ತಾಂತ್ರಿಕ ಸಲಹಾ ಸಮಿತಿ ಸಭೆ ಮುಕ್ತಾಯ: Night Curfew ಜಾರಿ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದೇನು?

| Updated By: ಸಾಧು ಶ್ರೀನಾಥ್​

Updated on: Dec 23, 2020 | 12:26 PM

ಶಾಲೆ ಆರಂಭ, ನೈಟ್​ ಕರ್ಫ್ಯೂ ಸೇರಿ ಹಲವು ವಿಚಾರಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ನೈಟ್ ಕರ್ಫ್ಯೂ ಮಾಡಿದರೂ ಯಾವ ಸ್ವರೂಪದಲ್ಲಿ ಮಾಡಬೇಕು ಎಂಬ ಬಗ್ಗೆಯೂ ತಜ್ಞರ ಜತೆ ಚರ್ಚೆ ನಡೆಸಲಾಗಿದೆ.

ತಾಂತ್ರಿಕ ಸಲಹಾ ಸಮಿತಿ ಸಭೆ ಮುಕ್ತಾಯ: Night Curfew ಜಾರಿ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದೇನು?
ಡಾ.ಕೆ.ಸುಧಾಕರ್​
Follow us on

ಬೆಂಗಳೂರು: ಕೊರೊನಾ ರೂಪಾಂತರ ವೈರಸ್ ಪ್ರಸರಣದ ಆತಂಕ ರಾಜ್ಯದಲ್ಲೂ ಶುರುವಾದ ಬೆನ್ನಲ್ಲೇ ಇಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಿತು.

ಸಭೆ ಬಳಿಕ ಮಾತನಾಡಿದ ಡಾ.ಸುಧಾಕರ್​, ಈ ತಾಂತ್ರಿಕ ಸಲಹಾ ಸಮಿತಿ ಸಭೆಯ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸುತ್ತೇವೆ. ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಶಾಲೆ ಆರಂಭ, ನೈಟ್​ ಕರ್ಫ್ಯೂ ಸೇರಿ ಹಲವು ವಿಚಾರಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ನೈಟ್ ಕರ್ಫ್ಯೂ ಮಾಡಿದರೂ ಯಾವ ಸ್ವರೂಪದಲ್ಲಿ ಮಾಡಬೇಕು ಎಂಬ ಬಗ್ಗೆಯೂ ತಜ್ಞರ ಜತೆ ಚರ್ಚೆ ನಡೆಸಲಾಗಿದೆ.

ಶಾಲೆ ಪ್ರಾರಂಭ ಮಾಡುವ ಬಗ್ಗೆಯೂ ಸಲಹೆ ಪಡೆಯಲಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆಯೂ ಮುಖ್ಯಮಂತ್ರಿ ಯಡಿಯೂರಪ್ಪಗೆ ವರದಿ ಸಲ್ಲಿಸಿ, ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಲಾಗುವುದು. ನೈಟ್​ ಕರ್ಫ್ಯೂ ನಿರ್ಧಾರ ಸಿಎಂಗೆ ಬಿಟ್ಟಿದ್ದು ಎಂದರು.

ಕೊರೊನಾ ರೂಪಾಂತರ ವೈರಸ್​​ಗೆ ಯಾರೂ ಆತಂಕ ಪಡೋದು ಬೇಡ: ಡಾ ಮಂಜುನಾಥ್