ವಿಜಯನಗರ: ಅನ್ಯ ಜಾತಿ ಯುವಕನನ್ನು ಪ್ರೀತಿಸಿದ ಯುವತಿ; ಪೋಷಕರಿಂದ ಮರ್ಯಾದಾ ಹತ್ಯೆ ಶಂಕೆ

|

Updated on: May 13, 2021 | 10:28 AM

ಯಡಿಹಳ್ಳಿ ಗ್ರಾಮದ 18 ವರ್ಷದ ಪೂಜಾ ಎಂಬ ಯುವತಿ ಅದೇ ಗ್ರಾಮದ ಅನ್ಯ ಜಾತಿಯ ಯುವಕನೊಬ್ಬನನ್ನು ಪ್ರೀತಿಸಿದ್ದಳು ಎನ್ನಲಾಗುತ್ತಿತ್ತು. ಪ್ರೀತಿಸಿದ ಯುವಕನ ಜೊತೆ ಪೂಜಾ ಮನೆ ಬಿಟ್ಟು ಹೋಗಿದ್ದಳು. ಯುವತಿಯ ಸಂಬಂಧಿಕರು ಹಾಗೂ ಕುಟುಂಬಸ್ಥರು ಇಬ್ಬರನ್ನು ಹಿಡಿದು ಮನೆಗೆ ಕರೆತಂದಿದ್ದರು.

ವಿಜಯನಗರ: ಅನ್ಯ ಜಾತಿ ಯುವಕನನ್ನು ಪ್ರೀತಿಸಿದ ಯುವತಿ; ಪೋಷಕರಿಂದ ಮರ್ಯಾದಾ ಹತ್ಯೆ ಶಂಕೆ
ಹತ್ಯೆಯಾದ ಯುವತಿ ಪೂಜಾ
Follow us on

ದಾವಣಗೆರೆ: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಹಿನ್ನೆಲೆ ವಿಜಯನಗರ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಯುವತಿ ಪೋಷಕರು ತನ್ನ ಮಗಳಿಗೆ ವಿಷ ಕುಡಿಸಿ ಯುವತಿಯನ್ನು ಸುಟ್ಟು ಹಾಕಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಯಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣ ಹಲವಾಗಿಲು ಠಾಣೆಯಲ್ಲಿ ದಾಖಲಾಗಿದೆ.

ಯಡಿಹಳ್ಳಿ ಗ್ರಾಮದ 18 ವರ್ಷದ ಪೂಜಾ ಎಂಬ ಯುವತಿ ಅದೇ ಗ್ರಾಮದ ಅನ್ಯ ಜಾತಿಯ ಯುವಕನೊಬ್ಬನನ್ನು ಪ್ರೀತಿಸಿದ್ದಳು ಎನ್ನಲಾಗುತ್ತಿತ್ತು. ಪ್ರೀತಿಸಿದ ಯುವಕನ ಜೊತೆ ಪೂಜಾ ಮನೆ ಬಿಟ್ಟು ಹೋಗಿದ್ದಳು. ಯುವತಿಯ ಸಂಬಂಧಿಕರು ಹಾಗೂ ಕುಟುಂಬಸ್ಥರು ಇಬ್ಬರನ್ನು ಹಿಡಿದು ಮನೆಗೆ ಕರೆತಂದಿದ್ದರು. ಜೊತೆಗೆ ಯುವಕನನ್ನು ಬೆದರಿಸಿ ಊರು ಬಿಟ್ಟು ಕಳುಹಿಸಿದ ಯುವತಿ ಪೋಷಕರು ಪೂಜಾಳಿಗೆ ವಿಷ ಕುಡಿಸಿ ಕೆರೆ ಬಳಿ ಸುಟ್ಟು ಹಾಕಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಸದ್ಯ ಸಾಕ್ಷಿ ನಾಶ ಮಾಡದ ಆರೋಪದಡಿ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೊರೊನಾ ಸೋಂಕಿತನ ಮೇಲೆ ಹಲ್ಲೆ
ಮೈಸೂರು: ಹೊಂ ಕ್ವಾರಂಟೈನ್ ಆಗಿದ್ದ ಸೋಂಕಿತ ವ್ಯಕ್ತಿ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಾರಪುರ ಗ್ರಾಮದಲ್ಲಿ ನಡೆದಿದೆ. ಹೊಂ ಕ್ವಾರಂಟೈನ್ ಆಗಿದ್ದ ಕೊವಿಡ್ ಸೋಂಕಿತ ಯುವಕ ಮನೆಯಿಂದ ಹೊರ ಬಂದ ಕಾರಣ ಜನರ ಗುಂಪು ಕಲ್ಲಿನಿಂದ ಹಲ್ಲೆ ನಡೆಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಕಲ್ಲಿನಿಂದ ಹೊಡೆದ ಪರಿಣಾಮ ಕೊರೊನಾ ಸೋಂಕಿತ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಕಳೆದ ರಾತ್ರಿ 8.30 ಕ್ಕೆ ನಡೆದಿದೆ.

ಇದನ್ನೂ ಓದಿ

ಭಾರಿ ಗಾಳಿ, ಮಳೆಗೆ ಮೆಣಸಿಕಾಯಿ ಬೆಳೆ ನಾಶ; ಹೆಚ್ಚು ನಿರೀಕ್ಷೆಯಲ್ಲಿದ್ದ ಮೈಸೂರು ರೈತ ಕಂಗಾಲು

ದ್ರಾವಿಡ್ ನಮ್ಮ ಸೂತ್ರವನ್ನು ಅನುಸರಿಸಿದ್ದಾರೆ ಅದಕ್ಕಾಗಿಯೇ ಟೀಂ ಇಂಡಿಯಾ ಇಷ್ಟು ಬಲಿಷ್ಠವಾಗಿದೆ; ಗ್ರೆಗ್ ಚಾಪೆಲ್

(suspected that parents murdered a young woman who loved a different caste young man in vijayanagar)