗುಜರಾತ್‌ನ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ ಅಮುಲ್ ನಡುವಿನ ವಿಲೀನದ ಊಹಾಪೋಹಗಳ ನಂತರ ಮಾತನಾಡಿದ ಅವರು ‘ನಾಡಿನ ರೈತರ ಶ್ರೇಯೋಭಿವೃದ್ಧಿಗಾಗಿ ನಿರ್ಮಿಸಿರುವ ಕೆಎಂಎಫ್‌ನ ಕಬಳಿಕೆಯನ್ನ ಎಲ್ಲ ಕನ್ನಡಿಗರು ಒಕ್ಕೊರಲಿನಿಂದ ವಿರೋಧಿಸಬೇಕು. ಅಮುಲ್ ಉತ್ಪನ್ನಗಳನ್ನು ಖರೀದಿಸದಂತೆ ಎಲ್ಲ ಕನ್ನಡಿಗರು ಪ್ರತಿಜ್ಞೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಹೇಳಿದ್ದು, ಹಿಂದಿ ಹೇರಿಕೆಯಿಂದ ಭಾಷಾ ದ್ರೋಹ, ರಾಜ್ಯದ ಗಡಿಯಲ್ಲಿ ಅತಿಕ್ರಮ ಪ್ರವೇಶ ಮಾಡುವ ಮೂಲಕ ಭೂ ದ್ರೋಹದ ಜತೆಗೆ ಲಕ್ಷಾಂತರ ಜನರ ಜೀವನಾಧಾರವಾಗಿರುವ ಕರ್ನಾಟಕ ಹಾಲು ಮಹಾಮಂಡಳಿಯನ್ನು (ಕೆಎಂಎಫ್) ಬಂದ್ ಮಾಡುವ ಮೂಲಕ ಬಿಜೆಪಿ ಸರಕಾರ ರೈತರಿಗೆ ದ್ರೋಹ ಬಗೆಯಲು ಹೊರಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಅಮುಲ್ ರಾಜ್ಯದ ಡೈರಿ ಮಾರುಕಟ್ಟೆಗೆ ಪ್ರವೇಶಿಸುವುದನ್ನು ತಡೆಯಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದರು.

ಇದನ್ನೂ ಓದಿ:KMF vs Amul: ಕೆಎಂಎಫ್ ಎದುರು ಸೆಣಸಿ ಗೆಲ್ಲಲು ಅಮುಲ್​ಗೆ ಆಗುತ್ತಾ? ಎರಡು ದೈತ್ಯ ಹಾಲು ಉತ್ಪಾದಕರ ಮಧ್ಯೆ ಒಂದು ಹೋಲಿಕೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಹಕಾರ ಸಚಿವಾಲಯವನ್ನು ಸಹ ನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಜನಾಭಿಪ್ರಾಯ ಸಂಗ್ರಹಿಸಬೇಕು ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್​​ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜ್ಯದಲ್ಲಿ ಬಿಜೆಪಿ ದುರ್ಬಲ ನಾಯಕತ್ವವೇ ಕೆಎಂಎಫ್ ವ್ಯವಹಾರದಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದರು. ಇನ್ನು ಅಮುಲ್​ ಬುಧವಾರ ಬೆಂಗಳೂರಿಗೆ ಬರುತ್ತಿರುವುದು ತಾಜಾತನದ ಅಲೆ ಎಂದು ಟ್ವೀಟ್ ಮಾಡಿತ್ತು.