2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ.. ಮೊಳಕಾಲ್ಮೂರು ತಹಶೀಲ್ದಾರ್​ ACB ಬಲೆಗೆ

|

Updated on: Nov 30, 2020 | 5:52 PM

2 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಮೊಳಕಾಲ್ಮೂರು ತಹಶೀಲ್ದಾರ್​ ಹಾಗೂ ಕಂದಾಯ ಅಧಿಕಾರಿಯೊಬ್ಬರು ACB ಬಲೆಗೆ ಬಿದ್ದಿದ್ದಾರೆ.

2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ.. ಮೊಳಕಾಲ್ಮೂರು ತಹಶೀಲ್ದಾರ್​ ACB ಬಲೆಗೆ
ಮೊಳಕಾಲ್ಮೂರು ತಹಶೀಲ್ದಾರ್ ಮಲ್ಲಿಕಾರ್ಜುನ (ಎಡ); ಮೊಳಕಾಲ್ಮೂರು ಪಟ್ಟಣ ಕಚೇರಿ (ಬಲ)
Follow us on

ಚಿತ್ರದುರ್ಗ: 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಮೊಳಕಾಲ್ಮೂರು ತಹಶೀಲ್ದಾರ್​ ಹಾಗೂ ಕಂದಾಯ ಅಧಿಕಾರಿಯೊಬ್ಬರು ACB ಬಲೆಗೆ ಬಿದ್ದಿದ್ದಾರೆ. ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ACB ಬಲೆಗೆ ಸಿಲುಕಿದ್ದಾರೆ.

ತಹಶೀಲ್ದಾರ್ ಮಲ್ಲಿಕಾರ್ಜುನ ಹಾಗೂ RI ಉಮೇಶ್​ರನ್ನು ACB ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ರಸ್ತೆ ನಿರ್ಮಾಣ ಗುತ್ತಿಗೆದಾರ ಪ್ರೀತಂ ಬಳಿ 2 ಲಕ್ಷ ರೂಪಾಯಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಲಂಚ ಸ್ವೀಕರಿಸುತ್ತಿದ್ದ ವೇಳೆ ACB ಅಧಿಕಾರಿಗಳು ದಾಳಿ ನಡೆಸಿದರು ಎಂದು ತಿಳಿದುಬಂದಿದೆ. ACB ಎಸ್​.ಪಿ ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಯಿತು.

Published On - 5:40 pm, Mon, 30 November 20